LPG ವಾಣಿಜ್ಯ ಗ್ರಾಹಕರಿಗೆ ಮತ್ತೆ ಶಾಕ್! ಇಂದಿನಿಂದ ಸಿಲಿಂಡರ್ ಬೆಲೆ ಏರಿಕೆ
ನ್ಯೂಸ್ ಆ್ಯರೋ : ಕರ್ನಾಟಕ ಸೇರಿದಂತೆ ದೇಶದಲ್ಲಿ ಮತ್ತೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಸಲಾಗಿದೆ. ಇದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬರೆ ಎಳೆದಂತಾಗಿದೆ.
ದಿನನಿತ್ಯ ಬಳಕೆಯ ಅಡುಗೆ ಅನಿಲದ ಬೆಲೆ ಏರಿಕೆ ಮಾಡುವುದರಿಂದ ಜನರಿಗೆ ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮನೆಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
LPG ಸಿಲಿಂಡರ್ ಬೆಲೆಯನ್ನು ಕಳೆದ ಮೇ ತಿಂಗಳಿನಿಂದಲೇ ಹೆಚ್ಚಿಸಲಾಗುತ್ತಿದೆ. ಇದೀಗ ಸೆಪ್ಟೆಂಬರ್ 1ರಿಂದ ಗ್ಯಾಸ್ ಬೆಲೆ 39 ರೂಪಾಯಿ ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ 19 ರೂಪಾಯಿ, ಜೂನ್ ನಲ್ಲಿ 69.50 ರೂ. ಹಾಗೂ ಜುಲೈನಲ್ಲಿ 30 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿತ್ತು. ನಿರಂತರ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರ ತಲೆನೋವಿಗೆ ಕಾರಣವಾಗಿದೆ.
ದಿಢೀರನೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಿದ್ದರಿಂದ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಊಟ, ತಿಂಡಿ, ಟೀ ಕಾಫಿಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಇದು ಸಾಮಾನ್ಯ ಜನರ ಮೇಲೆ ಮರೆಯಾಗುವಂತಿದೆ.
ಇದೀಗ ಬೆಂಗಳೂರಿನಲ್ಲಿ ಒಂದು ಸಿಲಿಂಡರ್ 1769.50 ಬೆಲೆ ಇದೆ. 14 ಕೆಜಿ ಮನೆ ಬಳಕೆಯ ಗ್ಯಾಸ್‌ಗೆ 805.50 ರೂಪಾಯಿ ಇದೆ.
Leave a Comment