Bangalore : ಕೈತುಂಬಾ ಸಂಬಳ ಪಡೆಯುತ್ತಿದ್ದ ಮಹಿಳಾ ಟೆಕ್ಕಿ ಆತ್ಮಹತ್ಯೆ – ಗಂಡನನ್ನು ವಶಕ್ಕೆ ಪಡೆದ ಪೋಲಿಸರು, ಸಾವಿಗೆ ಕಾರಣ ಬಯಲು
ನ್ಯೂಸ್ ಆ್ಯರೋ : ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿಯೊಬ್ಬರು (Techie) ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ನಡೆದಿದೆ.
ಪೂಜಾ(22) ಆತ್ಮಹತ್ಯೆ ಶರಣಾದ ವಿವಾಹಿತೆ. ಪೂಜಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೂಜಾ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತೆಗ್ಗಿ ಬಸಾಪುರ ಮೂಲದವರು. 2022ರಲ್ಲಿ ಸುನೀಲ್ ಎಂಬುವವರ ಜತೆಗೆ ಪೂಜಾಳ ವಿವಾಹವಾಗಿತ್ತು. ಆದರೆ ಪತಿ ಸುನೀಲ್ ಹಾಗೂ ಮೈದುನಾ ಅನಿಲ್ ವರದಕ್ಷಿಣಿ ಕಿರುಕುಳ ಆರೋಪ ಕೇಳಿ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತ್ಮಹತ್ಯೆಗೀಡಾದ ಟೆಕ್ಕಿ ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಮೂರು ಎಕರೆ ಜಮೀನು, ಚಿನ್ನಾಭರಣ ತರುವಂತೆ ಪತಿ ಸುನೀಲ್ ಕಿರುಕುಳ ನೀಡುತ್ತಿದ್ದಂತೆ.
ಪೂಜಾಗೆ ಬರುತ್ತಿದ್ದ 40 ಸಾವಿರ ಸಂಬಳದಲ್ಲಿ ದಿನಕ್ಕೆ 500 ರೂ. ಹಣ ಮಾತ್ರ ಖರ್ಚಿಗೆ ನೀಡುತ್ತಿದ್ದನಂತೆ. ಉಳಿದ ಸಂಬಳ ಭಾಮೈದುನಾ ಅನಿಲ್‌ಗೆ ನೀಡಬೇಕಿತ್ತು. ಪೂಜಾಗೆ ಮನೆಯಲ್ಲಿ ಊಟ ಮಾಡುವ ವಿಚಾರಕ್ಕೂ ಅವಮಾನ ಮಾಡುತ್ತಿದ್ದರಂತೆ.
ಪೂಜಾ ಊಟ ಮಾಡುವ ವೇಳೆ ಜಾಸ್ತಿ ತಿನ್ನಬೇಡ ದಪ್ಪ ಆಗ್ತಿಯಾ ಎನ್ನುತ್ತಿದ್ದರಂತೆ. ಈ ಬಗ್ಗೆ ಪತಿ ಸುನೀಲ್ ಬಳಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಸುನೀಲ್‌ನನ್ನು ವಶಕ್ಕೆ ಪಡೆದು ಗಂಗಮ್ಮ ಗುಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Leave a Comment