ಹಿಂದೂ ಸಂಪ್ರದಾಯದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಪತ್ನಿ‌ಯ ಸೀಮಂತ – ಆ ಕ್ಷಣಗಳು ಹೇಗಿತ್ತು ಗೊತ್ತಾ? ವೈರಲ್ ಫೋಟೋಸ್ ಇಲ್ಲಿವೆ ನೋಡಿ..

ಹಿಂದೂ ಸಂಪ್ರದಾಯದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಪತ್ನಿ‌ಯ ಸೀಮಂತ – ಆ ಕ್ಷಣಗಳು ಹೇಗಿತ್ತು ಗೊತ್ತಾ? ವೈರಲ್ ಫೋಟೋಸ್ ಇಲ್ಲಿವೆ ನೋಡಿ..

ನ್ಯೂಸ್ ಆ್ಯರೋ‌ : ಆರ್.ಸಿ.ಬಿ. ತಂಡದ ಸ್ಟಾರ್ ಆಲ್ ರೌಂಡರ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಪತ್ನಿ ವಿನಿ ರಾಮನ್ ಅವರ ಸೀಮಂತ ಭಾರತೀಯ ಶೈಲಿಯಲ್ಲಿ ನಡೆಯಿತು. ಸಮಾರಂಭದ ಫೋಟೋಗಳನ್ನು ವಿನಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಭಾರತೀಯ ಸಂಪ್ರದಾಯ

ಸಮಾರಂಭದಲ್ಲಿ ವಿನಿ ಭಾರತೀಯ ಶೈಲಿಯಂತೆ ನೀಲಿ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಗೆ ಬೊಟ್ಟು ಇಟ್ಟು ಕಂಗೊಳಿಸಿದರು. ಹಿರಿಯ ಸಂಬಂಧಿಕರು ಆರತಿ ಎತ್ತಿ ಗರ್ಭಿಣಿ ವಿನಿಗೆ ಆರ್ಶೀರ್ವಾದ ಮಾಡಿದರು.

ತಮಿಳುನಾಡು ಮೂಲದ ವಿನಿ ರಾಮನ್ ಅವರನ್ನು ಮ್ಯಾಕ್ಸ್ ವೆಲ್ 2022ರ ಮಾರ್ಚ್ 27ರಂದು ವಿವಾಹವಾಗಿದ್ದರು. ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಇವರ ವಿವಾಹ ಸಮಾರಂಭ ಜರಗಿತ್ತು. ಸೆಪ್ಟಂಬರ್ ನಲ್ಲಿ ಮಗು ಜನಿಸುವ ನಿರೀಕ್ಷೆ ಇದೆ.

2023ರ ಸೆಪ್ಟಂಬರ್ ನಲ್ಲಿ ಒಂದು ಕಾಮನಬಿಲ್ಲು ನಮ್ಮ ಬದುಕಿನಲ್ಲಿ ಬರಲಿದೆ ಎಂದು ಘೋಷಿಸಲು ನಾನು ಮತ್ತು ಮ್ಯಾಕ್ಸ್ ವೆಲ್ ಭಾವುಕರಾಗಿದ್ದೇವೆ ಎಂದು ಮೇಯಲ್ಲಿ ವಿನಿ ಬರೆದುಕೊಂಡಿದ್ದರು.

29 ವರ್ಷದ ವಿನಿ ರಾಮನ್ ಮೆಲ್ಬೋರ್ನ್ ನಲ್ಲಿ ಜನಿಸಿದರು. ಅವರು ವೈದ್ಯಕೀಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಮ್ಯಾಕ್ಸ್ ವೆಲ್ ಸದ್ಯ ಟಿ-20 ಬ್ಲಾಸ್ಟ್ 2023 ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *