
ರಾಜ್ಯ ಸರ್ಕಾರದಿಂದ ಸ್ವಿಗ್ಗಿ, ಝೊಮ್ಯಾಟೋ (ಗಿಗ್) ಕಾರ್ಮಿಕರಿಗೆ ಗುಡ್‌ನ್ಯೂಸ್ – 2.30ಲಕ್ಷ ನೌಕರರಿಗೆ ಅಪಘಾತ ವಿಮೆ, ಸರಕಾರದಿಂದ ಅಧಿಕೃತ ಆದೇಶ
- ಕರ್ನಾಟಕ
- September 12, 2023
- No Comment
- 31
ನ್ಯೂಸ್ ಆ್ಯರೋ : ಇದೇ 7ರಿಂದ ಆನ್ವಯ ಆಗುವಂತೆ ರಾಜ್ಯದ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸ್ವಿಗ್ಗಿ, ಜೊಮ್ಯಾಟೋ ಇತ್ಯಾದಿ ಆಹಾರ ವಿಲೇವಾರಿ ಮಾಡುವವರು, ಅಮೇಜಾನ್, ಪ್ಲಿಕಾರ್ಟ್, ಬಿಗ್ ಬಾಸ್ಕೆಟ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ಸಿಬ್ಬಂದಿಗಳು ಇದರ ಪ್ರಯೋಜನವನ್ನು ಪಡೆಯಬಹುದು.
ಕೇಂದ್ರ ಸರ್ಕಾರದ ನೀತಿ ಆಯೋಗದ ಪ್ರಕಾರ 2022ರ ಅನುಸಾರ ರಾಜ್ಯದಲ್ಲಿ 2.30ಲಕ್ಷ ಗಿಕ್ ಕಾರ್ಮಿಕರಿದ್ದಾರೆ. ಈ ಎಲ್ಲರಿಗೂ ವಿಮಾ ಯೋಜನೆ ಅನ್ವಯಿಸಲಿದೆ.
ಈ ಯೋಜನೆ ಮಾರ್ಗಸೂಚಿಯಂತೆ ಅರ್ಜಿದಾರರು 18 ರಿಂದ 60 ವರ್ಷದ ಒಳಗಿರಬೇಕು. ಆದಾಯ ತೆರಿಗೆ ಪಾವತಿದಾರರು ಆಗಿರಬಾರದು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಹೊಂದಿರಬಾರದು. ಪ್ಲಾಟ್ ಫಾರ್ಮ್ ಆಧಾರಿತ ಗಿಕ್ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್ ನಲ್ಲಿ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಂದಹಾಗೇ ಜೀವ ವಿಮಾ ಯೋಜನೆಯ ಅಡಿಯಲ್ಲಿ ಫಲಾನುಭವಿಯ ಮರಣ ನಂತ್ರ, ಕಾನೂನು ಬದ್ಧ ವಾರಸುದಾರರಿಗೆ ₹2 ಲಕ್ಷ ವಿಮಾ ಪರಿಹಾರ ಸಿಗಲಿದೆ. ಆರೋಗ್ಯ ವಿಮೆಯಡಿ ಮರಣ ಪ್ರಕರಣಗಳಲ್ಲಿ ₹ 2 ಲಕ್ಷ ಅಪಘಾತ ಹಾಗೂ ₹ 2 ಲಕ್ಷ ಜೀವ ವಿಮೆ ಸೇರಿ ನಾಲ್ಕು ಲಕ್ಷ ರೂಗಳ ಪರಿಹಾರ ದೊರೆಯಲಿದೆ.