ದಾಖಲೆಯ ಮೊತ್ತಕ್ಕೆ ಮಾರಾಟವಾಯ್ತು ಹಳ್ಳಿಕಾರ್ ಎತ್ತು – ಮಂಡ್ಯದ ಹೆಮ್ಮೆಯ ಜಾಗ್ವಾರ್ ಸೇಲ್ ಆಗಿದ್ದೆಷ್ಟು ಮೊತ್ತಕ್ಕೆ ಗೊತ್ತಾ?

ದಾಖಲೆಯ ಮೊತ್ತಕ್ಕೆ ಮಾರಾಟವಾಯ್ತು ಹಳ್ಳಿಕಾರ್ ಎತ್ತು – ಮಂಡ್ಯದ ಹೆಮ್ಮೆಯ ಜಾಗ್ವಾರ್ ಸೇಲ್ ಆಗಿದ್ದೆಷ್ಟು ಮೊತ್ತಕ್ಕೆ ಗೊತ್ತಾ?

ನ್ಯೂಸ್ ಆ್ಯರೋ‌ : ಎತ್ತಿಗೆ ಗರಿಷ್ಠ ಎಷ್ಟು ಬೆಲೆ ಇರಬಹುದು? ಎಂಬ ಪ್ರಶ್ನೆಗೆ ಕೆಲವು ಸಾವಿರ ಇರಬಹುದು ಎನ್ನುವ ಉತ್ತರ ದೊರೆಯುತ್ತದೆ. ಆದರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಎಂಬವರ ಎರಡು ವರ್ಷದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.

9.26 ಲಕ್ಷ ರೂ.ಗೆ ಮಾರಾಟ

ಜಾಗ್ವಾರ್ ಹೆಸರಿನ ಈ ಎತ್ತನ್ನು ತಮಿಳುನಾಡು ಮೂಲದ ಸಿರಿವಾಯ್ ತಂಬಿ ಎನ್ನುವವರು 9.26 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಜಾಗ್ವಾರ್ ರಾಜ್ಯ ಸೇರಿದಂತೆ ತಮಿಳುನಾಡಿನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಹೀಗಾಗಿ ರೇಸ್ ನಲ್ಲಿ ಬಳಸಿಕೊಳ್ಳಲು ಜಾಗ್ವಾರ್ ಅನ್ನು ಖರೀದಿಸಲಾಗಿದೆ.

ರಾಜ್ಯದಲ್ಲೇ ಅಪರೂಪದ ತಳಿಯಾದ ಹಳ್ಳಿಕಾರ್ ಎತ್ತನ್ನು 1 ವರ್ಷದ ಹಿಂದೆ 1 ಲಕ್ಷ ರೂ. ಕೊಟ್ಟು ರೈತ ನವೀನ್ ಖರೀದಿಸಿದ್ದರು. ಅದನ್ನು ರೇಸ್ ಗೆ ಪಳಗಿಸಿ ಜಾಗ್ವಾರ್ ಎಂದು ನಾಮಕರಣ ಮಾಡಿದ್ದರು. ಭಾಗವಹಿಸಿದ್ದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಜಾಗ್ವಾರ್ ಈಗ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ.

ರಾಜ್ಯ ಮಾತ್ರವಲ್ಲ ತಮಿಳುನಾಡಿನ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದ ಜಾಗ್ವಾರ್ ಖರೀದಿಗೆ ಆಸಕ್ತಿ ತೋರಿ ಸಿರಿವಾಯ್ ತಂಬಿ ನವೀನ್ ಅವರನ್ನು ಸಂಪರ್ಕಿಸಿದ್ದರು. ಮೊದಲು ಮಾರಾಟ ಮಾಡಲು ನಿರಾಕರಿಸಿದ್ದ ನವೀನ್ ಬಳಿಕ ಉತ್ತಮ ಮೊತ್ತ ಲಭಿಸಿದ್ದರಿಂದ ಮಾರಿದರು. ನವೀನ್ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಜಾಗ್ವಾರ್ ಅನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *