ಮೈದಾನದಲ್ಲೇ ಆಟಗಾರ್ತಿಯ ತುಟಿಗೆ ಚುಂಬಿಸಿದ ಸ್ಪ್ಯಾನಿಸ್ ಫುಟ್ಬಾಲ್ ಅಧ್ಯಕ್ಷ – ವಿಡಿಯೋ ವೈರಲ್, ವ್ಯಾಪಕ ಟೀಕೆ ಬೆನ್ನಲ್ಲೇ ಕ್ಷಮೆಯಾಚಿಸಿದ ರುಬಿಯಾಲ್ಸ್

ಮೈದಾನದಲ್ಲೇ ಆಟಗಾರ್ತಿಯ ತುಟಿಗೆ ಚುಂಬಿಸಿದ ಸ್ಪ್ಯಾನಿಸ್ ಫುಟ್ಬಾಲ್ ಅಧ್ಯಕ್ಷ – ವಿಡಿಯೋ ವೈರಲ್, ವ್ಯಾಪಕ ಟೀಕೆ ಬೆನ್ನಲ್ಲೇ ಕ್ಷಮೆಯಾಚಿಸಿದ ರುಬಿಯಾಲ್ಸ್

ನ್ಯೂಸ್‌ ಆ್ಯರೋ : ಸ್ಪೇನ್‌ನ ಮಹಿಳಾ ವಿಶ್ವಕಪ್ ಪದಕ ಹಂಚುವ ವೇಳೆ ಸ್ಪ್ಯಾನಿಸ್ ಫುಟ್ಬಾಲ್ ಫೆಡರೇಶನ್‌ನ ಅಧ್ಯಕ್ಷ ಲೂಯಿಸ್ ರುಬಿಯಾಲ್ಸ್ ಅವರು ಆಟಗಾರ್ತಿ ಜೆನ್ನಿ ಹೆರ್ಮೊಸೊ ತುಟಿಗೆ ಮುತ್ತನ್ನು ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದು, ವ್ಯಾಪಕ ಟೀಕೆ ಬೆನ್ನಲ್ಲೇ ಅಧ್ಯಕ್ಷ ಕ್ಷಮೆಯನ್ನು ಕೋರಿದ್ದಾರೆ.

ಆಕೆ ಚಿನ್ನದ ಪದಕವನ್ನು ಪಡೆದ ನಂತರ ತುಟಿಗಳ ಮೇಲೆ ಹೆರ್ಮೊಸೊ ಮುತ್ತಿಟ್ಟಿದ್ದಾರೆ. ಈ ಅನಿರೀಕ್ಷಿತ ಕ್ರಿಯೆಯು ವ್ಯಾಪಕ ಟೀಕೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಸ್ಪ್ಯಾನಿಷ್ ಮಹಿಳಾ ಫುಟ್‌ ಬಾಲ್‌ ತಂಡಕ್ಕೆ ಸಂತೋಷದಾಯಕ ಸಂದರ್ಭವಾಗಿರಬೇಕಾಗಿದ್ದ ಹೊತ್ತಲ್ಲಿ ಅಧ್ಯಕ್ಷರ ಈ ನಡವಳಿಕೆಯಿಂದ ಖುಷಿ ಮಾಯವಾಗಿದೆ.

ಇನ್ನೂ ವಿಶ್ವಕಪ್ ತಂದುಕೊಡುವಲ್ಲಿ ಮುಖ್ಯಪಾತ್ರ ವಹಿಸಿದ ಆಟಗಾರ್ತಿ ಹೆರ್ಮೊಸೊ ಅವರು ಈ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಿಸ್ ನೀಡಿದ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಹೇ ಆ ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

ವ್ಯಾಪಕ ಟೀಕೆ ಬಳಿಕ ಪ್ರತಿಕ್ರಿಯಿಸಿದ ಅಧ್ಯಕ್ಷ ರುಬಿಯಾಲ್ಸ್‌ ಅವರು, “ಗೆದ್ದ ಖುಷಿಯಲ್ಲಿ ಸಹಜವಾಗಿ ನಡೆದುಕೊಂಡ ರೀತಿ, ನನ್ನ ನಡವಳಿಕೆ ಸಂಪೂರ್ಣವಾಗಿ ತಪ್ಪು, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.

ಇನ್ನೂ ರುಬಿಯಾಲ್ಸ್‌ ನಡವಳಿಕೆಗೆ ಸ್ಪ್ಯಾನಿಸ್‌ ಸರ್ಕಾರದ ರಾಜಕಾರಣಿಗಳು ಭಾರೀ ವಿರೋಧ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸ್ಪೇನ್‌ನ ಸಮಾನತೆಯ ಮಂತ್ರಿ ಐರೀನ್ ಮೊಂಟೆರೊ ಅವರು “ಇದು ಮಹಿಳೆಯರು ಪ್ರತಿದಿನವೂ ಅನುಭವಿಸುವ ಲೈಂಗಿಕ ದೌರ್ಜನ್ಯದ ಒಂದು ರೂಪವಾಗಿದೆ.” ಎಂದು ಹೇಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *