ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವ ; ಈ ಪವಾಡ ವಿಜ್ಞಾನ ತರ್ಕಕ್ಕೆ ಸಿಗಲ್ಲ
ನ್ಯೂಸ್ ಆ್ಯರೋ: ದಕ್ಷಿಣ ಮಂದಾಕಿನಿ ಕಾವೇರಿ ನದಿ ಕೊಡಗು ಮತ್ತು ಹಳೇ ಮೈಸೂರು ಭಾಗದ ಜೀವನಾಡಿಯಾಗಿದೆ. ಇಂದು (ಅ.17) ಬೆಳಗ್ಗೆ 7.40ರ ಸುಮಾರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಕಾವೇರಿ ತೀರ್ಥೋದ್ಭವಕ್ಕೆ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಬ್ರಹ್ಮಕುಂಡಿಕೆ ಬಳಿ ಸೇರಿದ್ದಾರೆ.
ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ತಲಕಾವೇರಿಯಲ್ಲಿ ಇಂದು (ಅ.17) ತೀರ್ಥೋದ್ಭವ ಆಗಿದೆ. ಬೆಳಗ್ಗೆ 7.40ರ ಸುಮಾರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ.
ತೀರ್ಥೋದ್ಭವ ಬ್ರಹ್ಮಕುಂಡಿಕೆಯಲ್ಲಿ ಬಳಿ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ತೀರ್ಥೋದ್ಭವ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಹಿಡಿದು ಆಗಮಿಸಿದ್ದು, ಕಾವೇರಿ ಮಾತೆಗೆ ಆರತಿ ಬೆಳಗಿ ಸ್ವಾಗತಿಸಿದ್ದಾರೆ.
ವಿಜ್ಞಾನದ ತರ್ಕಕ್ಕೆ ನಿಲುಕದ ವಿಷಯಗಳಿವು:
ತಲಾ ಕಾವೇರಿ ಕೊಡಗಿನವರ ದೇವತೆ, ಪ್ರತಿಯೊಂದು ಕ್ಷಣ, ಪ್ರತಿಯೊಂದು ಶುಭ ಕಾರ್ಯವನ್ನು ಕಾವೇರಿಯನ್ನು ಸ್ಮರಿಸುವ ಕೊಡಗಿನವರು ಈ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸುತ್ತಾಳೆ. ಕಾವೇರಿ ತೀರ್ಥೋದ್ಭವ ವಿಜ್ಞಾನ ತರ್ಕಗಳಿಗೆ ಸಿಗಲ್ಲ, ಇದೊಂದು ಪವಾಡವೇ ಸರಿ. ವರ್ಷದ ಇತರ ಯಾವುದೇ ದಿನದಲ್ಲಿ ಈ ರೀತಿ ಕಂಡು ಬರುವುದಿಲ್ಲ, ತುಲಾ ಸಂಕ್ರಮಣದಂದು ಮಾತ್ರ ತೀರ್ಥ ಉಕ್ಕಿ ಬರುವುದು, ಕಾವೇರಿ ತೀರ್ಥ ಒಂದು ನಿಗದಿತ ಸಮಯದಲ್ಲಿ ಉಕ್ಕಿ ಬರುತ್ತದೆ, ಕಳೆದ ವರ್ಷ ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡಿದ್ದಳು, ಈ ಬಾರಿ 07:40ಕ್ಕೆ ಕಾವೇರಿ ದರ್ಶನ ನೀಡಿದ್ದಾಳೆ.
Leave a Comment