IPL 2023 : ಗಿಲ್ ಸಹೋದರಿಗೆ ಏನ್ ಮಾಡ್ತಿರೋ ಮಾಡಿ – ಗಿಲ್ ಶತಕದ ಬೆನ್ನಲ್ಲೇ RCB ಅಭಿಮಾನಿಗಳ ಪುಂಡಾಟ.‌!!

IPL 2023 : ಗಿಲ್ ಸಹೋದರಿಗೆ ಏನ್ ಮಾಡ್ತಿರೋ ಮಾಡಿ – ಗಿಲ್ ಶತಕದ ಬೆನ್ನಲ್ಲೇ RCB ಅಭಿಮಾನಿಗಳ ಪುಂಡಾಟ.‌!!

ನ್ಯೂಸ್ ಆ್ಯರೋ‌ : ಐಪಿಎಲ್‍ನಲ್ಲಿ ರವಿವಾರ ನಡೆದ ಗುಜರಾತ್ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬೆಂಗಳೂರು ಸೋತು ಟೂರ್ನಿಯಿಂದ ನಿರ್ಗಮಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 197 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿಯೂ, ವಿರಾಟ್ ಕೊಹ್ಲಿ ಅವರ ಶತಕದ ಹೊರತಾಗಿಯೂ ಸೋತಿತ್ತು. ಇದಕ್ಕೆ ಮುಖ್ಯ ಕಾರಣ ಗುಜರಾತ್ ತಂಡದ ಶುಭ್‍ಮನ್ ಗಿಲ್ ಅವರ ಸ್ಫೋಟಕ ಶತಕ. ಇದೀಗ ಆರ್.ಸಿ.ಬಿ. ಅಭಿಮಾನಿಗಳು ಎಂದು ಕರೆಯಿಸಿಕೊಳ್ಳುವ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಲು ಆರಂಭಿಸಿದ್ದಾರೆ.

ಪಂದ್ಯ ಮುಗಿದ ಕೂಡಲೇ ಕಿಡಿಗೇಡಿಗಳು ಗಿಲ್ ಅವರನ್ನು ನಿಂದಿಸಲು ಆರಂಭಿಸಿದರು. ಅವರ ಇನ್‍ಸ್ಟಾಗ್ರಾಮ್ ಪೋಸ್ಟ್ ಗಳು ಮತ್ತು ಟ್ವಿಟರ್ ನಲ್ಲಿ ಅಸಹ್ಯಕರ ಮತ್ತು ದ್ವೇಷಪೂರಿತ ಕಮೆಂಟ್ ಹಾಕುತ್ತಿದ್ದಾರೆ.

ಇದು ಯಾವ ಮಟ್ಟಕ್ಕೆ ಅತಿರೇಕಕ್ಕೆ ಹೋಗಿದೆ ಎಂದರೆ ಗಿಲ್ ಸಹೋದರಿಯ ಇನ್‍ಸ್ಟಾಗ್ರಾಮ್ ಖಾತೆಯ ಲಿಂಕ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಓರ್ವ ಏನೇನು ಮಾಡಬೇಕೋ ಮಾಡಿ ಎಂದು ಬರೆದುಕೊಂಡಿದ್ದಾನೆ.

ಇನ್ನೋರ್ವ ರಿಷಬ್ ಪಂತ್ ಎದುರಿಸಿದ್ದ ಭೀಕರ ಅಪಘಾತ ಗಿಲ್‍ಗೆ ಆಗಬೇಕಿತ್ತು ಎಂದು ಶಿಷ್ಟಾಚಾರವನ್ನೂ ಮೀರಿ ಬರೆದುಕೊಂಡಿದ್ದಾನೆ. ಈ ಎಲ್ಲ ವಿಕೃತ ಮನೋಭಾವದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *