ಎಲ್ಲೆ ಮೀರಿದ ಜನರ ಕ್ರೌರ್ಯತೆ; ರಾಮಾಯಣ ನಾಟಕದಲ್ಲಿ ಹಸಿ ಹಂದಿ ಮಾಂಸ ತಿಂದ ನಟ
ಭುವನೇಶ್ವರ: ಇತ್ತೀಚಿನ ದಿನಗಳಲ್ಲಿ ಜನರ ಕ್ರೌರ್ಯತೆ ಎಲ್ಲೆ ಮೀರಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಒಡಿಶಾದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ರಾಮಾಯಣದಲ್ಲಿ ರಾಕ್ಷಸನ ಪಾತ್ರವನ್ನು ನಿರ್ವಹಿಸುತ್ತಿದ್ದ 45 ವರ್ಷದ ರಂಗಭೂಮಿ ನಟನನ್ನು ವೇದಿಕೆಯ ಮೇಲೆ ಜೀವಂತ ಹಂದಿಯ ಹೊಟ್ಟೆಯನ್ನು ಕಿತ್ತು ಅದರ ಮಾಂಸವನ್ನು ಸೇವಿಸಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಮವಾರ ವಿಧಾನಸಭೆಯಲ್ಲಿ ಖಂಡನೆ ವ್ಯಕ್ತವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಆಡಳಿತಾರೂಢ ಬಿಜೆಪಿ ಸದಸ್ಯರಾದ ಬಾಬು ಸಿಂಗ್ ಮತ್ತು ಸನಾತನ ಬಿಜುಲಿ ಅವರು ವಿಧಾನಸಭೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಸಹ ಇದನ್ನು ಖಂಡಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದ್ದಾರೆ.
ಪ್ರಾಣಿ ಕ್ರೌರ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯ ಆರೋಪದ ಮೇಲೆ ಗೌಡ ಮತ್ತು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆರ್ಹಾಮ್ಪುರ ವಿಭಾಗೀಯ ಅರಣ್ಯ ಅಧಿಕಾರಿ ಸನ್ನಿ ಖೋಕರ್ ಅವರು, “ಈ ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ತನಿಖೆ ನಡೆದಿದೆ. ವಿಶೇಷವಾಗಿ ನಾಟಕದ ಸಮಯದಲ್ಲಿ ಜೀವಂತ ಪ್ರಾಣಿಗಳನ್ನು ಪ್ರದರ್ಶಿಸಲು ಕಾರಣರಾದವರನ್ನು ಗುರುತಿಸಲು ತನಿಖೆ ಮಾಡಿದ್ದಾರೆ.
ಕಂಜಿಯಾನಲ್ ಯಾತ್ರಾ ಉತ್ಸವದ ಸಂದರ್ಭದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ನಾಟಕ ತಂಡವು ಈ ಭಯಾನಕ ಕೃತ್ಯವನ್ನು ಪ್ರದರ್ಶಿಸಿದೆ ಎಂದು ಹಿಂಜಿಲಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಶ್ರೀನಿಬಾಸ್ ಸೇಥಿ ಹೇಳಿದ್ದಾರೆ. ಆತಂಕಕಾರಿ ಸನ್ನಿವೇಶದಲ್ಲಿ, ಹಂದಿಯನ್ನು ವೇದಿಕೆಯ ಛಾವಣಿಗೆ ಕಟ್ಟಲಾಗಿತ್ತು, ನಂತರ ಗೌಡ ಚಾಕುವನ್ನು ಬಳಸಿ ಅದರ ಹೊಟ್ಟೆ ಬಗೆದು ನಂತರ ಅದರ ಅಂಗಗಳ ಭಾಗಗಳನ್ನು ಹಸಿಯಾಗಿ ಪ್ರೇಕ್ಷಕರ ಮುಂದೆ ತಿಂದಿದ್ದಾನೆ.
ಥಿಯೇಟರ್‌ನಲ್ಲಿ ಹಂದಿಯನ್ನು ಕೊಂದು ಮಾಂಸ ತಿಂದ ರಂಗಭೂಮಿ ನಟನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ ಎಂದು ಹಿಂಜಿಲಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶ್ರೀನಿಬಾಸ್ ಸೇಥಿ ತಿಳಿಸಿದ್ದಾರೆ.ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವುದಾಗಿ ತಿಳಿಸಿದ್ದಾರೆ.
Leave a Comment