ಟ್ವಿಟರ್ ಗೆ ಠಕ್ಕರ್ ಕೊಡಲು ಮೆಟಾ ಸಜ್ಜು – ಥ್ರೆಡ್ಸ್ ಆ್ಯಪ್ ನಾಳೆ (ಜುಲೈ 6) ಬಿಡುಗಡೆ

ಟ್ವಿಟರ್ ಗೆ ಠಕ್ಕರ್ ಕೊಡಲು ಮೆಟಾ ಸಜ್ಜು – ಥ್ರೆಡ್ಸ್ ಆ್ಯಪ್ ನಾಳೆ (ಜುಲೈ 6) ಬಿಡುಗಡೆ

ನ್ಯೂಸ್ ಆ್ಯರೋ‌ : ಟ್ವಿಟರ್ ಗೆ ಪರ್ಯಾಯವಾಗಿ ಫೇಸ್‌ಬುಕ್‌ ಒಡೆತನದ ಮೆಟಾ ಕಂಪನಿ ಮೈಕ್ರೋ ಬ್ಲಾಗಿಂಗ್ ಆರಂಭಿಸಲು ಸಿದ್ದತೆ ನಡೆಸಿದ್ದು, ಈ ಹೊಸ ಆ್ಯಪ್ ಗೆ ಥ್ರೆಡ್ಸ್ ಎಂದ ಹೆಸರಿಡಲಾಗಿದೆ.

ಕಾರಣವೇನು?

ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಕಳೆದ ವರ್ಷ ಟ್ವಿಟರ್ ಸಂಸ್ಥೆಯನ್ನು ಕೊಂಡುಕೊಂಡಿದ್ದರು. ಆ ಬಳಿಕ ಒಂದೊಂದೇ ಷರತ್ತನ್ನು ಬಳಕೆದಾರರ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದೀಗ ಈ ಎಲ್ಲಾ ಸಮಸ್ಯೆಗಳ ಲಾಭ ಪಡೆಯಲು ಮೆಟಾ ಪ್ರಯತ್ನಿಸುತ್ತಿದೆ.

ಥ್ರೆಡ್ಸ್ ಆ್ಯಪ್ ಟ್ವಿಟರ್ ಗೆ ಪರ್ಯಾಯವಾಗಲಿದ್ದು, ಅದರಂತೆ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಪೋಸ್ಟ್ ಓದಬಹುದು, ಲೈಕ್, ಕಮೆಂಟ್, ಶೇರ್ ಮಾಡಬಹುದು. ಜೊತೆಗೆ ಇತರ ಬಳಕೆದಾರರನ್ನು ಫಾಲೋ ಕೂಡ ಮಾಡಬಹುದು. ಇದೇ ಗುರುವಾರ (ಜು. 6) ಬಿಡುಗಡೆಯಾಗುವ ಸಾಧ್ಯತೆ ಇದೆ.

ಥ್ರೆಡ್ ಆ್ಯಪ್ ನಲ್ಲಿ ಟ್ವಿಟರ್ ನಂತೆಯೇ ಚರ್ಚೆ ನಡೆಸಲು ಅವಕಾಶವಿದೆ. ಡೌನ್ ಲೋಡ್ ಮಾಡಲು ಸದ್ಯದಲ್ಲೇ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಇತ್ತೀಚೆಗೆ ಮಸ್ಕ್ ಒಂದು ದಿನಕ್ಕೆ ಟ್ವಿಟರ್ ನಲ್ಲಿ ಇಂತಿಷ್ಟೆ ಪೋಸ್ಟ್ ಗಳನ್ನು ಓದಬಹುದು ಎಂದು ಮಿತಿ ಹೇರಿ ಬಳಿಕ ಹೆಚ್ಚಿಸಿದರು. ಕಳೆದ ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೆಲ್ಲ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *