ದಿಢೀರ್‌ ಟ್ವಿಟರ್​ ಲೋಗೋ ಬದಲಾಯಿಸಿದ ಎಲಾನ್​ ಮಸ್ಕ್​: ಪಕ್ಷಿಯಿದ್ದ ಜಾಗಕ್ಕೆ ಬಂದು ಕುಳಿತ ನಾಯಿ, ಖಾತೆದಾರರಿಗೆ ಅಚ್ಚರಿ

ದಿಢೀರ್‌ ಟ್ವಿಟರ್​ ಲೋಗೋ ಬದಲಾಯಿಸಿದ ಎಲಾನ್​ ಮಸ್ಕ್​: ಪಕ್ಷಿಯಿದ್ದ ಜಾಗಕ್ಕೆ ಬಂದು ಕುಳಿತ ನಾಯಿ, ಖಾತೆದಾರರಿಗೆ ಅಚ್ಚರಿ

ನ್ಯೂಸ್‌ ಆ್ಯರೋ ​: ಟ್ವಿಟರ್‌ ಖರೀದಿಸಿದ ಬಳಿಕ ಬದಲಾವಣೆಯ ಮೂಲಕವೇ ಸದ್ದು ಮಾಡುತ್ತಿರುವ​ ಸಿಇಒ ಎಲಾನ್​ ಮಸ್ಕ್​ ಇದೀಗ ಲೋಗೊ ಬದಲಾವಣೆಗೆ ಮುಂದಾಗಿದ್ದಾರೆ.

ಮಸ್ಕ್​ ಅವರು ಈ ಬಾರಿ ಟ್ವಿಟರ್​ನ ನೀಲಿ ಬಣ್ಣದ ಪಕ್ಷಿ ಲೋಗೋ ಅನ್ನು ಬದಲಾಯಿಸಿದ್ದು, ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್​ಕಾಯಿನ್​ನ​ ನಾಯಿಯ ಮೀಮ್ಸ್​ ಫೋಟೋವನ್ನು ಬಳಸಿದ್ದಾರೆ.

ಟ್ವಿಟರ್ ಬಳಕೆದಾರರು ಸೋಮವಾರದ ಟ್ವಿಟರ್‌ನ ವೆಬ್ ಆವೃತ್ತಿಯಲ್ಲಿ 2013ರಲ್ಲಿ ಜೋಕ್​ಗಾಗಿ ರಚಿಸಲಾದ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ ‘ಡಾಗ್​’ಮೀಮ್ಸ್​ ಅನ್ನು ಗಮನಿಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ಮಸ್ಕ್ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. ಟ್ವಿಟರ್​ ಲೋಗೋ ಬದಲಾವಣೆಯು ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್​ ಟ್ವಿಟರ್​ ಆ್ಯಪ್​ನಲ್ಲಿ ಪಕ್ಷಿಯ ಲೋಗೋ ಮುಂದುವರಿದಿದೆ.

ಅಂದಹಾಗೆ ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡಲು 2013ರಲ್ಲಿ ಜೋಕ್ಸ್​ಗಾಗಿ ಈ ಡಾಗ್​ ಚಿತ್ರ (ಶಿಬಾ ಇನು) ರಚಿಸಲಾಯಿತು. ಇದು ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಪ್ರಸಿದ್ಧವಾಗಿದೆ.

ಮಸ್ಕ್​ ಅವರು 2022 ಮಾರ್ಚ್ 26ರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮತ್ತು ಅನಾಮಧೇಯ ಖಾತೆಯ ನಡುವಿನ ಸಂಭಾಷಣೆ ಇದೆ. ಟ್ವಿಟರ್​ ಬಳಕೆದಾರನೊಬ್ಬ ಪಕ್ಷಿ ಲೋಗೋವನ್ನು ‘ಡಾಗ್​’ ಗೆ ಬದಲಾಯಿಸಲು ಕೇಳುತ್ತಿದ್ದಾರೆ. ಈ ಪೋಸ್ಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮಸ್ಕ್, ಭರವಸೆ ನೀಡಿದ್ದರು. ಇದೀಗ ವೆಬ್​ ಆವೃತ್ತಿಯಲ್ಲಿ ಮಾತ್ರ ಬದಲಾವಣೆ ಮಾಡಿದ್ದಾರೆ.

2022ರ ಏಪ್ರಿಲ್​ನಲ್ಲಿ ಟ್ವಿಟರ್​ ಖರೀದಿಸುವ 44 ಬಿಲಿಯನ್​ ಡಾಲರ್​ ಒಪ್ಪಂದವನ್ನು ಮಸ್ಕ್​ ಆರಂಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು ಮತ್ತು ಮಾಹಿತಿ ಪಡೆಯಲು ಟ್ವಿಟರ್​ಗೆ ತಿಳಿಸಿದ್ದರು. ಆದರೆ, ಟ್ವಿಟರ್​ ಸಹಕಾರ ನೀಡುತ್ತಿಲ್ಲ ಎಂದು ಅವರ ವಕೀಲರು ಆರೋಪಿಸಿದ್ದರು. ಇದರಿಂದಾಗಿ ದಿಢೀರನೇ ತಮ್ಮ ನಿಲುವು ಬದಲಿಸಿಕೊಂಡಿದ್ದ ಮಸ್ಕ್​, ಟ್ವಿಟರ್​ ಖರೀದಿ ಒಪ್ಪಂದವನ್ನು ಮುರಿದುಕೊಂಡಿದ್ದರು.

ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರೂ ಮಾಹಿತಿ ನೀಡದ್ದಕ್ಕೆ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಮಸ್ಕ್​ ಸ್ಪಷ್ಟನೆ ನೀಡಿದ್ದರು. ಕಂಪನಿಯನ್ನು ಖರೀದಿಸಲು ಕಾನೂನುಬದ್ಧವಾಗಿ ಮಸ್ಕ್​ ಬದ್ಧರಾಗಿದ್ದಾರೆ ಮತ್ತು ಮೊಕದ್ದಮೆ ಹೂಡಿದ್ದಾರೆ ಎಂದು ಟ್ವಿಟರ್ ವಾದಿಸಿತು.

ಅಕ್ಟೋಬರ್ ಆರಂಭದಲ್ಲಿ ಟ್ವಿಟರ್‌ನ ವಕೀಲರು ತಮ್ಮ ವಿಚಾರಣೆಯ ಪ್ರಾರಂಭದ ಮೊದಲು ಮಸ್ಕ್ ಅವರನ್ನು ಪದಚ್ಯುತಗೊಳಿಸಲು ನಿರ್ಧರಿಸಿದಾಗ, ಮಸ್ಕ್ ಮತ್ತೊಮ್ಮೆ ಯು-ಟರ್ನ್ ಹೊಡೆಯುವ ಮೂಲಕ ಒಪ್ಪಂದವನ್ನು ಪೂರ್ಣಗೊಳಿಸಲು ಮುಂದಾದರು. ಅದರಂತೆ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದ ಮಸ್ಕ್​, ಟ್ವಿಟರ್​ನ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *