
ಇನ್ಮುಂದೆ ರಿಲಯನ್ಸ್ ಜಿಯೋದಲ್ಲಿ ಅಗ್ಗದ ರೀಚಾರ್ಜ್ ಪ್ಲಾನ್ ₹119 ಇರಲ್ಲ – ಸದ್ಯದ ಕಡಿಮೆ ರೀಚಾರ್ಜ್ ಪ್ಲಾನ್‌ನ ಮಾಹಿತಿ ಇಲ್ಲಿದೆ
- ಟೆಕ್ ನ್ಯೂಸ್
- August 25, 2023
- No Comment
- 41
ನ್ಯೂಸ್ ಆ್ಯರೋ : ರಿಲಯನ್ಸ್ ಜಿಯೋ ತನ್ನ ಡೇಟಾ ಯೋಜನೆಗಳ ಪಟ್ಟಿಯಿಂದ ಅತೀ ಅಗ್ಗದ ರೀಚಾರ್ಜ್ ಪ್ಲಾನ್ ಆಗಿರುವ 14ದಿನಗಳ ರೂ.119 ಪ್ಲ್ಯಾನ್ ಅನ್ನು ತೆಗೆದುಹಾಕಿದೆ. ಟೆಲಿಕಾಂ ಟಾಕ್ ವರದಿ ಮಾಡಿದಂತೆ, ಸೇವಾ ಪೂರೈಕೆದಾರ ಜಿಯೋ ಎಲ್ಲಾ ಟೆಲಿಕಾಂ ವಲಯಗಳಿಂದ ತನ್ನ ಅಗ್ಗದ ರೂ 119 ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ.
ಅದಲ್ಲದೆ ಜಿಯೋ ವೆಬ್‌ಸೈಟ್‌ನಿಂದ ಹಾಗೂ ಮೈ ಜಿಯೋ ಆಪ್‌ನಿಂದಲೂ ಈ ರಿಚಾರ್ಜ್ ಪ್ಲಾನ್ ಅನ್ನು ತೆಗೆಯಲಾಗಿದೆ. ಇನ್ನೂ ಈ ಪ್ಲಾನ್‌ನ ಬಗ್ಗೆ ತಿಳಿದುಕೊಳ್ಳುವುದಾದರೆ.
₹119 ರೀಚಾರ್ಜ್‌ನಲ್ಲಿ ದಿನಕ್ಕೆ 1.5ಜಿಬಿ ಡೇಟಾ ಜತೆಗೆ ಅನಿಯಮಿತ ಕರೆ ಪ್ರಯೋಜನಗಳು ಇದ್ದವು. ಈ ಯೋಜನೆ 14 ದಿನಗಳಾಗಿದ್ದು, ಚಂದಾದಾರರು ದಿನಕ್ಕೆ 100 ಎಸ್‌ಎಂಎಸ್ ಅನ್ನು ಸಹ ಪಡೆಯುತ್ತಿದ್ದರು.
ಆದರೀಗ, ಈ ಪ್ಲ್ಯಾನ್ ಅನ್ನು ಸ್ಥಗಿತಗೊಳಿಸಿದ ನಂತರ, ರಿಲಯನ್ಸ್ ಜಿಯೋ ನೀಡುವ ಅಗ್ಗದ ಯೋಜನೆಗೆ ₹149 ವೆಚ್ಚವಾಗುತ್ತದೆ. ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ₹119 ಡೇಟಾ ಪ್ಲಾನ್ ಅನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ.
ಸದ್ಯ ರಿಲಯನ್ಸ್ ಜಿಯೋನ ಅಗ್ಗದ ರೀಚಾರ್ಜ್ ಪ್ಲ್ಯಾನ್ ₹149:
ಜಿಯೋ ₹119ರ ರೀಚಾರ್ಜ್ ಪ್ಲಾನ್ ತೆಗೆದ ಬಳಿಕ ಸದ್ಯ ಜಿಯೋದಲ್ಲಿ ಅತೀ ಕಡಿಮೆಯ ರೀಚಾರ್ಜ್ ಪ್ಲಾನ್ ಎಂದರೆ ಅದು ₹149. ಇದರಲ್ಲಿ ದಿನಕ್ಕೆ 1ಜಿಬಿ ಡೇಟಾ ಹಾಗೂ ದಿನಕ್ಕೆ 100 ಎಸ್‌ಎಂಎಸ್‌ಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಎಲ್ಲ ಪ್ರಯೋಜನಗಳನ್ನು 20 ದಿನಗಳ ಕಾಲ ಬಳಕೆದಾರರು ಆನಂದಿಸಿಕೊಳ್ಳಬಹುದು.
ಈ ಎಲ್ಲ ಪ್ರಯೋಜನಗಳ ಜತೆಗೆ ಜಿಯೋ ಬಳಕೆದಾರರು ಬಳಕೆದಾರರು ಜಿಯೋ ಸಿನೆಮಾ, ಜಿಯೋ ಟಿವಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುವ ಜಿಯೋ ಸೂಟ್ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ಸಹ ಪಡೆಯುತ್ತಾರೆ. ಆದರೆ, ಈ ಯೋಜನೆಯು ಚಂದಾದಾರರಿಗೆ ಅನಿಯಮಿತ 5G ಡೇಟಾ ಪ್ರಯೋಜನಗಳನ್ನು ನೀಡುವುದಿಲ್ಲ ಎಂಬುದು ಗಮರ್ನಾಹ ವಿಷಯವಾಗಿದೆ.