ಆಟಗಾರರ ನೇಮಕಕ್ಕೆ ಜ್ಯೋತಿಷಿಗೆ 15 ಲಕ್ಷ ಹಣ  ಪಾವತಿಸಿದ್ದ ಭಾರತ ಫುಟ್ಬಾಲ್ ತಂಡದ ಕೋಚ್? – ಏನಿದು ಜ್ಯೋತಿಷ್ಯ ಪುರಾಣ?

ಆಟಗಾರರ ನೇಮಕಕ್ಕೆ ಜ್ಯೋತಿಷಿಗೆ 15 ಲಕ್ಷ ಹಣ ಪಾವತಿಸಿದ್ದ ಭಾರತ ಫುಟ್ಬಾಲ್ ತಂಡದ ಕೋಚ್? – ಏನಿದು ಜ್ಯೋತಿಷ್ಯ ಪುರಾಣ?

ನ್ಯೂಸ್ ಆ್ಯರೋ‌ : ಕ್ರಿಕೆಟ್ ನಲ್ಲಿ ಖ್ಯಾತಿ ಗಳಿಸಿರುವ ಭಾರತದ ಕ್ರೀಡಾರಂಗ ಫುಟ್ಬಾಲ್ ವಿಚಾರದಲ್ಲಿ ಇನ್ನೂ ಅಂಬೆಗಾಲಿಡುತ್ತಿದೆ. ಈ ಮಧ್ಯೆ ಭಾರತೀಯ ಫುಟ್ಬಾಲ್ ಕೋಚ್ ಇಗೊರ್ ಸ್ಟಿಮಾಕ್ ಜ್ಯೋತಿಷಿಯೊಬ್ಬರ ನೆರವಿನಿಂದ ತಂಡಕ್ಕೆ 11 ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜ್ಯೋತಿಷಿ ಭೂಪೇಶ್ ಶರ್ಮಾ ಅವರಿಗೆ ಸ್ಟಿಮಾಕ್ ತಮ್ಮ ಅವಧಿಯ 2 ತಿಂಗಳಿನಲ್ಲಿ ಸುಮಾರು 12-15 ಲಕ್ಷ ರೂ.ಗಳನ್ನು ಇದಕ್ಕಾಗಿ ಪಾವತಿಸಿದ್ದಾರೆ ಎನ್ನಲಾಗಿದೆ.

ಯಾವಾಗ?

ವರದಿಯೊಂದರ ಪ್ರಕಾರ, 2022ರ ಮೇ ಮತ್ತು ಜೂನ್ ಅವಧಿಯಲ್ಲಿ ಸ್ಟಿಮಾಕ್ ಮತ್ತು ಶರ್ಮಾ ನಡುವೆ 100ಕ್ಕಿಂತ ಹೆಚ್ಚು ಸಂದೇಶಗಳು ವಿನಿಮಯವಾಗಿವೆ. ಈ ಸಮಯದಲ್ಲಿ ಭಾರತೀಯ ಫುಟ್ಬಾಲ್ ತಂಡ ಕಾಂಬೋಡಿಯಾ, ಅಫ್ಘಾನಿಸ್ತಾನ, ಹಾಂಗ್ ಕಾಂಗ್ ಮತ್ತು ಜೋರ್ಡಾನ್ ವಿರುದ್ಧ 4 ಪಂದ್ಯಗಳನ್ನು ಆಡಿತ್ತು.

ಸ್ಟಿಮಾಕ್ ಕಳುಹಿಸಿದ ಸಂದೇಶದಲ್ಲೇನಿದೆ?

ಹಾಯ್ ಭೂಪೇಶ್, ನಿಮ್ಮನ್ನು ಭೇಟಿಯಾಗಿದ್ದು ಸಂತೋಷ ಮತ್ತು ಭವಿಷ್ಯದ ಕೆಲಕ್ಕಾಗಿ ನಿಮ್ಮೊಂದಿಗೆ ಚರ್ಚೆ ನಡೆಸಲು ಉತ್ಸುಕನಾಗಿದ್ದೇನೆ. ಈ ಆಟಗಾರರ ಬಗ್ಗೆ ಅಭಿಪ್ರಾಯ ತಿಳಿಸಲು ನಿಮ್ಮನ್ನು ಕೋರಿಕೊಳ್ಳುತ್ತಿದ್ದೇನೆ ಎಂದು ಸ್ಟಿಮಾಕ್ ಸಂದೇಶ ಕಳುಹಿಸಿದ್ದಾರೆ. ಬಳಿಕ ಸ್ಟಿಮಾಕ್ 4 ಆಟಗಾರರ ಜನನ ಸ್ಥಳ, ದಿನಾಂಕವನ್ನು ಜ್ಯೋತಿಷಿಗೆ ಕಳುಹಿಸಿದ್ದರು ಎಂದು ವರದಿ ಹೇಳಿದೆ.

ಈ ಸಂದೇಶ 2002ರ ಜೂನ್ 9ರಂದು ರವಾನೆಯಾಗಿತ್ತು. ಇದಾದ 2 ದಿನಗಳ ಬಳಿಕ ಕೋಲ್ಕತ್ತಾದಲ್ಲಿ ಏಷ್ಯನ್ ಕಪ್ ಕ್ವಾಲಿಫಯರ್ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ಎದುರಿಸಿತ್ತು.

ಜೂನ್ 11ರ ಪಂದ್ಯಕ್ಕಾಗಿ ನಾನು ಕಳುಹಿಸಿರುವ ಆಟಗಾರರ ಪಟ್ಟಿಯನ್ನು ಪರಿಶೀಲಿಸಿ ಎಂದು ಸ್ಟಿಮಾಕ್ ಅವರಿಗೆ ಶರ್ಮಾ ಇನ್ನೊಂದು ಮೆಸೇಜ್ ಕಳುಹಿಸಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯೆಯೂ ಲಭಿಸಿದೆ. ಗುಡ್, ಅತಿಯಾದ ಆತ್ಮವಿಶ್ವಾಸವನ್ನು ಕಡಿಮೆ ಮಾಡಬೇಕು; ಈತನಿಗೆ ಉತ್ತಮ ದಿನ ಆದರೆ ಕೋಪವನ್ನು ನಿಯಂತ್ರಿಸಬೇಕು; ಇವರ ದಿನ ಉತ್ತಮವಾಗಿಲ್ಲ ಎಂದೆಲ್ಲ ಶರ್ಮಾ ಉತ್ತರಿಸಿದ್ದಾರೆ.

ಸ್ಟಿಮಾಕ್ ಅವರನ್ನು ಶರ್ಮಾ ಅವರಿಗೆ ಪರಿಚಯಿಸಿರುವುದನ್ನು ಅಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಮಾಜಿ ಪ್ರಧಾನ ಕಾರ್ಯದರ್ಶಿ ಕೌಶಲ್ ದಾಸ್ ದೃಢಪಡಿಸಿದ್ದಾರೆ. ಆ ಸಮಯದಲ್ಲಿ ಭಾರತ ಏಷ್ಯನ್ ಕಪ್ ಗೆ ಅರ್ಹತೆ ಪಡೆಯುತ್ತದೆಯೇ ಎಂದು ನನಗೆ ಕಾಡುತ್ತಿತ್ತು. ಭಾರತ ಅರ್ಹತೆ ಪಡೆಯುವುದೇ ನನಗೆ ಮುಖ್ಯವಾಗಿತ್ತು. ಆದ್ದರಿಂದ ನಾನು ಶರ್ಮಾ ಬಳಿ ಹೇಳಿದ್ದೆ, ಕೋಚ್ ನಿಮ್ಮ ಜೊತೆ ಸಂಪರ್ಕದಲ್ಲಿರುತ್ತಾರೆ. ಒಂದು ವೇಳೆ ನಿಮ್ಮ ಸೇವೆ ಇಷ್ಟವಾದರೆ ಅವರು ಅದನ್ನು ಬಳಸಿಕೊಳ್ಳಲಿದ್ದಾರೆ ಎಂದಿದ್ದೆ ಎಂದು ಕೌಶಲ್ ಹೇಳಿದ್ದಾರೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *