Heath Streak Alive : ಹೀತ್ ಸ್ಟ್ರೀಕ್ ಸತ್ತಿಲ್ಲ ಎಂದ ಹೆನ್ರಿ ಒಲೊಂಗಾ – ವಾಟ್ಸಾಪ್ ಸ್ಕ್ರೀನ್ ಶಾಟ್ ಶೇರ್ ಮಾಡಿದ ಒಲೊಂಗಾ ಹೇಳಿದ್ದೇನು?

Heath Streak Alive : ಹೀತ್ ಸ್ಟ್ರೀಕ್ ಸತ್ತಿಲ್ಲ ಎಂದ ಹೆನ್ರಿ ಒಲೊಂಗಾ – ವಾಟ್ಸಾಪ್ ಸ್ಕ್ರೀನ್ ಶಾಟ್ ಶೇರ್ ಮಾಡಿದ ಒಲೊಂಗಾ ಹೇಳಿದ್ದೇನು?

ನ್ಯೂಸ್ ಆ್ಯರೋ : ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ಆಲ್ ರೌಂಡರ್ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ 49 ವರ್ಷದ ಜಿಂಬಾಬ್ವೆ ಲೆಜೆಂಡ್ ಇನ್ನಿಲ್ಲ ಎನ್ನಲಾಗಿತ್ತು. ಆದರೆ ಇದೀಗ ಈ ಸುದ್ದಿ ಸುಳ್ಳು ಎಂದು ಜಿಂಬಾಬ್ವೆಯ ಮತ್ತೋರ್ವ ಮಾಜಿ ಆಟಗಾರ ಹೆನ್ರಿ ಒಲಾಂಗ ಸ್ಪಷ್ಟಪಡಿಸಿದ್ದಾರೆ.

ಸ್ಪಷ್ಟನೆ ಬಗ್ಗೆ ಟ್ವಿಟರ್ (ಎಕ್ಸ್) ನಲ್ಲಿ ಬರೆದಿರುವ ಹೆನ್ರಿ ಒಲಾಂಗ, “ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಹೆಚ್ಚು ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ನಾನು ಅವನಿಂದ ಕೇಳಿದೆ. ಮೂರನೇ ಅಂಪೈರ್ ಅವರನ್ನು ವಾಪಸ್ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ಹೆನ್ರಿ ಒಲಾಂಗ ಅವರು ಅದಕ್ಕೂ ಮೊದಲು ಹೀತ್ ಸ್ಟ್ರೀಕ್ ಅವರ ನಿಧನದ ಸುದ್ದಿಗೆ ಬೇಸರ ವ್ಯಕ್ತ ಪಡಿಸಿದ್ದರು. ಅವರು ಈ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದರು. “ಹೀತ್ ಸ್ಟ್ರೀಕ್ ಅವರು ಮತ್ತೊಂದು ಬದಿಗೆ ದಾಟಿದರು ಎಂಬ ದುಃಖದ ಸುದ್ದಿ ಬರುತ್ತಿದೆ. ಜಿಂಬಾಬ್ವೆ ಕ್ರಿಕೆಟ್ ದಂತಕಥೆಗೆ ಶಾಂತಿ ಸಿಗಲಿ” ಎಂದು ಬರೆದಿದ್ದರು. ಆದರೆ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.

ಸ್ಟ್ರೀಕ್ ಅವರ ಸಾವಿನ ಸುದ್ದಿ ವೇಗವಾಗಿ ಹರಡಿತ್ತು. ಇದು ಅಭಿಮಾನಿಗಳು ಮತ್ತು ಸಹ ಕ್ರಿಕೆಟಿಗರಲ್ಲಿ ದುಃಖವನ್ನು ಉಂಟುಮಾಡಿತು. ಅದೇನೇ ಇದ್ದರೂ, ಒಲಾಂಗಾ ಅವರ ಮಾಹಿತಿಯಿಂದ ಸ್ಟ್ರೀಕ್‌ ಅವರ ಯೋಗಕ್ಷೇಮದ ಸುತ್ತಲಿನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *