ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರ ಸ್ಪರ್ಶಿಸಲು ಬಾರದ ಭಾಸ್ಕರ; ದೇವಾಲಯದಲ್ಲಿ ಭಕ್ತರಿಗೆ ನಿರಾಸೆ, ಕಾದಿದ್ಯಾ ಗಂಡಾಂತರ?

gavi-gangadhareshwara
Spread the love

ನ್ಯೂಸ್ ಆ್ಯರೋ: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ದೇವಾಲಯ, ಗುಡಿ, ಗೋಪುರದಲ್ಲಿ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯ ಗವಿಪುರದಲ್ಲಿನ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

ಇನ್ನೂ, ಗವಿಗಂಗಾಧರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಂದು ಸಂಜೆ ಗವಿಗಂಗಾಧರೇಶ್ವರನ ಮೇಲೆ ದೇಗುಲ ಬಲಭಾಗದ ಕಮಾನಿನಿಂದ ಕಿಟಕಿ ಮೂಲಕ ಸೂರ್ಯ ರಶ್ಮಿ ಪ್ರವೇಶ ಮಾಡಬೇಕಿತ್ತು. ಈ ಸೂರ್ಯರಶ್ಮಿ‌ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಭಕ್ತರು ಕಾಯುತ್ತಿದ್ದರು.

ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದುದರಿಂದ ಗವಿಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಲಿಲ್ಲ. ದೇವರಿಗೆ ಕ್ಷೀರಾಭಿಷೇಕ ಮಾಡಿಲ್ಲ. ಇತ್ತ ಸೂರ್ಯರಶ್ಮಿ‌ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.

ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಲ್ಲಿ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರ ನಡೆಯುತ್ತದೆ. ಈ ದಿನ ಗವಿ ಗಂಗಾಧರೇಶ್ವರನನ್ನು ಸೂರ್ಯದೇವ ನಮಿಸುತ್ತಿದ್ದ. ಆದರೆ ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದುದರಿಂದ ಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿ‌ ಸ್ಪರ್ಶ ಆಗಲಿಲ್ಲ. ಇನ್ನೂ ಇತಿಹಾಸದಲ್ಲೇ 3ನೇ ಬಾರಿ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ. ಹೀಗಾಗಿ ಭಕ್ತರಿಗೆ ನಿರಾಸೆ ಜೊತೆ ಆತಂಕ ಕೂಡ ಶುರುವಾಗಿದೆ

ಈ ಬಾರಿ ಕಾದಿದ್ಯಾ ಗಂಡಾಂತರ?
ಗವಿಗಂಗಾಧರ ದೇವಸ್ಥಾನಕ್ಕೆ ಬಾರದೇ ಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶಿಸಲಿಲ್ಲ. ಪ್ರತೀ ವರ್ಷ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸಂದರ್ಭದಲ್ಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗ್ತಿತ್ತು. ಸೂರ್ಯನ ಕಿರಣ ಎಷ್ಟು ಹೊತ್ತು ಇರುತ್ತೆ ಎನ್ನುವ ಆಧಾರದಲ್ಲಿ ಅರ್ಚಕರು ಭವಿಷ್ಯ ಹೇಳುತ್ತಿದ್ದರು. ಕೋವಿಡ್ ಮೊದಲು ಅತ್ಯಲ್ಪ ಅವಧಿಯಲ್ಲಿ ಸೂರ್ಯನ ಕಿರಣ ಸ್ಪರ್ಶವಾಗಿತ್ತು. ಇದರಿಂದ ದೀಕ್ಷಿತರು, ಅಪಾರ ಸಾವು ನೋವಿನ ಎಚ್ಚರಿಕೆ ನೀಡಿದ್ದರು. ಭವಿಷ್ಯದಂತೆ ಕೊರೋನಾ ಮಹಾಮಾರಿ ಅಪ್ಪಳಿಸಿ ಅಪಾರ ಸಾವು ನೋವುಗಳು ಸಂಭವಿಸಿದ್ದವು. ಈ ಬಾರಿಯೂ ಸಹ ಸೂರ್ಯರಶ್ಮಿ ಸ್ಪರ್ಶಿಸದ ಹಿನ್ನೆಲೆಯಲ್ಲಿ ಮುಂದೆ ಗಂಡಾಂತರ ಕಾದಿದ್ಯಾ ಎನ್ನುವ ಆತಂಕ ಶುರುವಾಗಿದೆ.

Leave a Comment

Leave a Reply

Your email address will not be published. Required fields are marked *