M.S. Dhoni : ಒಂದು ಸೆಲ್ಫಿ ತೆಗೆಯೋಕೂ ಬರ್ಲಿಲ್ಲ ಮಾಹೀ..! – ಅಭಿಮಾನಿಗಳು ಕಿರಚಾಡಿದ ವಿಡಿಯೋ ವೈರಲ್ ಆಯ್ತು ನೋಡಿ..

M.S. Dhoni : ಒಂದು ಸೆಲ್ಫಿ ತೆಗೆಯೋಕೂ ಬರ್ಲಿಲ್ಲ ಮಾಹೀ..! – ಅಭಿಮಾನಿಗಳು ಕಿರಚಾಡಿದ ವಿಡಿಯೋ ವೈರಲ್ ಆಯ್ತು ನೋಡಿ..

ನ್ಯೂಸ್ ಆ್ಯರೋ : ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​ ಎಂಎಸ್​ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ವರ್ಷಗಳೇ ಕಳೆದು ಹೋಗಿದೆ.‌ ಆದರೆ ಅವರ ಜನಪ್ರಿಯತೆ ಒಂದಿನಿತೂ ಕಮ್ಮಿಯಾಗಿಲ್ಲ‌.

ಇಂತಿಪ್ಪ ಧೋನಿ ಕ್ರಿಕೆಟ್​ ಬಿಟ್ಟರೆ ಹೆಚ್ಚು ಇಷ್ಟ ಪಡುವ ವಸ್ತುಗಳು ಎಂದರೆ ಕಾರು, ಬೈಕ್​ಗಳು. ಇವುಗಳಂದರೆ ಮಾಜಿ ಕ್ಯಾಪ್ಟನ್​ಗೆ ಚಿಕ್ಕವಯಸ್ಸಿನಿಂದಲೂ ಹೆಚ್ಚು ಕ್ರೇಜ್. ಹೀಗಾಗಿಯೇ ತಮ್ಮ ಫಾರ್ಮ್​ಹೌಸ್​ನಲ್ಲಿ 100ಕ್ಕೂ ಹೆಚ್ಚು ಬೈಕ್​ಗಳನ್ನು ಕಲೆಕ್ಷನ್​ ಮಾಡಿಟ್ಟಿದ್ದಾರೆ.

ಸದ್ಯ ರಾಂಚಿಯ ಮನೆಯಲ್ಲಿರೋ ಕ್ರಿಕೆಟರ್​ ಬೈಕ್​ ಡ್ರೈವ್​ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಎಂ.ಎಸ್​ ಧೋನಿ ಹೆಲ್ಮೆಟ್​ ಧರಿಸಿಕೊಂಡು ಹೋಂಡಾ ರಾಪಿಸೋಲ್- 150 ಎನ್ನುವ ಬೈಕ್​ನ್ನು ಡ್ರೈವ್ ಮಾಡಿಕೊಂಡು ರಾಂಚಿಯ ಹೆದ್ದಾರಿಯಲ್ಲಿ ಸುತ್ತಾಡಿದ್ದಾರೆ.

ಈ ವೇಳೆ ಗೇಟ್ ಮೂಲಕ ಒಳಗೆ ತೆರಳುವಾಗ ಅಭಿಮಾನಿಗಳೆಲ್ಲ ಮಹಿ ಸರ್​.. ಸರ್
ಪ್ಲೀಸ್​ ಒನ್ ಸೆಲ್ಫಿ ಎಂದು ಕೇಳಿದ್ದಾರೆ. ಆದ್ರೆ ವೇಗವಾಗಿ ಬಂದ ಧೋನಿ ಯಾವುದಕ್ಕೂ ರೆಸ್ಪಾನ್ಸ್ ಮಾಡದೇ ಒಳ ಹೋಗಿದ್ದಾರೆ. ಸದ್ಯ ಇವರು ಬೈಕ್​ ಚಾಲನೆ ಮಾಡಿಕೊಂಡು ಗೇಟ್​ ಮೂಲಕ ಒಳ ಹೋಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಧೋನಿ ಬೈಕ್ ನಿಲ್ಲಿಸಿದರೂ ಭದ್ರತೆಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಬೈಕ್ ನಿಲ್ಲಿಸಿಲ್ಲ, ಧೋನಿ ಯಾವತ್ತಿಗೂ ನಮ್ಮ ನಾಯಕ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *