ಬ್ಯಾಟ್ ಪ್ರಾಯೋಜಕತ್ವದಿಂದಲೇ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ ಈ ಕ್ರಿಕೆಟ್ ಕಲಿಗಳು – ಈ ಆಟಗಾರನಂತೂ ವರ್ಷಕ್ಕೆ ಪಡೆಯೋದು ಬರೋಬ್ಬರಿ 12 ಕೋಟಿ..!!

ಬ್ಯಾಟ್ ಪ್ರಾಯೋಜಕತ್ವದಿಂದಲೇ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ ಈ ಕ್ರಿಕೆಟ್ ಕಲಿಗಳು – ಈ ಆಟಗಾರನಂತೂ ವರ್ಷಕ್ಕೆ ಪಡೆಯೋದು ಬರೋಬ್ಬರಿ 12 ಕೋಟಿ..!!

ನ್ಯೂಸ್ ಆ್ಯರೋ : ಕ್ರಿಕೆಟ್ ಅನ್ನೋದು ಹಿಂದಿನಂತಿಲ್ಲ. ಕೆಲವು ದಶಕಗಳ ಹಿಂದೆ ಮಂಕಾಗಿದ್ದ ಕ್ರಿಕೆಟ್ ಅಂಗಳ ಐಪಿಎಲ್ ನಂತರ‌ ಚಿನ್ನದ ಕುದುರೆಯಾಗಿದೆ. ಕ್ರಿಕೆಟಿಗರಂತೂ ಕಾಲಿಗೆ ಹಾಕುವ ಶೂ ನಿಂದ ಹಿಡಿದು, ತಲೆಗೆ ಹಾಕುವ ಕ್ಯಾಪ್ ತನಕ ಎಲ್ಲದರಿಂದಲೂ ಕೋಟಿ ಗಟ್ಟಲೆ ಹಣ ಮಾಡುತ್ತಾರೆ. ಕ್ರಿಕೆಟಿಗರ ಬ್ಯಾಟ್ ಸ್ಪಾನ್ಸರ್​​ಶಿಪ್​ (bat sponsorship) ವಿಚಾರದಲ್ಲೂ ಕೋಟಿಯಲ್ಲೇ ಲೆಕ್ಕ. ಹಾಗಿದ್ದರೆ ಈ ಬ್ಯಾಟ್ ಸ್ಪಾನ್ಸರ್​​ಶಿಪ್​ ನಿಂದ ಅತೀ‌ ಹೆಚ್ಚು ಹಣ ಸಂಪಾದಿಸುವ ಕ್ರಿಕೆಟಿಗ ಯಾರು? ಯಾವೆಲ್ಲ ಆಟಗಾರರು ಈ ಸಾಲಿನಲ್ಲಿದ್ದಾರೆ ನೋಡೋಣ ಬನ್ನಿ.

100 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಕಿಂಗ್ ಕೊಹ್ಲಿ!

ಭಾರತ ಮಾತ್ರವಲ್ಲದೇ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ರನ್ ಮಷಿನ್ ವಿರಾಟ್ ಕೊಹ್ಲಿಗೆ ಕ್ರಿಕೆಟ್ ವಲಯದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಈ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ MRF ಕಂಪೆನಿಯೊಂದಿಗೆ 8 ಕೋಟಿ ಡೀಲ್ ಗೆ ಸಹಿ‌ ಹಾಕಿದ್ದರು. ಬ್ಯಾಟ್ ಸ್ಪಾನ್ಸರ್​​ಶಿಪ್​​ನಿಂದ ಅತಿ ಹೆಚ್ಚು ಹಣ ಗಳಿಸುವ ಆಟಗಾರ ಎಂಬ ಹಿರಿಮೆ ಅವರದ್ದಾಗಿತ್ತು. ಆದರೆ ಇದೀಗ ಕಿಂಗ್ ಕೊಹ್ಲಿ MRF ನೊಂದಿಗೆ ಬ್ಯಾಟ್ ಸ್ಪಾನ್ಸರ್​​ಶಿಪ್​​ಗಾಗಿ ಬರೋಬ್ಬರಿ 100 ಕೋಟಿಗೆ ಸಹಿ ಹಾಕಿ ಸಚಿನ್ ದಾಖಲೆ ಮುರಿದಿದ್ದಾರೆ.

ಬ್ಯಾಟ್ ನಿಂದ ಕೊಹ್ಲಿಗೆ ವರ್ಷಕ್ಕೆ 12 ಕೋಟಿ..!

ಸಚಿನ್ ದಾಖಲೆ ಪುಡಿಗಟ್ಟಿರುವ ಕಿಂಗ್ ಕೊಹ್ಲಿ MRF ಜೊತೆಗೆ‌ 2025 ವರೆಗೆ ಬ್ಯಾಟ್ ಸ್ಪಾನ್ಸರ್​​ಶಿಪ್​​ಗಾಗಿ 100 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ನೋಡುವುದಾದರೆ ಡೆಲ್ಲಿ ಡ್ಯಾಶರ್ ವರ್ಷವೊಂದಕ್ಕೆ MRF ನಿಂದ ಬರೋಬ್ಬರಿ 12 ಕೋಟಿ ಬಾಚಿಕೊಳ್ಳುತ್ತಾರೆ. ಆ ಮೂಲಕ ಬ್ಯಾಟ್ ಸ್ಪಾನ್ಸರ್​​ಶಿಪ್​​ನಿಂದ ಅತೀ ಹೆಚ್ಚ ಆದಾಯ ಗಳಿಸುವ ಜಗತ್ತಿನ ನಂ. 1 ಆಟಗಾರ ಎಂಬ ದಾಖಲೆ ಕೊಹ್ಲಿ ತನ್ನದಾಗಿಸಿಕೊಂಡಿದ್ದಾರೆ.

ವರ್ಷಕ್ಕೆ 4 ಕೋಟಿ ಗಳಿಸುವ ಹಿಟ್ ಮ್ಯಾನ್..!

ಕ್ರಿಕೆಟ್ ಜಗತ್ತಿನಲ್ಲಿ ಹಿಟ್ ಮ್ಯಾನ್ ಎಂದೇ ಕರೆಯಲ್ಪಡುವ ರೋಹಿತ್ ಶರ್ಮಾ ಕೂಡ ಬ್ಯಾಟ್ ಸ್ಪಾನ್ಸರ್​​ಶಿಪ್​​ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬ್ಯಾಟ್ ಸ್ಪಾನ್ಸರ್​​ಶಿಪ್​​ನಿಂದ ಅತೀ‌ ಹೆಚ್ಚು ಆದಾಯ ಗಳಿಸುವವರ ಪಟ್ಟಿಯಲ್ಲಿ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ. CEAT ಟೈರ್​ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಹಿಟ್ ಮ್ಯಾನ್, ವರ್ಷಕ್ಕೆ 4 ಕೋಟಿ ಹಣ ಗಳಿಸುತ್ತಿದ್ದಾರೆ.

ವರ್ಷಕ್ಕೆ ವಾರ್ನರ್ ಜೇಬಿಗೆ 3 ಕೋಟಿ!

ಆಸ್ಟ್ರೇಲಿಯಾ ತಂಡದ ಹೊಡಿಬಡಿ ದಾಂಡಿಕ, ಪ್ರತಿಭಾನ್ವಿತ ಬ್ಯಾಟರ್ ಡೇವಿಡ್ ವಾರ್ನರ್ ಕೂಡ ಹಣ ಗಳಿಕೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. DSC ಬ್ರ್ಯಾಂಡ್​​ ಜೊತೆಗೆ ಟೈ ಅಪ್​ ಆಗಿರೋ ವಾರ್ನರ್,​ ವಾರ್ಷಿಕವಾಗಿ 3.3 ಕೋಟಿ ಹಣವನ್ನ ಬ್ಯಾಟ್​​ ಸ್ಪಾನ್ಸರ್​​ಶಿಪ್​ನಿಂದ ಆದಾಯ ಗಳಿಸುತ್ತಾರೆ.

ಗುಡ್ ಬೈ ಹೇಳಿದ್ರೂ ಕುಗ್ಗಿಲ್ಲ‌ ಧೋನಿ ಹವಾ..!

ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡಿದ್ದರೂ‌ ಕೂಡ ಜಾಹೀರಾತುದಾರರಿಗೆ ಮಾಹಿ ಈಗಲು ಚಿನ್ನದ ಮೊಟ್ಟೆ ಇಡುವ ಕೋಳಿ. ಬ್ಯಾಟ್ ಸ್ಪಾನ್ಸರ್​​ಶಿಪ್​​ನಿಂದ ಧೋನಿ ವಾರ್ಷಿಕ 2 ಕೋಟಿ ಆದಾಯ ಈಗಲೂ ಗಳಿಸುತ್ತಿದ್ದಾರೆ. ಇನ್ನು ರಿಷಭ್​ ಪಂತ್ 2 ಕೋಟಿ, ಜೋ ರೂಟ್ 1.8 ಕೋಟಿ, ಕೇನ್​ ವಿಲಿಯಮ್​ಸನ್​ 1.64 ಕೋಟಿ, ಬಾಬರ್​ ಅಝಂ 1.14 ಕೋಟಿ ಹಣವನ್ನು ಬ್ಯಾಟ್ ಸ್ಪಾನ್ಸರ್​​ಶಿಪ್​​ನಿಂದ ಗಳಿಸುತ್ತಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *