ಏಕಾಏಕಿ ಭಾರತದ 74 ಲಕ್ಷ ವಾಟ್ಸಾಪ್ ಅಕೌಂಟ್ ಬ್ಯಾನ್ – ಮೆಟಾ ನೀಡಿದ ಕಾರಣವೇನು ಗೊತ್ತಾ?

ಏಕಾಏಕಿ ಭಾರತದ 74 ಲಕ್ಷ ವಾಟ್ಸಾಪ್ ಅಕೌಂಟ್ ಬ್ಯಾನ್ – ಮೆಟಾ ನೀಡಿದ ಕಾರಣವೇನು ಗೊತ್ತಾ?

ನ್ಯೂಸ್ ಆ್ಯರೋ : ಮಾಹಿತಿ ತಂತ್ರಜ್ಞಾನದ ನಿಯಮಗಳಿಗೆ ಅನುಗುಣವಾಗಿ ಮೆಟಾ ಮಾಲೀಕತ್ವದ ವಾಟ್ಸ್‌ಆಯಪ್ ಆಗಸ್ಟ್‌ನಲ್ಲಿ 74 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ಸಂದೇಶ ವೇದಿಕೆಯ (ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌) ಭಾರತದ ಇತ್ತೀಚಿನ ಮಾಸಿಕ ವರದಿಯು ತಿಳಿಸಿದೆ.

ಇದರಲ್ಲಿ 35 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ದೂರು ಬಾರದಿದ್ದರೂ ಕಂಪನಿಯೇ ಸಕ್ರಿಯ ಪರಿಶೀಲನೆ ಮೂಲಕ ನಿಷೇಧಿಸಿದೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ವಿವರಗಳು, ಅದಕ್ಕೆ ವಾಟ್ಸ್‌ಆಯಪ್‌ನಿಂದ ತೆಗೆದುಕೊಂಡ ಕ್ರಮಗಳು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಗಳನ್ನು ತಡೆಗಟ್ಟಲು ವಾಟ್ಸ್‌ಆಯಪ್ ತೆಗೆದುಕೊಂಡ ಕ್ರಮಗಳನ್ನು ‘ಬಳಕೆದಾರ ಸುರಕ್ಷತಾ ವರದಿ’ಯು ಒಳಗೊಂಡಿದೆ.

ಬಳಕೆದಾರರ ಸುರಕ್ಷತೆ(User Safety) ಹಾಗೂ ಭಾರತದ ಐಟಿ ನಿಯಮ(Indian IT Rule) 2021ರ ಅಡಿಯಲ್ಲಿ ಅಸುರಕ್ಷಿತ(unsafe) ಹಾಗೂ ನಿಯಮ ಉಲ್ಲಂಘಿಸುವ 74,20,748 ಖಾತೆಗಳನ್ನು ಅಗಸ್ಟ್‌ ತಿಂಗಳಿನಲ್ಲಿ ರದ್ದುಗೊಳಿಸಲಾಗಿದ್ದು ಅವುಗಳಲ್ಲಿ 35,06,905 ಖಾತೆಗಳನ್ನು ಬಳಕೆದಾರರು ದೂರು ನೀಡುವ ಮೊದಲೇ ನಿಷೇಧಿಸಲಾಗಿದೆ ಎಂದು ಮೆಟಾ(Meta) ಹೇಳಿದೆ‌.

ವಾಟ್ಸ್ಯಾಪ್‌ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಆಪ್‌ ಆಗಿದ್ದು 500 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಅಗಸ್ಟ್‌ ಒಂದರಲ್ಲಿ ಮೆಟಾ ಸಂಸ್ಥೆ ಭಾರತೀಯ ಬಳಕೆದಾರರಿಂದ 14,767 ದೂರುಗಳನ್ನು ಸ್ವೀಕರಿಸಿದ್ದು , ಬಳಕೆದಾರರ ಸುರಕ್ಷತೆಯನ್ನು, ಗೌಪ್ಯತೆ ಗಮನದಲ್ಲಿರಿಸಿ ಇಂತಹ ಖಾತೆಗಳ ವಿರುದ್ಧ ವಾಟ್ಸ್ಯಾಪ್‌ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *