ಶ್ರದ್ಧಾ ಹತ್ಯೆಗೈದ ಆರೋಪಿ ಆಫ್ತಾಬ್‌ಗೆ ಸಂಕಷ್ಟ; ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಹೆಸರು

Aftab
Spread the love

ನ್ಯೂಸ್ ಆ್ಯರೋ: ದೆಹಲಿಯ ಶ್ರದ್ಧಾ ವಾಕರ್ ಪ್ರಕರಣ ಯಾರು ಮರೆತಿಲ್ಲ. 2022ರಲ್ಲಿ ಶ್ರದ್ಧಾವಾಕರ್ 35 ತುಂಡುಗಳಾಗಿ ಫ್ರಿಡ್ಜ್‌ ಸೇರಿಕೊಂಡಿದ್ದಳು. ಬಳಿಕ ಒಂದೊಂದೆ ತುಂಡುಗಳು ನಿರ್ಜನ ಪ್ರದೇಶದಲ್ಲಿ ನಾಯಿ, ಕಾಡು ಪ್ರಾಣಿ, ರಣಹದ್ದುಗಳಿಗೆ ಆಹಾರವಾಗಿ ನೀಡಿದ ರಣಭೀಕರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಪ್ರಕರಣ ಸಂಬಂಧ ಪ್ರಿಯಕರ ಅಫ್ತಾಬ್ ಪೂನಾವಾಲ ಅರೆಸ್ಟ್ ಆಗಿದ್ದಾನೆ.

ಈತನೇ ಶ್ರದ್ಧಾ ಹೈತ್ಯೆ ಮಾಡಿದ್ದಾನೆ ಅನ್ನೋದು ಗಂಭೀರ ಆರೋಪ. ಶ್ರದ್ಧಾ ವಾಕರ್ ಘಟನೆ ಹಲವರನ್ನು ಆತಂಕಕ್ಕೆ ತಳ್ಳಿದ್ದು ಸುಳ್ಳಲ್ಲ, ಇಷ್ಟೇ ಅಲ್ಲ ಇದೇ ಪ್ರಕರಣ ಹಲವರ ಆಕ್ರೋಶ ಹೆಚ್ಚಿಸಿತ್ತು. ಈ ಪೈಕಿ ಲಾರೆನ್ಸ್ ಬಿಷ್ಣೋಯ್ ಕೂಡ ಒಬ್ಬ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶ್ರದ್ಧಾಳನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಅಫ್ತಾಬ್, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಅನ್ನೋ ಮಾಹಿತಿಯನ್ನು ಮುಂಬೈ ಪೊಲೀಸರ ವಿಚಾರಣೆ ಬಹಿರಂಗವಾಗಿದೆ ಎಂದು ಮೂಲಗಳು ಹೇಳಿವೆ.

ಮುುಂಬೈ ಪೊಲೀಸರ ಮೂಲಗಳ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಟಾರ್ಗೆಟ್ ಲಿಸ್ಟ್‌ನಲ್ಲಿ ಹಲವರ ಹೆಸರಿದೆ. ಈ ಪೈಕಿ ಒಂದು ಹೆಸರು ಅಫ್ತಾಬ್. ಮೊದಲಿಗೆ ಈ ಹೆಸರು ಕೇಳಿದಾಗ ತಕ್ಷಣಕ್ಕೆ ಯಾರು ಈತ ಅನ್ನೋದು ಪೊಲೀಸರಿಗೆ ಗೊತ್ತಗಾಲಿಲ್ಲ. ಆದರೆ ಆಫ್ತಾಬ್ ಪೂನಾವಾಲ ಎಂದಾಗ ಘಟನೆ ಚಿತ್ರವಣವೇ ಕಣ್ಣಮುಂದೆ ಬಂದಿದೆ. ಹೌದು, ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಆರೋಪಿಗಳನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಪೂನವಾಲಗೆ ಭದ್ರತೆ ಹೆಚ್ಚಿಸಲಾಗಿದೆ.

ಬಾಬಾ ಸಿದ್ದಿಕಿ ಹತ್ಯೆ ಬಾಲಿವುಡ್ ರಂಗನ್ನೇ ತಲ್ಲಣಿಸಿತ್ತು. ಈ ಹತ್ಯೆ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿತ್ತು. ಬಾಬಾ ಸಿದ್ದಿಕಿ ಹೆಚ್ಚಾಗಿ ಸಲ್ಮಾನ್‌ ಖಾನ್‌ಗೆ ನೆರವು ನೀಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿತ್ತು. ಸಲ್ಮಾನ್ ಖಾನ್ ಹತ್ಯೆಗೂ ಹಲವು ಪ್ರಯತ್ನಗಳು ನಡೆದಿತ್ತು. ಹೀಗಾಗಿ ಬಾಬಾ ಸಿದ್ದಿಕಿ ಹತ್ಯೆ ಅತಂಕ ಹೆಚ್ಚಿಸಿದೆ. ಇತ್ತ ಮುಂಬೈ ಪೊಲೀಸರು ತನಿಖೆಯಲ್ಲಿ ಹಲವು ಆರೋಪಿಗಳು ಅರೆಸ್ಟ್ ಆಗಿದ್ದರು. ಶೂಟರ್ ಸೇರಿದಂತೆ ಬಿಷ್ಣೋಯ್ ಗ್ಯಾಂಗ್ ಸದಸ್ಯರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆ ವೇಳೆ ಬಿಷ್ಣೋಯ್ ಗ್ಯಾಂಗ್ ಸದಸ್ಯರು ತಮ್ಮ ಹಿಟ್ ಲಿಸ್ಟ್ ಬಹಿರಂಗಪಡಿಸಿದ್ದಾರೆ. ಈ ಪೈಕಿ ಅಫ್ತಾಬ್ ಪೂನವಾಲ ಹೆಸರು ಕೂಡ ಇದೆ ಎಂದು ಮುಂಬೈ ಪೊಲೀಸರ ಮೂಲಗಳು ಹೇಳಿದೆ.

Leave a Comment

Leave a Reply

Your email address will not be published. Required fields are marked *

error: Content is protected !!