ಫೋಟೋ, ವಿಡಿಯೋಗಳಿಂದ ಫೋನ್‌ನ ಸ್ಟೋರೇಜ್ ಫುಲ್ ಆಗಿದೆಯೇ? – ಈ ಟ್ರಿಕ್ಸ್ ಬಳಸಿ, ನಿಮ್ಮ ಫೋನ್ ‌ಸ್ಪೀಡ್ ವರ್ಕ್ ಆಗುತ್ತೆ..!!

ಫೋಟೋ, ವಿಡಿಯೋಗಳಿಂದ ಫೋನ್‌ನ ಸ್ಟೋರೇಜ್ ಫುಲ್ ಆಗಿದೆಯೇ? – ಈ ಟ್ರಿಕ್ಸ್ ಬಳಸಿ, ನಿಮ್ಮ ಫೋನ್ ‌ಸ್ಪೀಡ್ ವರ್ಕ್ ಆಗುತ್ತೆ..!!

ನ್ಯೂಸ್ ಆ್ಯರೋ : ಅನೇಕ ಕಂಪನಿಗಳು ಹೆಚ್ಚಿನ ರ್ಯಾಮ್ ಮತ್ತು ಸ್ಟೋರೇಜ್ ನೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನು ಕೂಡಾ ಜನರು ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಫೋಟೋಗಳು ಅಥವಾ ವೀಡಿಯೊಗಳಿಂದಾಗಿ ಸ್ಟೋರೇಜ್ ತುಂಬಿ ಹೋಗುತ್ತದೆ. ಹೆವಿ ಅಪ್ಲಿಕೇಶನ್‌ಗಳಿಂದಾಗಿಯೂ, ಸ್ಟೋರೇಜ್ ಫುಲ್ ಆಗುತ್ತದೆ. ಈ ಕಾರಣದಿಂದಾಗಿ ಫೋನ್ ಹಾಂಗ್ ಆಗಲು ಆರಂಭವಾಗುತ್ತದೆ. ಮತ್ತು ಕಾರ್ಯನಿರ್ವಹಿಸುವಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಈ ಸಮಸ್ಯೆಗೂ ಸುಲಭ ಪರಿಹಾರವಿದೆ. ಇದನ್ನು ಅನುಸರಿಸಿದರೆ, ಫೋನ್ ನಲ್ಲಿ ಸ್ಪೇಸ್ ಸಮಸ್ಯೆಯೂ ಇರುವುದಿಲ್ಲ. ಫೋನ್ ಹ್ಯಾಂಗ್ ಕೂಡಾ ಆಗುವುದಿಲ್ಲ.

ಕ್ಲಿನಿಂಗ್ ಆ್ಯಪ್

ನಿಮ್ಮ ಫೋನ್‌ನ ಮೆಮೊರಿಯನ್ನು ಖಾಲಿ ಮಾಡಬೇಕಾದರೆ ಪ್ಲೇ ಸ್ಟೋರ್‌ಗೆ ಹೋಗಿ ಕ್ಲಿನಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಪ್ಲೇ ಸ್ಟೋರ್‌ನಲ್ಲಿ ಅನೇಕ ಕ್ಲಿನಿಂಗ್ ಆ್ಯಪ್ ಗಳು ಲಭ್ಯವಿದೆ. ಇದು ನಿಮ್ಮ ಫೋನ್‌ನ ಮೆಮೊರಿಯನ್ನು ಖಾಲಿ ಮಾಡುತ್ತದೆ. ಈ ಅಪ್ಲಿಕೇಶನ್‌ಗಳು ಜಂಕ್ ಫೈಲ್‌ಗಳು, ಡ್ಯುಪ್ಲಿಕೆಟ್ ಫೈಲ್‌ಗಳು ಮತ್ತು ಅನೇಕ ದೊಡ್ಡ ಫೈಲ್‌ಗಳನ್ನು ಡಿಲೀಟ್ ಮಾಡುತ್ತವೆ. ಇದರಿಂದಾಗಿ ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಯುತ್ತದೆ.

ಕ್ಲೌಡ್ ಸ್ಟೋರೇಜ್ :

ಅನೇಕ ಕಂಪನಿಗಳು ಸ್ಮಾರ್ಟ್‌ಫೋನ್‌ಗಳೊಂದಿಗೆ ಕ್ಲೌಡ್ ಸ್ಟೋರೇಜ್ ನೀಡುತ್ತವೆ. ನೀವು ಇದನ್ನು ಬಳಸಬಹುದು. ನಿಮ್ಮ ಫೋನ್‌ನಲ್ಲಿ ನೀವು ಹೆಚ್ಚಿನ ಫೋಟೋಗಳು ಅಥವಾ ವೀಡಿಯೊಗಳನ್ನು ಹೊಂದಿದ್ದರೆ, ಅವುಗಳನ್ನು ಇಲ್ಲಿ ಸೇವ್ ಮಾಡಬಹುದು. ಇದು ನಿಮ್ಮ ಫೋನ್‌ನ ಮೆಮೊರಿಯನ್ನು ಕಡಿಮೆ ಮಾಡುತ್ತದೆ. ಇನ್ನು ಅಗತ್ಯವಿರದ ಫೋಟೋ ಅಥವಾ ವೀಡಿಯೊಗಳನ್ನು ಡಿಲೀಟ್ ಮಾಡಬಹುದು.

ಟೆಂಪರರಿ ಫೈಲ್‌ಗಳನ್ನು ಡಿಲೀಟ್ ಮಾಡಿ

ನಮ್ಮ ಫೋನ್‌ನಲ್ಲಿ ಹಲವು ರೀತಿಯ ಟೆಂಪರರಿ ಫೈಲ್‌ಗಳಿರುತ್ತವೆ. ಅದನ್ನು ಡಿಲೀಟ್ ಮಾಡದಿದ್ದರೂ, ಫೋನ್‌ನ ಮೆಮೊರಿ ತುಂಬುತ್ತದೆ. ಫೋನ್‌ನಲ್ಲಿರುವ ಸ್ಟೋರೇಜ್ ಅನ್ನು ತೆರವುಗೊಳಿಸಿದರೆ, ಫೋನ್‌ನಲ್ಲಿ ಉತ್ತಮ ಸ್ಟೋರೇಜ್ ಸ್ಪೇಸ್ ಇರುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *