ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ತುಟ್ಟಿ ಭತ್ಯೆ ಹೆಚ್ಚಳ, ಯಾವಾಗಿನಿಂದ ಜಾರಿ?
ನ್ಯೂಸ್ ಆ್ಯರೋ: ರಾಜ್ಯ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ನೌಕರರಿಗೆ ಇದೀಗ ತುಟ್ಟಿಭತ್ಯೆ ಹೆಚ್ಚಿಸಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಅವರ ವೇತನಕ್ಕನುಗುಣವಾಗಿ ವರ್ಷಂಪ್ರತಿ ಎರಡು ಬಾರಿ ಡಿಎ ಹೆಚ್ಚಿಸಲಾಗುತ್ತದೆ. ಅದೇ ರೀತಿ ಇದೀಗ ಈ ಬಾರಿ ಹೆಚ್ಚಳವಾಗಿದ್ದು, ರಾಜ್ಯ ನೌಕರರಿಗೆ ರಿಲೀಫ್ ಸಿಕ್ಕಂತಾಗಿದೆ.
ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಮೂಲಕ ಮೂಲ ವೇತನದ 8.50% ದಿಂದ 10.75%ಕ್ಕೆ ಪರಿಷ್ಕರಿಸಿ ಡಿಎ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಆದೇಶ ಜುಲೈ 1, 2024ರಿಂದ ಪರಿಷ್ಕರಿಸಿ ಜಾರಿಗೆ ತರುವಂತೆ ಆದೇಶ ಹೊರಡಿಸಿದ್ದಾರೆ.
ಡಿಎ ಎಂದರೇನು? :
ಕಾಲಾನಂತರದಲ್ಲಿ ಹೆಚ್ಚುತ್ತಿರುವ ಹಣದುಬ್ಬರವು ಸರ್ಕಾರಿ ನೌಕರರ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಆರ್ಥಿಕ ತೊಂದರೆಗಳಿಂದ ಸರ್ಕಾರಿ ನೌಕರರಿಗೆ ಸಮಸ್ಯೆ ಆಗಬಾರದು, ಇದರ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಈ ತುಟ್ಟಿಭತ್ಯೆ ನೀಡಲಾಗುತ್ತದೆ. ಮೂಲ ವೇತನದ ಶೇಕಡಾವಾರು ಮೊತ್ತವನ್ನು ಡಿಎ ಎಂದು ನೀಡಲಾಗುತ್ತದೆ.
ಹೀಗೆ ಹೆಚ್ಚಿಸಿದ ಹಣಕ್ಕೆ ತಕ್ಕಂತೆ ಸಂಬಳವೂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ, ಹಣದುಬ್ಬರದಿಂದ ಬೆಲೆಗಳು ಎಷ್ಟು ಏರಿಕೆಯಾಗಿದೆ ಎಂದು ನೋಡಿಕೊಂಡು ಈ ಡಿಎ ಮೊತ್ತವನ್ನು ಸಹ ಹೆಚ್ಚಿಸಲಾಗುತ್ತದೆ.
ಸಾಮಾನ್ಯವಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳವನ್ನು ಘೋಷಿಸಲಾಗುತ್ತದೆ. ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಹೆಚ್ಚಳವಾಗುತ್ತಿದ್ದಂತೆ ರಾಜ್ಯ ಸರ್ಕಾರಿ ನೌಕರರು ಕಾದು ಕುಳಿತಿರುತ್ತಾರೆ. ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ರಿಲೀಫ್ ಸಿಕ್ಕಂತಾಗಿದೆ. ಇನ್ನು ಡಿಎ ಹೆಚ್ಚಳದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿತ್ತು. ಇದೀಗ ಈ ಮನವಿಗೆ ಸರ್ಕಾರ ಸ್ಪಂದಿಸಿದೆ.
Leave a Comment