ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಲಿರುವ ಸುನಿತಾ: ಸಾಂಟಾ ಹ್ಯಾಟ್ ಸೆಲ್ಫಿ ಹಂಚಿಕೊಂಡ ಗಗನಯಾತ್ರಿಗಳು
ನ್ಯೂಸ್ ಆ್ಯರೋ: ಕೆಲ ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದಲ್ಲಿರುವ ಸುನೀತಾ ಅವರ ಆರೋಗ್ಯದ ಬಗ್ಗೆ ಜನರು ತುಂಬಾ ಚಿಂತಿತರಾಗಿದ್ದರು. ಆದರೆ, ಸುನೀತಾ ವಿಲಿಯಮ್ಸ್ ತುಂಬ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದು, ಇದೀಗ ತಮ್ಮ ಸ್ನೇಹಿತರೊಂದಿಗೆ ಕ್ರಿಸ್ಮಸ್ ಆಚರಣೆಯ ತಯಾರಿಯಲ್ಲಿ ನಿರತರಾಗಿದ್ದಾರೆ.
ನಾಸಾದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಸುನೀತಾ ಅವರ ಆರೋಗ್ಯದ ಕ್ಷೇಮವಾಗಿದೆ ಎಂದು ಹೇಳಬಹುದು. ಇದೀಗ ಸುನಿತಾ ವಿಲಿಯಮ್ಸ್ ತುಂಬ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದು, ಕ್ರಿಸ್‌ಮಸ್‌ಗಾಗಿ ಭರ್ಜರಿ ತಯಾರಿಯಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಅಗತ್ಯ ವಸ್ತುಗಳು ಮತ್ತು ವಿಶೇಷ ಉಡುಗೊರೆಗಳನ್ನು ನಿಲ್ದಾಣಕ್ಕೆ ತಲುಪಿಸಲಾಗಿರುವುದು ಗಮನಾರ್ಹ.
ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿರುವ ಸುನೀತಾ ವಿಲಿಯಮ್ಸ್ ಅವರ ಫೋಟೋವನ್ನು ನಾಸಾ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಅದರಲ್ಲಿ ಸುನಿತಾ ಅವರು ಸಾಂಟಾ ಕ್ಯಾಪ್ ಧರಿಸಿ ಮಿಂಚಿದ್ದಾರೆ.
ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಐಎಸ್ಎಸ್ನ ಕೊಲಂಬಸ್ ಮಾಡ್ಯೂಲ್‌ನಲ್ಲಿ ಹ್ಯಾಮ್ ರೇಡಿಯೊದಲ್ಲಿ ಮಾತನಾಡಿ,. ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಅನ್ನು ವಿಶೇಷವಾಗಿಸಲು, ನಮ್ಮ ತಂಡವು ಭೂಮಿಯಿಂದ ಕಳುಹಿಸಲಾದ ಆಹಾರವನ್ನು ಸೇವಿಸುವ ಮೂಲಕ ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುನೀತಾ ವಿಲಿಯಮ್ಸ್ ಮತ್ತು ಅವರ ಪಾಲುದಾರ ಬುಚ್ ವಿಲ್ಮೋರ್ ಕಳೆದ ಆರು ತಿಂಗಳಿನಿಂದ ISS ನಲ್ಲಿ ಸಿಲುಕಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ ಗಗನಯಾತ್ರಿಗಳು ಫೆಬ್ರವರಿಯಲ್ಲಿ ಭೂಮಿಗೆ ಮರಳುವ ಸಾಧ್ಯತೆಯಿದೆ. ಅವರ ಕಾರ್ಯಾಚರಣೆ ಜೂನ್‌ನಲ್ಲಿ ಎಂಟು ದಿನಗಳವರೆಗೆ ಮಾತ್ರ ನಡೆಯಬೇಕಾಗಿದ್ದರೂ, ತಾಂತ್ರಿಕ ದೋಷದಿಂದಾಗಿ ಅವರ ವಾಪಸಾತಿ ವಿಳಂಬವಾಯಿತು. ಕಳೆದ ತಿಂಗಳು, ಸುನೀತಾ ಸಂದರ್ಶನವೊಂದರಲ್ಲಿ ನನ್ನ ಬಳಿ ಸಾಕಷ್ಟು ಆಹಾರ ಪದಾರ್ಥಗಳಿವೆ ಎಂದು ಹೇಳಿದ್ದರು.
Leave a Comment