Kolkata Rape and Murder Case : ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್ – ಡಿಜಿಪಿಯನ್ನು ವಜಾ ಮಾಡುವಂತೆ ತಾಕೀತು : ಇನ್ಮುಂದೆ ವೈದ್ಯರ ರಕ್ಷಣೆಗೆ ನ್ಯಾಷನಲ್ ಟಾಸ್ಕ್ ಫೋರ್ಸ್

20240820 124237
Spread the love

ನ್ಯೂಸ್ ಆ್ಯರೋ‌ : ಕೋಲ್ಕತಾದ ತರಬೇತಿ ನಿರತ ವೈದ್ಯ ವಿದ್ಯಾರ್ಥಿನಿಯ ರೇಪ್‌ & ಮರ್ಡರ್ ಕೇಸ್‌ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಪ್ರಕರಣದ ಕುರಿತಾಗಿ ಆಗಸ್ಟ್ 22ರ ಒಳಗಾಗಿ ವಸ್ತುಸ್ಥಿತಿ ವರದಿ ನೀಡುವಂತೆ ಸಿಬಿಐಗೆ ಸೂಚನೆ ನೀಡಿದೆ.

ವಿಚಾರಣೆ ವೇಳೆ ಆಕ್ರೋಶಗೊಂಡ CJI ಡಿ.ವೈ. ಚಂದ್ರಚೂಡ ನೇತೃತ್ವದ ನ್ಯಾಯಪೀಠ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ, ಪಶ್ಚಿಮ ಬಂಗಾಳ ಪೊಲೀಸ್‌ಗೆ ಛೀಮಾರಿ ಹಾಕಿದೆ. ಈ ಕೃತ್ಯದ ದಿಂದ ಇಡೀ ದೇಶ ಅಚ್ಚರಿಗೆ ಒಳಗಾಗಿದೆ. ವೈದ್ಯರನ್ನು ರಕ್ಷಣೆ ಮಾಡುವ ಎಲ್ಲಾ ವ್ಯವಸ್ಥೆ ವಿಫಲವಾಗಿದೆ. ಈ ಕೇಸ್‌ನ ತನಿಖೆ ಮಾಡುತ್ತಿರುವ ಸಿಬಿಐಗೆ ಸುಪ್ರೀಂ ಕೋರ್ಟ್‌ ಗುರುವಾರ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.

ವೈದ್ಯರಿಗೆ ರಕ್ಷಣೆ ಕೊಡುವಲ್ಲಿ‌ ವಿಫಲವಾಗಿದ್ದೇವೆ. ಕಾಲೇಜು ಪ್ರಾಂಶುಪಾಲರ ಮೇಲೆ ಕ್ರಮ ಯಾಕಾಗಿಲ್ಲ. ಪ್ರಾಂಶುಪಾಲರು ಇದನ್ನು ಆತ್ಮಹತ್ಯೆ ಎಂದು ತೋರಿಸಲು ಯತ್ನಿಸಿದ್ದಾರೆ. ಎಫ್ ಐ ಆರ್ ದಾಖಲಿಸಲು ತಡವಾಗಿದ್ದು ಯಾಕೆ? ಕ್ರೈಮ್ ಸೀನ್‌ ಅನ್ನು ಅಧಿಕಾರಿಗಳು ಯಾಕೆ ರಕ್ಷಣೆ ಮಾಡಿಲ್ಲ. ಪ್ರಾಂಶುಪಾಲರನ್ನು ಬಂಗಾಳ ಸರ್ಕಾರ ಮರು ನೇಮಕ ಮಾಡಿದ್ದು ಯಾಕೆ? ಗಲಾಟೆ ಮಾಡಿರುವ ಗುಂಪು ಹೇಗೆ ಪ್ರವೇಶ ಮಾಡಿದ್ರು? ಇದನ್ನು ಪೊಲೀಸರು ಯಾಕೆ ತಡೆಯಲಿಲ್ಲ? ತಕ್ಷಣವೇ ಡಿಜಿಪಿಯನ್ನು ಹುದ್ದೆಯಿಂದ ತೆರವು ಮಾಡಿ ಎಂದು ಸೂಚನೆ ನೀಡಿದೆ.

20240820 12383650743638365589772

ಇದೇ ಸಂದರ್ಭದಲ್ಲಿ ವೈದ್ಯರ ರಕ್ಷಣೆಗಾಗಿಯೇ ಸುಪ್ರೀಂ ಕೋರ್ಟ್‌ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸುಪ್ರೀಂ ಕೋರ್ಟ್ ನೇತೃತ್ವದಲ್ಲಿಯೇ ರಾಷ್ಟ್ರೀಯ ಕಾರ್ಯಪಡೆಯನ್ನು ರಚನೆ ಮಾಡಲಿದೆ. ಇದರಲ್ಲಿ ಸರ್ಜನ್ ವೈಸ್ ಅಡ್ಮಿರಲ್ ಆರ್ ಸರಿನ್, ಡಾ ಡಿ ನಾಗೇಶ್ವರ ರೆಡ್ಡಿ, ಡಾ ಎಂ ಶ್ರೀನಿವಾಸ್, ಡಾ ಪ್ರತಿಮಾ ಮೂರ್ತಿ, ಡಾ ಗೋವರ್ಧನ್ ದತ್ ಪುರಿ, ಡಾ ಸೌಮಿತ್ರಾ ರಾವತ್ಪ್ರೊ ಏಮ್ಸ್ ದೆಹಲಿಯ ಕಾರ್ಡಿಯಾಲಜಿ ಮುಖ್ಯಸ್ಥೆ ಅನಿತಾ ಸಕ್ಸೇನಾ, ಮುಂಬೈನ ಡೀನ್ ಗ್ರಾಂಟ್ ಮೆಡಿಕಲ್ ಕಾಲೇಜಿನ ಪ್ರೊ ಪಲ್ಲವಿ ಸಪ್ರೆ, ಏಮ್ಸ್‌ನ ನರವಿಜ್ಞಾನ ವಿಭಾಗದ ಡಾ ಪದ್ಮಾ ಶ್ರೀವಾಸ್ತವ ಇರಲಿದ್ದಾರೆ.

ರಾಷ್ಟ್ರೀಯ ಕಾರ್ಯಪಡೆಯ ಪದನಿಮಿತ್ತ ಸದಸ್ಯರಾಗಿ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಇರಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಕಾರ್ಯಪಡೆಯು ಸುಪ್ರೀಂ ಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ ಎಂದು ನ್ಯಾಯಾಲಯ ವಿವರಿಸಿದೆ.

Leave a Comment

Leave a Reply

Your email address will not be published. Required fields are marked *