ಹರಕೆಯ ಕುರಿಯಾಗಲಿದೆ 7 ಸ್ಟಾರ್ ಸುಲ್ತಾನ್ ಟಗರು – ಸಿನಿಮಾದಲ್ಲೂ ನಟಿಸಿದ್ದ ಟಗರಿನ ರಕ್ಷಣೆಗೆ ಕ್ಯಾಂಪೇನ್

ಹರಕೆಯ ಕುರಿಯಾಗಲಿದೆ 7 ಸ್ಟಾರ್ ಸುಲ್ತಾನ್ ಟಗರು – ಸಿನಿಮಾದಲ್ಲೂ ನಟಿಸಿದ್ದ ಟಗರಿನ ರಕ್ಷಣೆಗೆ ಕ್ಯಾಂಪೇನ್

ನ್ಯೂಸ್ ಆ್ಯರೋ‌ : ಸ್ಯಾಂಡಲ್ ವುಡ್ ನಟ ಧನಂಜಯ್ ನಿರ್ಮಾಣದ ‘ಟಗರು ಪಲ್ಯ’ ಚಿತ್ರದಲ್ಲಿ ಕಾಣಿಸಿಕೊಂಡ 7 ಸ್ಟಾರ್ ಸುಲ್ತಾನ್ ಹೆಸರಿನ ಟಗರನ್ನು ಅದರ ಮಾಲಕ ಮೊಹಮ್ಮದ್ ಯೂನಿಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತೀರ್ಮಾನಿದ್ದು, ಟಗರಿನ ಅಭಿಮಾನಿಗಳು ಬೇಸರ, ವಿರೋಧ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಟಗರು

ಬಾಗಲಕೋಟೆ ಜಿಲ್ಲೆಯ ಸುತಗುಂಡಾರ ಗ್ರಾಮದಲ್ಲಿರುವ ಈ 7 ಸ್ಟಾರ್ ಸುಲ್ತಾನ್ ಟಗರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲ ಸಾಕಷ್ಟು ಕಾಳಗಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿಕೊಂಡಿದೆ. ಬೈಕ್, ಚಿನ್ನ ಸೇರಿದಂತೆ ಹಲವು ಉಡುಗೊರೆ ತನ್ನದಾಗಿಸಿಕೊಂಡಿದೆ.

ಈ ಟಗರನ್ನು ರಾಂಪುರ ಗ್ರಾಮದ ಬಸು ಎಂಬವರಿಂದ ಗಡೇದ್ ಖರೀದಿಸಿದ್ದರು. ಇದಕ್ಕಾಗಿ ಬರೋಬ್ಬರಿ 1,88,500 ರೂ. ನೀಡಿದ್ದರು. ಇದನ್ನು ಕಡಿಯದಂತೆ ಅಭಿಮಾನಿಗಳು ಕೇಳಿಕೊಂಡಿದ್ದಾರೆ.

34ಕ್ಕೂ ಹೆಚ್ಚು ಕಡೆ ಪ್ರಥಮ ಸ್ಥಾನ

7 ಸ್ಟಾರ್ ಸುಲ್ತಾನ್ ರಾಜ್ಯಾದ್ಯಂತ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ 34ಕ್ಕೂ ಹೆಚ್ಚು ಬಾರಿ ಪ್ರಥಮ ಸ್ಥಾನ ಪಡೆದಿದೆ. 20 ಲಕ್ಷ ರೂ.ಗಿಂತ ಹೆಚ್ಚು ಹಣ, 1 ಬುಲೆಟ್ ಬೈಕ್, 1 ಎಚ್.ಎಫ್. ಡಿಲಕ್ಸ್, ಎಚ್.ಎಫ್. 100, 15 ಗ್ರಾಂ ಚಿನ್ನ ಗೆದ್ದುಕೊಂಡಿದೆ.

ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಟಗರನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಹರಕೆ ತೀರಿಸಲು ಟಗರು ಬಲಿ ಕೊಡಬೇಕೆಂದು ಮಾಲಕರು ತಿಳಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *