ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರು ಖಾಕಿ ವಶಕ್ಕೆ: ಮೂವರ ಮೇಲೆ ಬಿತ್ತು ಕೇಸ್

car seized
Spread the love

ನ್ಯೂಸ್ ಆ್ಯರೋ: ಶಾಸಕ ಜನಾರ್ದನ ರೆಡ್ಡಿ ಅವರ ರೇಂಜ್ ರೋವರ್ ಕಾರು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ಮಂಗಳವಾರ ನಗರದ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವ ಸಂದರ್ಭದಲ್ಲಿ ಝೀರೊ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದರಿಂದ ರೆಡ್ಡಿ ಕಾರು ಚಾಲಕ ಹುಸೇನ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ನಗರ ಸಂಚಾರಿ ಠಾಣೆಯ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ? ಅಸಲಿಗೆ ಆಗಿದ್ದೇನು?

ಅ.05ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಸಿಎಂ ಆಗಮನ ಹಿನ್ನೆಲೆಯಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಸ್ಥಳದಲ್ಲಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್​​ ನಿಂದ ಸಮಸ್ಯೆ ಎದುರಿಸಿದ್ದರು.

ಇದೇ ವೇಳೆ ಸಿಎಂ ಎದುರಿಗೆ ಬರುತ್ತಿದ್ದ ಶಾಸಕ ಜನಾರ್ದನರೆಡ್ಡಿ ಕಾರನ್ನು ಕೂಡ ಪೊಲೀಸರು ತಡೆದಿದ್ದರಂತೆ, ಆದರೆ ಬರೋಬ್ಬರಿ 20 ನಿಮಿಷಗಳ ಕಾಲ ಶಾಸಕ ಜನಾರ್ದನ ರೆಡ್ಡಿ ಇದ್ದ ಕಾರು ರಸ್ತೆಯಲ್ಲೇ ಕಾದು ನಿಂತಿತ್ತು. ಇದರಿಂದ ಅಸಮಾಧಾನಗೊಂಡ ಶಾಸಕರು ಕೊನೆಗೆ ಡಿವೈಡರ್​​ ಮೇಲೆಯೇ ಕಾರು ಹತ್ತಿಸಿ ಸಿಎಂ ಬರ್ತಿದ್ದ ಮಾರ್ಗದಲ್ಲೇ ಸ್ವತಃ ಕಾರು ಚಲಾಯಿಸಿಕೊಂಡು ತೆರಳಿದ್ದಾರೆ. ಸಿಎಂ ಕಾರು ಆಗಮಿಸುತ್ತಿದ್ದ ವೇಳೆ ರಾಂಗ್ ರೂಟ್​​ನಲ್ಲಿ ಮತ್ತೊಂದು ಕಾರು ಬರೋದನ್ನು ಕಂಡ ಸಿಎಂ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆ ಕೊನೆಗೆ ತಮ್ಮ ಕಾರನ್ನೇ ನಿಲ್ಲಿಸಿ ಜನಾರ್ದನ ರೆಡ್ಡಿ ಕಾರು ಪಾಸ್​ ಆದ ಬಳಿಕ ಸಿಎಂ ಅವರನ್ನು ಕರೆದುಕೊಂಡು ಹೋಗಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!