PKL 2023 AUCTION : ಇಂದು ಪ್ರೋ ಕಬಡ್ಡಿ ಲೀಗ್ ನ ಆಟಗಾರರ ಹರಾಜು – ಭರ್ಜರಿ ಮೊತ್ತಕ್ಕೆ ಸೇಲಾಗುವ ನಿರೀಕ್ಷೆಯಲ್ಲಿ ಸ್ಟಾರ್ ಆಟಗಾರರು

PKL 2023 AUCTION : ಇಂದು ಪ್ರೋ ಕಬಡ್ಡಿ ಲೀಗ್ ನ ಆಟಗಾರರ ಹರಾಜು – ಭರ್ಜರಿ ಮೊತ್ತಕ್ಕೆ ಸೇಲಾಗುವ ನಿರೀಕ್ಷೆಯಲ್ಲಿ ಸ್ಟಾರ್ ಆಟಗಾರರು

ನ್ಯೂಸ್ ಆ್ಯರೋ : ಈ ಬಾರಿಯ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಇಂದು ಮತ್ತು ನಾಳೆ ಮುಂಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸ್ಟಾರ್ ಆಟಗಾರರಾದ ಪವನ್ ಶೆರಾವತ್, ವಿಕಾಸ್ ಖಂಡೋಲಾ, ಇರಾನ್ ಫಜಲ್ ಅತ್ರಾಚಲಿ ಸೇರಿ ದೇಶೀಯ ಆಟಗಾರರು ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇರಿಸಲಾಗಿದೆ.

ಪ್ರೋ ಕಬಡ್ಡಿ ಲೀಗ್ ನಲ್ಲಿ ಪಾಲ್ಗೊಳ್ಳಲಿರುವ 12 ತಂಡಗಳು ಬಹುತೇಕ ಆಟಗಾರರನ್ನು ಬಿಡುಗಡೆ ಮಾಡಿವೆ. ಈ ಬಾರಿ 500ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲ ತಂಡಗಳಿಗೆ ಒಟ್ಟು 3 ಕೆಟಗರಿಯಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಎಲ್ಲ 12 ಫ್ರಾಂಚೈಸಿಗಳು ಹೊಸ ಆವೃತ್ತಿಗೆ ನೂತನ ತಂಡ ಸಿದ್ಧಗೊಳಿಸಬೇಕಿದೆ.

ಈ ಟೂರ್ನಿಯು ಯಶಸ್ವಿ 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಾಲಿ ಆವೃತ್ತಿಯ ಹೊಸ ಲಾಂಛನ ಅನಾವರಣಗೊಳಿಸಲಾಗುವುದು ಎನ್ನಲಾಗಿದೆ. ಪ್ರತಿ ತಂಡಗಳು ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಕೊಂಡುಕೊಳ್ಳಬಹುದು. ಖೇಲೋ ಇಂಡಿಯಾ ಗೇಮ್ಸ್‌ನ ಫೈನಲ್ ಆಡಿದ ಆಗ್ರ 2 ತಂಡಗಳ 24 ಆಟಗಾರರು ಹರಾಜಿಗೆ ಒಳಪಡಲಿದ್ದಾರೆ. ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 12 ತಂಡಗಳು 22 ಎಲೈಟ್ ಆಟಗಾರರ ಸಹಿತ ಒಟ್ಟು 84 ಆಟಗಾರರನ್ನು ರಿಟೇನ್ ಮಾಡಿಕೊಂಡಿವೆ.

ಈಗಾಗಲೇ A,B,C ಮತ್ತು D ವಿಭಾಗಗಳಾಗಿ ನಾಲ್ಕು ಕೆಟಗರಿಯಲ್ಲಿ ಆಟಗಾರರನ್ನು ವಿಂಗಡಿಸಲಾಗಿದೆ. ಆಟಗಾರರಿಗೆ ಕ್ರಮವಾಗಿ 13 ಮತ್ತು 9 ಲಕ್ಷ ರೂಪಾಯಿ ಮೂಲಬೆಲೆ ನಿಗದಿಪಡಿಸಲಾಗಿದೆ. ಎಲ್ಲಾ ತಂಡಗಳು 5 ಕೋಟಿ ರೂಪಾಯಿ ಬಜೆಟ್ ಮಿತಿ ಹೊಂದಿವೆ. ಮೊದಲ ದಿನ ಎ ಮತ್ತು ಬಿ ಕೆಟಗರಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಎರಡನೇ ದಿನ ಸಿ ಮತ್ತು ಡಿ ಕೆಟಗರಿ ಆಟಗಾರರ ಹರಾಜು ನಡೆಯಲಿದೆ. ಕಳೆದ ಬಾರಿಯ ಹರಾಜಿನಲ್ಲಿ ಪವನ್ ಶೆರಾವತ್ 2.26 ಕೋಟಿ ರೂ.ಗೆ ತಮಿಳ್ ತಲೈವಾಸ್ ತಂಡಕ್ಕೆ ಬಿಕರಿಯಾಗುವ ಮೂಲಕ ಟೂರ್ನಿ ಇತಿಹಾಸದ ದುಬಾರಿ ಆಟಗಾರ ಎನಿಸಿದ್ದರು.

ಹರಾಜು ಪ್ರಕ್ರಿಯೆ ಆರಂಭ:

ಸೋಮವಾರ ರಾತ್ರಿ 8ರಿಂದ
(ಎ-ಬಿ ಕೆಟಗರಿ ಆಟಗಾರರು)
ಮಂಗಳವಾರ: ಬೆಳಗ್ಗೆ 10ರಿಂದ
(ಸಿ-ಡಿ ಕೆಟಗರಿ ಆಟಗಾರರು)

*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್*

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *