Mortuary Sex : ಶವಗಳ ನಡುವೆ ಶವಾಗಾರದಲ್ಲೇ ಲೈಂಗಿಕ ಕ್ರಿಯೆ – ವೈರಲ್ ಆಯ್ತು ನೋಡಿ ಈ ವಿಡಿಯೋ…

ನ್ಯೂಸ್ ಆ್ಯರೋ : ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳ ಭದ್ರತೆಯ ಬಗ್ಗೆ ಎದ್ದಿರುವ ಪ್ರಶ್ನೆಗಳ ನಡುವೆ, ನೋಯ್ಡಾದಿಂದ ಆಘಾತಕಾರಿ ವಿಡಿಯೋ ಹೊರಬಿದ್ದಿದೆ.
ಇಲ್ಲಿನ ಸೆಕ್ಟರ್ 94 ರಲ್ಲಿರುವ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ, ಉದ್ಯೋಗಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಶವಾಗಾರದಲ್ಲಿ ಉದ್ಯೋಗಿ ಮತ್ತು ಮಹಿಳೆ ಕಾಮಕೇಳಿಯಲ್ಲಿ ತೊಡಗಿದ್ದರೆ, ಈ ವೇಳೆ ಆತನ ಮತ್ತೊಬ್ಬ ಸ್ನೇಹಿತ ವಿಡಿಯೋ ಮಾಡುತ್ತಲೇ ಇದ್ದ. ಆಘಾತಕಾರಿ ವಿಚಾರವೆಂದರೆ ಪಕ್ಕದಲ್ಲಿಯೇ ಸ್ಟ್ರೆಚರ್‌ನಲ್ಲಿ ಶವವೊಂದು ಬಿದ್ದುಕೊಂಡಿರುವುದೂ ಕಂಡುಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಗೆ ಈ ವರ್ಷ ಜೂನ್‌ನಲ್ಲಿ ಡಂಕೌರ್ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕ್ಲೀನರ್ ಆಗಿ ಕೆಲಸ ನೀಡಲಾಗಿತ್ತು. ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವಿಡಿಯೋದಲ್ಲಿ ಕಂಡುಬಂದ ಮಹಿಳೆ ಹೊರಗಿನವಳು ಎಂಬುದು ತಿಳಿದುಬಂದಿದೆ.
Leave a Comment