ಹಫೇಜ್ ಅಲ್ ಅಸಾದ್ ಪ್ರತಿಮೆ ಹೊಡೆದುರುಳಿಸಿ ಅಟ್ಟಹಾಸ; ದೇಶ ಬಿಟ್ಟು ಪಲಾಯನ ಮಾಡಿದ ಅಧ್ಯಕ್ಷ !
ನ್ಯೂಸ್ ಆ್ಯರೋ: ಬಾಂಗ್ಲಾದೇಶದಂತೆ ಸಿರಿಯಾ ಕೂಡ ಆಂತರಿಕ ಸಂಘರ್ಷದಿಂದ ನಲುಗಿದೆ. ತಲೆ ಮಾರುಗಳಿಂದ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಬಶರ್ ಅಲ್ ಅಸಾದ್ ಆಡಳಿತ ಅಂತ್ಯವಾಗಿದೆ. ಸಿರಿಯಾದಲ್ಲಿ ನೂತನ ಸರ್ಕಾರ ರಚಿಸಲು ಬಂಡುಕೋರರ ಪಡೆ ಸಜ್ಜಾಗಿದ್ದು, ಅತ್ತ, ಸಿರಿಯಾ ಅಧ್ಯಕ್ಷ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರಗಳೇ ಉರುಳುತ್ತಿವೆ. ಇಸ್ಲಾಮಿಕ್ ಸಂಘಟನೆಗಳ, ಬಂಡುಕೋರರ ಆರ್ಭಟ ಹೆಚ್ಚಾಗಿದೆ. ಈಗ ಸಿರಿಯಾದಲ್ಲಿ ದೊಡ್ಡ ಕ್ರಾಂತಿಯೇ ನಡೆದುಹೋಗಿದೆ.
ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದಂತೆ ಈಗ ಸಿರಿಯಾದಲ್ಲೂ ಕೂಡ ಆಂತರಿಕ ಸಂಘರ್ಷಕ್ಕೆ ಸರ್ಕಾರ ಪತನಗೊಂಡಿದೆ. ಕಳೆದ ಒಂದು ವಾರದಿಂದ ಸಿರಿಯಾದಲ್ಲಿ ಹಯಾತ್ ತಹ್ರೀರ್ ಅಲ್ ಶಾಮ್ ನೇತೃತ್ವದ ಬಂಡುಕೋರರು ದಂಗೆ ನಡೆಸಿದ್ದು, ಅಸ್ಸಾದ್ ಅವರ ಸುದೀರ್ಘ ಆಡಳಿತ ಕೊನೆಗೊಂಡಿದೆ.
ಬಂಡುಕೋರರ ಪಡೆ ಸಿರಿಯಾ ರಾಜಧಾನಿ ಡಮಾಸ್ಕಸ್ ಅನ್ನ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ರಾಜಧಾನಿಯನ್ನ ವಶಕ್ಕೆ ಪಡೆಯುತ್ತಿದ್ದಂತೆ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ರಾಜಧಾನಿ ಡೆಮಸ್ಕಾಸ್ ಬಂಡುಕೋರರ ವಶವಾಗುತ್ತಿದ್ದಂತೆ ಸಿರಿಯಾ ಅಧ್ಯಕ್ಷ ಅಲ್ ಅಸ್ಸಾದ್ ದೇಶ ತೊರೆಯುವ ಮುನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ರಷ್ಯಾ ವರದಿ ಮಾಡಿದೆ. ಆದ್ರೆ ಎಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂಬುದು ನಿಗೂಢವಾಗಿದೆ. ಮತ್ತೊಂದೆಡೆ ಅಲ್ ಅಸಾದ್ ತಮ್ಮ ಕುಟುಂಬದ ಜೊತೆ ರಷ್ಯಾಕ್ಕೆ ಪ್ರಯಾಣ ಬೆಳಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನು ದುರಂತವಂದ್ರೆ ಮಾಜಿ ಉಗ್ರಗಾಮಿ ಮೊಹಮ್ಮದ್ ಅಲ್-ಜೋಲಾನಿ ನೇತೃತ್ವದ ಹಯಾತ್ ತಹ್ರೀರ್ ಅಲ್-ಶಾಮ್ ಗುಂಪು ಅಲ್- ಅಸ್ಸಾದ್ ಆಡಳಿತವನ್ನ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಸಿರಿಯಾವ್ನ ಮುನ್ನೆಡುಸವವರು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದ್ದು, ಈ ಹಿಂದೆ ಐಸಿಸ್ ಮತ್ತು ಅಲ್ ಖೈದಾ ಉಗ್ರ ಸಂಘಟನೆ ಜೊತೆ ಕೈ ಜೋಡಿಸಿದ್ದ ಮೊಹಮ್ಮದ್ ಅಲ್-ಜೋಲಾನಿ ಅಮೆರಿಕದ ಮೋಸ್ಟ್ ವಾಟೆಂಡ್ ಲಿಸ್ಟ್ನಲ್ಲಿದ್ದ.
ಇನ್ನು ಸಿರಿಯಾವನ್ನು ಬಂಡುಕೋರರು ವಶಕ್ಕೆ ಪಡೆಯುತ್ತಿದ್ದಂತೆ ಇಸ್ರೇಲ್ ಕೂಡ ಅಖಾಡಕ್ಕಿಳಿದಿದೆ. ಗಡಿಯಲ್ಲಿರುವ ಗೋಲನ್ ಹೈಟ್ಸ್ ಬಳಿಯ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಸಿರಿಯಾದ ಡಮಾಸ್ಕಸ್‌ನ ವಲಸೆ ಮತ್ತು ಪಾಸ್‌ಪೋರ್ಟ್ ಕಟ್ಟಡದ ಮೇಲೆ ಬಾಂಬ್ ದಾಳಿ ಮಾಡಿದೆ.
Leave a Comment