ಟ್ವಟರ್‌ನಲ್ಲಿ 10 ಲಕ್ಷ ಫಾಲೋವರ್ಸ್‌ ಹೊಂದಿದವರಿಗೆ ಮತ್ತೆ ಬ್ಲೂ ಟಿಕ್‌ – ನಿಯಮದಲ್ಲಿ ಮತ್ತೆ ಬದಲಾವಣೆ ತಂದ್ರಾ ಮಸ್ಕ್‌?

ಟ್ವಟರ್‌ನಲ್ಲಿ 10 ಲಕ್ಷ ಫಾಲೋವರ್ಸ್‌ ಹೊಂದಿದವರಿಗೆ ಮತ್ತೆ ಬ್ಲೂ ಟಿಕ್‌ – ನಿಯಮದಲ್ಲಿ ಮತ್ತೆ ಬದಲಾವಣೆ ತಂದ್ರಾ ಮಸ್ಕ್‌?

ನ್ಯೂಸ್‌ ಆ್ಯರೋ : ಟ್ವಿಟರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಪಡೆದ ಬಳಿಕ ಸಿಇಒ ಎಲಾನ್ ಮಸ್ಕ್ ಸಾಕಷ್ಟು ಬದಲಾವಣೆ ತಂದಿದ್ದರು. ಅದರಲ್ಲಿ ಬಳಕೆದಾರರ ಖಾತೆಗೆ ಬ್ಲೂ ಟಿಕ್ ಬೇಕೆಂದರೆ ಪಾವತಿ ಮಾಡುವಂತಹ ನಿಯಮವನ್ನು ಜಾರಿಗೆ ತಂದಿತ್ತು. ಆದರೆ, ಇದೀಗ ಟ್ವಿಟರ್ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರಿಗೆ ಮತ್ತೆ ಬ್ಲೂ ಟಿಕ್ ಸಿಗಲಿದೆ.

ಟ್ವಿಟರ್ ಬಹುತೇಕ ಎಲ್ಲಾ ಖಾತೆಗಳಿಂದ ಕೆಲ ದಿನಗಳ ಹಿಂದೆ ನೀಲಿ ಟಿಕ್ ಮಾರ್ಕ್ ಅನ್ನು ತೆಗೆದುಹಾಕಿತ್ತು. ಕೇವಲ ಪಾವತಿ ಮಾಡಿದ ಬಳಕೆದಾರರಿಗೆ ಮಾತ್ರವೇ ನೀಲಿ ಟಿಕ್ ಅನ್ನು ನೀಡುವಂತಹ ಚಂದಾದಾರಿಕೆಯನ್ನು ಆರಂಭಿಸಲಾಗುತ್ತು. ಇದರಿಂದ ಪಾವತಿ ಮಾಡದೇ ಹೋದ ಅನೇಕ ಸೆಲೆಬ್ರಿಟಿಗಳು, ಹೆಸರಾಂತ ವ್ಯಕ್ತಿಗಳು ಕೂಡಾ ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದರು. ಆದರೀಗ 10 ಲಕ್ಷಕ್ಕೂ ಅಧಿಕ ಫಾಲೊವರ್ಸ್ ಇರುವ ಬಳಕೆದಾರರು ನೀಲಿ ಟಿಕ್ ಮಾರ್ಕ್ ಅನ್ನು ಮರಳಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಸರಾಂತ ವ್ಯಕ್ತಿಗಳು, ಸೆಲೆಬ್ರೆಟಿಗಳು ಇತ್ತೀಚೆಗೆ ಟ್ವಿಟರ್‌ಗೆ ಹಣ ಪಾವತಿ ಮಾಡದೇ ಹೋಗಿದ್ದಕ್ಕಾಗಿ ಏಪ್ರಿಲ್ 20ರಂದು ತಮ್ಮ ಖಾತೆಯ ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದರು. ಬಾಲಿವುಡ್ ನಟರಾದ ಆಲಿಯಾ ಭಟ್, ಶಾರೂಖ್ ಖಾನ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಿಲಿಯನೇರ್ ಬಿಲ್ ಗೇಟ್ಸ್ ಸೇರಿದಂತೆ ಹಲವರು ಈ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಇದೀಗ ಅವರೆಲ್ಲರ ಖಾತೆಗಳಲ್ಲೂ ನೀಲಿ ಟಿಕ್ ಮತ್ತೆ ಗೋಚರವಾಗಿದೆ. ಆದರೆ, ಇವರೆಲ್ಲರೂ ತಮ್ಮ ಖಾತೆಯನ್ನು ಅಧಿಕೃತವಾಗಿ ಪರಿಶೀಲಿಸಲು ಪಾವತಿ ಮಾಡಿದ್ದಾರೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ.

ಮತ್ತೊಂದು ವಿಚಾರವೆಂದರೆ ನೀಲಿ ಟಿಕ್‌ಗೆ ಪಾವತಿ ಮಾಡುವ ಫೀಚರ್ ಬರುವುದಕ್ಕೂ ಮೊದಲೇ ನಿಧನರಾಗಿರುವ ಅನೇಕ ಹೆಸರಾಂತ ವ್ಯಕ್ತಿಗಳ ಖಾತೆಗಳಲ್ಲಿ ಈಗ ಬ್ಲೂ ಟಿಕ್ ಕಾಣಿಸಿಕೊಳ್ಳುತ್ತಿದೆ. ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಟ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್, ರಿಷಿ ಕಪೂರ್, ಗಾಯಕ ಮೈಕಲ್ ಜಾಕ್ಸನ್, ಕ್ರಿಕೆಟಿಗ ಶೇನ್ ವಾರ್ನ್ ಸೇರಿದಂತೆ ಅನೇಕರ ಖಾತೆಗಳಲ್ಲೂ ಈಗ ನೀಲಿ ಟಿಕ್ ಕಾಣಿಸುತ್ತಿದೆ. ಆದರೆ, 65 ಲಕ್ಷ ಅನುಯಾಯಿಗಳನ್ನು ಹೊಂದಿರುವ ಟ್ವಿಟರ್‌ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಅವರ ಖಾತೆಯಲ್ಲಿ ನೀಲಿ ಟಿಕ್ ಕಾಣಿಸುತ್ತಿಲ್ಲ.

ಈ ಹಿಂದೆ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಕೆಲ ಬಳಕೆದಾರರ ಖಾತೆಗಳಿಗೆ ಬ್ಲೂ ಟಿಕ್ ಅನ್ನು ಇರಿಸಿಕೊಳ್ಳಲು ತಾವೇ ಪಾವತಿ ಮಾಡುವುದಾಗಿ ಹೇಳಿದ್ದರು. ಅವರಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಲೆಬ್ರಾನ್ ಜೇಮ್ಸ್, ಕೆನಡಾದ ನಟ ವಿಲಿಯಂ ಶಾಟ್ನರ್, ಲೇಖಕ ಸ್ಟೀಫನ್ ಕಿಂಗ್ ಸೇರಿದ್ದಾರೆ.

ಈ ಮಧ್ಯೆ10 ಲಕ್ಷಕ್ಕೂ ಅಧಿಕ ಅನುಯಾಯಿಗಳಿರುವ ಬಳಕೆದಾರರಿಗೆ ಟ್ವಿಟ್ಟರ್ ಬ್ಲೂ ಟಿಕ್ ಅನ್ನು ಉಚಿತವಾಗಿ ನೀಡುತ್ತಿದೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಟ್ವಿಟರ್ ಸ್ಪಷ್ಟನೆ ನೀಡಿಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *