ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ; ಬರೋಬ್ಬರಿ 5 ರಿಂದ 6 ಲಕ್ಷ ಭಕ್ತರಿಗೆ ದಾಸೋಹದ ಸಿಹಿ

gavisiddeshwara
Spread the love

ನ್ಯೂಸ್ ಆ್ಯರೋ: ಕೊಪ್ಪಳದ ಆರಾಧ್ಯದೈವ.. ಗವಿಸಿದ್ದೇಶ್ವರ ಮಠದ ಜಾತ್ರೆಯ ಮಹಾರಥೋತ್ಸಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಜಾತಿ-ಭೇದ ಭಾವವಿಲ್ಲದೇ ಲಕ್ಷಾಂತರ ಭಕ್ತರು ಗವಿಸಿದ್ದೇಶ್ವರ ಸ್ವಾಮಿ ಸೇವೆಯಲ್ಲಿ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ರು.

ಬರೀ ಜಾತ್ರೆಯಲ್ಲ ಜಾಗೃತಿ ಜಾಥಾಗಳ ಮೂಲಕ ಜನರ ಬದುಕಿನಲ್ಲಿ ಪರಿವರ್ತನೆ ತಂದ ಯಾತ್ರೆಯೂ ಇದಾಗಿದೆ. ಗವಿಮಠ ಕಲ್ಯಾಣ ಕರ್ನಾಟಕದ ಬೆಳಕಿನ ಕಿರಣ. ಧರ್ಮರಕ್ಷಣೆ ಜೊತೆ ಶಿಕ್ಷಣ, ಅನ್ನದಾಸೋಹವನ್ನ ನೀಡ್ತಿರೋ ಕಲ್ಯಾಣ ಮಠ. ರಾಜ್ಯದ ಶ್ರೇಯೋಭಿವೃದ್ಧಿಯಲ್ಲಿ ಮಠದ ಪಾತ್ರ ಬಹುದೊಡ್ಡದು.

ಇವತ್ತು ನೂರಾರು ಇತಿಹಾಸ ಹೊಂದಿರೋ ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಅಜ್ಜನ ಜಾತ್ರಾ ಮಹಾರಥೋತ್ಸವನ್ನು ಭಕ್ತರು ಎಳೆಯೋದ್ರ ಮೂಲಕ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ, ಹೂ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಇಂದಿನಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯಲಿದ್ದು, ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಅಜ್ಜನ ದರ್ಶನ ಪಡೆದಿದ್ದಾರೆ. ಗವಿಮಠದ ಜಾತ್ರೆ ಅಂದ್ರೆ ದಕ್ಷಿಣ ಭಾರತದ ಮಹಾ ಕುಂಭಮೇಳವೆಂದೇ ಪ್ರಸಿದ್ಧಿ.

ಗವಿಸಿದ್ಧೇಶ್ವರ ಜಾತ್ರೆ ಅಂದ್ರೆ ಮನುಕುಲದ ಉದ್ಧಾರಕ್ಕಾಗಿ ಪೂರಕವಾಗುವ ಯೋಜನೆಗಳನ್ನ ಅನುಷ್ಠಾನಕ್ಕೆ ತರೋ ಮಹಾಯಾತ್ರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಾಗೃತಿಯ ಅಭಿಯಾವನ್ನ ಹಮ್ಮಿಕೊಳ್ಳಲಾಗಿದೆ. ಸುಪ್ರಸಿದ್ಧ ಗವಿಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಾರಣಾಸಿಯಿಂದ ಬಂದ ಶ್ರೀ ರುದ್ರಮುನಿ ಶಿವಯೋಗಿಗಳು ಮಠವನ್ನ ಸ್ಥಾಪಿಸಿದ ಮೂಲ ಗುರುಗಳು.

Gavisiddeshwara

ಅವರಿಂದ ಶುರುವಾದ ಈ ಗವಿಮಠ ಪರಂಪರೆಯಲ್ಲಿ ಈಗ 18ನೇ ಪೀಠಾಧಿಪತಿಯಾಗಿ ಅಭಿನವ ಶ್ರೀ ಗವಿಸಿದ್ದೇಶ್ವ ಸ್ವಾಮೀಜಿಯವ್ರು ಇದ್ದಾರೆ. ಪ್ರತಿವರ್ಷ 11 ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮಿಗಳ ಸ್ಮರಣಾರ್ಥವಾಗಿ ಈ ಮಹಾಜಾತ್ರೆ ನಡೆಯುತ್ತದೆ.

ಜಾತ್ರೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತರಿಗಾಗಿ ಮಹಾಪ್ರಸಾದವೇ ಸಿದ್ಧವಾಗ್ತಿದೆ. ರೊಟ್ಟಿ, ಹೋಳಿಗೆ, ಚಟ್ಟಿ, 20 ಲಕ್ಷಕ್ಕೂ ಹೆಚ್ಚು ಸಜ್ಜೆ, 50ಕ್ವಿಂಟಲ್ ಶೇಂಗಾ ಹೋಳಿಗೆಯನ್ನು ಈಗಾಗಲೇ ಭಕ್ತರು ಈಗಾಗಲೇ ಮಠಕ್ಕೆ ಸಲ್ಲಿಸಿದ್ದಾರೆ.

ಮಠಕ್ಕೆ ಬರೋ ಭಕ್ತರಿಗೆ 16 ಲಕ್ಷ ಜಿಲೇಬಿಯನ್ನ 200 ಬಾಣಸಿಗರು ತಯಾರಿ ಕೂಡ ಮಾಡ್ತಿದ್ದಾರೆ. ಇವತ್ತು ಬರೋಬ್ಬರಿ 5ರಿಂದ 6 ಲಕ್ಷ ಭಕ್ತರಿಗೆ ದಾಸೋಹ ಸಿದ್ಧವಾಗಿತ್ತು. ಒಂದು ಕಡೆ ಭಕ್ತರು ಗದ್ದುಗೆ ದರ್ಶನ ಪಡೆದು ತಾವು ಕೂಡಿಟ್ಟ ಹಣವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಇನ್ನು ದಕ್ಷಿಣ ಭಾರತದ ಕುಂಭ ಎಂದೇ ಪ್ರಸಿದ್ಧವಾದ ಗವಿಸಿದ್ದೇಶ್ವರ ಜಾತ್ರೆಗೆ ಸುಮಾರು 8 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಭದ್ರತೆ ಸಂಬಂಧ ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಐಜಿ, ಎಸ್​ಪಿ, ಇಬ್ಬರು ಅಡಿಷನಲ್ ಎಸ್​ಪಿ, 20 ಡಿಎಸ್​ಪಿಜಿ ಅಧಿಕಾರಿಗಳು, 30 ಇನ್​ಸ್ಪೆಕ್ಟರ್ಸ್​, 60 ಪಿಎಸ್​, 1500 ಪೊಲೀಸ್ ಕಾನ್​ಸ್ಟೆಬಲ್ಸ್, ಹೋಂ ಗಾರ್ಡ್ಸ್​, 5 ಕೆಎಸ್​ಆರ್​ಪಿ, 10 ಡಿಆರ್​ ಸೇರಿ ಭದ್ರತೆ ನೀಡಲಾಗುತ್ತಿದೆ ಎಂದು ಎಸ್​​ಪಿ ಡಾ.ರಾಮ್ ಎಲ್ ಅರಸಿದ್ಧಿ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *