ಕೊಲೆ ಯತ್ನ ಪ್ರಕರಣದಲ್ಲಿ ನಟ ತಾಂಡವ್ ಬಂಧನ; ಕಮಿಷನರ್ ದಯಾನಂದ್ ಹೇಳಿದ್ದೇನು?

commissioner-dayanand
Spread the love

ನ್ಯೂಸ್ ಆ್ಯರೋ:’ಜೋಡಿಹಕ್ಕಿ’ ಧಾರವಾಹಿ ಖ್ಯಾತಿಯ ನಟ ತಾಂಡವ್ ರಾಮ್ ನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಕ್ಕೆ ಬಂಧನ ಮಾಡಲಾಗಿದೆ. ಘಟನೆ ಕುರಿತು ಕಮಿಷನರ್ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಏರ್‌ಫೈರ್ ಮಾಡಿರೋದು ಗೊತ್ತಾಗಿದೆ ಎಂದಿದ್ದಾರೆ.

ನಿನ್ನೆ (ನ.18) ಸಂಜೆ ಈ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಆರೋಪಿ ತಾಂಡವ್‌ರನ್ನು ಈಗಾಗಲೇ ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ ಗನ್ ಸೀಜ್ ಮಾಡಲಾಗಿದೆ. ಸಿನಿಮಾಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರದಲ್ಲಿ ತಾಂಡವ್ ಮತ್ತು ನಿರ್ದೇಶಕ ಭರತ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂಬುದು ಪ್ರಾರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗುಂಡು ಹಾರಿಸಬೇಕು ಎಂಬ ದೃಷ್ಟಿಕೋನದಲ್ಲಿ ಹೀಗೆ ಮಾಡಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿದ್ದಾರೆ.

‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ಹೀರೋ ಆಗಿ ನಟಿಸುತ್ತಿದ್ದರು. ಈ ಚಿತ್ರಕ್ಕೆ ಭರತ್ ನಿರ್ದೇಶನ ಮಾಡುತ್ತಿದ್ದರು. ಕಳೆದ 2 ವರ್ಷಗಳಿಂದ ನಡೆಯುತ್ತಿದ್ದ ಸಿನಿಮಾ ಶೂಟಿಂಗ್, ನಿರ್ಮಾಪಕರು ಸಿಗದ ಹಿನ್ನೆಲೆ ಹಂತ ಹಂತವಾಗಿ ನಟ ತಾಂಡವ್ 6 ಲಕ್ಷ ಚಿತ್ರಕ್ಕೆ ಹೂಡಿಕೆ ಮಾಡಿದರು. ಪ್ರಸ್ತುತ ಹಾಸನದ ಕುಮಾರಸ್ವಾಮಿ ಎಂಬುವವರು ಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ.

ಬೇರೆ ನಿರ್ಮಾಪಕರು ಸಿಕ್ಕಿದರು ಕೂಡ ಸಿನಿಮಾ ಶೂಟಿಂಗ್ ಅನ್ನು ನಿರ್ದೇಶಕ ಭರತ್ ನಿಲ್ಲಿಸಿದರು. ಈ ಹಿನ್ನೆಲೆ ತಾವು ಕೊಟ್ಟಿದ್ದ 6 ಲಕ್ಷ ರೂ. ತಾಂಡವ್ ವಾಪಸ್ ಕೇಳಿದರು. ಹಣಕಾಸಿನ ವಿಚಾರ ಚರ್ಚಿಸುವ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನಟ ತಾಂಡವ್ ಗನ್ ಹಿಡಿದು ಭರತ್ ಕಡೆ ಗುಂಡು ಹಾರಿಸಿದ್ದಾರೆ. ಆದರೆ ಆ ಗುಂಡಿನ ದಾಳಿಯಿಂದ ಭರತ್ ತಪ್ಪಿಸಿಕೊಂಡಿದ್ದಾರೆ. ಇದೀಗ ಭರತ್ ದೂರಿನ ಮೇರೆಗೆ ತಾಂಡವ್‌ರನ್ನು ಚಂದ್ರಲೇಔಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!