ಕ್ರೋಮ್ ಬ್ರೋಸರ್ ರೀತಿಯ ವೆಬ್ ಬ್ರೌಸರ್ ಆವಿಷ್ಕರಿಸಿದರೆ ಸಿಗಲಿದೆ 3.4 ಕೋಟಿ ರೂಪಾಯಿ – ಕೇಂದ್ರದ ಬಹುಮಾನ ಯೋಜನೆ ಏನಿದು?

ಕ್ರೋಮ್ ಬ್ರೋಸರ್ ರೀತಿಯ ವೆಬ್ ಬ್ರೌಸರ್ ಆವಿಷ್ಕರಿಸಿದರೆ ಸಿಗಲಿದೆ 3.4 ಕೋಟಿ ರೂಪಾಯಿ – ಕೇಂದ್ರದ ಬಹುಮಾನ ಯೋಜನೆ ಏನಿದು?

ನ್ಯೂಸ್ ಆ್ಯರೋ‌ : ಜಗತ್ತಿನ ಬಲಿಷ್ಠ ದೇಶವಾಗಿ ರೂಪುಗೊಳ್ಳುತ್ತಿರುವ ಭಾರತ ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಇದೀಗ ಡಿಜಿಟಲ್ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸಲು ಸ್ಥಳೀಯವಾಗಿ ಬ್ರೌಸರ್ ಅಭಿವೃದ್ದಿ ಪಡಿಸಲು ಮುಂದಾಗಿದೆ.

ಸುಮಾರು 85 ಕೋಟಿ ಇಂಟರ್ ನೆಟ್ ಬಳಕೆದಾರರು

ದೇಶದಲ್ಲಿ ಅಂದಾಜು 85 ಕೊಟಿ ಇಂಟರ್ ನೆಟ್ ಬಳಕೆದಾರರಿದ್ದಾರೆ. ಈ ಪೈಕಿ ಶೇ. 88ರಷ್ಟು ಮಂದಿ ಗ್ರೂಗಲ್ ಕ್ರೋಮ್ ಬಳಸುತ್ತಿದ್ದಾರೆ. ಇದೀಗ ಕೇಂದ್ರ ಸರಕಾರ ತನ್ನದೇ ಆದ ವೆಬ್ ಬ್ರೌಸರ್ ನಿರ್ಮಿಸಲು ಮುಂದಾಗಿದೆ. ಗೂಗಲ್ ಕ್ರೋಮ್, ಮೊಝಿಲಾ ಫೈರ್ ಫಾಕ್ಸ್, ಮೈಕ್ರೋಸಾಫ್ಟ್ ಎಡ್ಜ್, ಒಪೆರಾಗಳಂತೆ ಕಾರ್ಯ ನಿರ್ವಹಿಸುವ ಬ್ರೌಸರ್ ಅಭಿವೃದ್ಧಿ ಪಡಿಸಲು ಚಿಂತಿಸಿದೆ.

3.4 ಕೋಟಿ ರೂ. ಬಹುಮಾನ

ಯಾವುದೇ ಸೈಬರ್ ದಾಳಿಗೆ ತುತ್ತಾಗದ, ವಿಶ್ವ ಮಟ್ಟದ ದೇಸಿ ಬ್ರೌಸರ್ ಸಿದ್ಧಪಡಿಸುವವರಿಗೆ 3.4 ಕೋಟಿ ರೂ. ಬಹುಮಾನ ನೀಡಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲು ಇಡುತ್ತಿರುವ ದೇಶವು, ಜನರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ವಿದೇಶಿ ಬ್ರೌಸರ್ ಗಳ ಮೇಲಿನ ಅವಲಂಬನೆ ತಗ್ಗಿಸುವುದು ಸೂಕ್ತ. ಹೀಗಾಗಿ ದೇಸಿ ಬ್ರೌಸರ್ ಅಭಿವೃದ್ದಿಪಡಿಸಲು ಉತ್ತೇಜನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ ಬ್ರೌಸರ್ ಗಳ ಪೈಕಿ ಗೂಗಲ್ ಕ್ರೋಮ್ ಶೇ. 88, ಸಫಾರಿ ಶೇ. 5.22, ಮೈಕ್ರೋಸಾಫ್ಟ್ ಎಡ್ಜ್ ಶೇ. 2, ಸ್ಯಾಮ್ಸಂಗ್ ಇಂಟರ್ ನೆಟ್ ಶೇ. 1.5, ಮೊಝೊಲಾ ಫೈರ್ ಫಾಕ್ಸ್ ಶೇ. 1.28 ಮತ್ತು ಇತರ ಬ್ರೌಸರ್ ಗಳ ಬಳಕೆದಾರರ ಸಂಖ್ಯೆ ಶೇ. 1.53ರಷ್ಟಿದೆ.

ಮುಂದಿನ ವರ್ಷ ದೇಸಿ ಬ್ರೌಸರ್ ಲಭ್ಯ?

ದೇಸಿ ನಿರ್ಮಿತ ವೆಬ್ ಬ್ರೌಸರ್ 2024ರ ವೇಳೆಗೆ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಸ್ಟಾರ್ಟ್ ಅಪ್ ಗಳು, ಶಿಕ್ಷಣ ಸಂಸ್ಥೆಗಳು, ಕಾರ್ಪೋರೇಟ್ ಗಳು ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *