ʼಈ ಮಟ್ಟಕ್ಕೆ ನಾವು ಹೋಗಲು ಸಾಧ್ಯವೇ ಇರಲಿಲ್ಲʼ: ದೈವದ ಬಗ್ಗೆ ಅಪಹಾಸ್ಯ ಮಾಡಿದವರಿಗೆ ರಿಷಬ್ ಶೆಟ್ಟಿ ವಾರ್ನಿಂಗ್
ನ್ಯೂಸ್ ಆ್ಯರೋ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ, ಕಾಂತಾರ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ ಆದ ರಿಷಬ್ ಶೆಟ್ಟಿಗ ಅದ್ಧೂರಿ ಸ್ವಾಗತ ಕೋರಲಾಗಿದೆ.
ಮಂಗಳೂರಿಗೆ ಬರ್ತಿದ್ದಂತೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ದೈವಾರಾಧನೆಗೆ ಬಗ್ಗೆ ಅಪಹಾಸ್ಯ ಮಾಡಿದ ವಿಚಾರದ ಬಗ್ಗೆ ಗುಡುಗಿದ್ದಾರೆ. ಕಾಂತಾರ ಸಿನಿಮಾ ಬರುವ ಮುನ್ನವೇ ಹಲವು ಸಿನಿಮಾಗಳಲ್ಲಿ ದೈವರಾಧನೆ ಬಗ್ಗೆ ತೆರೆ ಮೇಲೆ ತೋರಿಸಲಾಗಿದೆ. ಚೋಮನ ದುಡಿಯಿಂದ ಹಿಡಿದು ಅನೇಕ ಪುಸ್ತಕಗಳಲ್ಲೂ ದೈವಾರಾಧನೆ ಬಗ್ಗೆ ಉಲ್ಲೇಖವಿದೆ. ನಾವು ಇದನ್ನು ಮೊದಲ ಬಾರಿಗೆ ಮಾಡಲಿಲ್ಲ.
ಹಲವಾರು ಭಾಗಗಲ್ಲಿ ಪ್ರದರ್ಶನವನ್ನೂ ಕೂಡ ಮಾಡಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಎಷ್ಟೋ ತುಳು ಸಿನಿಮಾಗಳು ದೈವಾರಾಧನೆ ಬಳಸಿ ಪ್ರಶಸ್ತಿ ಪಡೆದಿದೆ. ಸಿನಿಮಾ ಬಂದಾಗ ತುಂಬಾ ಪಾಪ್ಯುಲರ್ ಆದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. ಬೇರೆ ಬೇರೆ ಸ್ಟೇಜ್ ಗಳಲ್ಲಿ ಕಾರ್ಯಕ್ರಮದಲ್ಲಿ ಹಾಕುವಾಗ ನೋವಾಗುತ್ತೆ. ನಾನು ಕೂಡ ಗುತ್ತಿನ ಮನೆಯವನಾಗಿ, ದೈವವನ್ನ ನಂಬಿಕೆ ಇಟ್ಟುಕೊಂಡು ಪೂಜೆ ಮಾಡಿಕೊಂಡು ಬಂದವನು, ನಾವು ಸಿನಿಮಾ ಮಾಡಬೇಕಾದ್ರೆ ಆ ಸಮುದಾಯದವರ ಸಹಾಯ ಪಡೆದು ಮಾಡಿದ್ದೇವೆ . ಅಷ್ಟು ಶ್ರದ್ಧೆಯಿಂದ ಅದನ್ನು ಮಾಡಿಕೊಂಡು ಬಂದಿದ್ದೇವೆ . ನಮಗೆ ಕೇವಲ ಅದೊಂದು ಸಿನಿಮಾ ಅಲ್ಲ. ದೈವದ ಆಶೀರ್ವಾದ ಇಲ್ಲದೆ ಇರುತಿದ್ದರೆ ಈ ಮಟ್ಟಕ್ಕೆ ನಾವು ಹೋಗಲು ಸಾಧ್ಯವೇ ಇರಲಿಲ್ಲ.
ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು ಈ ಸಿನಿಮಾ ದೈವದ ಬಗ್ಗೆ ದೈವ ನರ್ತಕರ ಬಗ್ಗೆ ಅವರ ಸಮುದಾಯದ ಬಗ್ಗೆ ಇರುವ ಸಿನಿಮಾ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ದೈವ ನರ್ತಕ ಸಮುದಾಯಕ್ಕೆ ಸೇರಬೇಕು . ದೈವದ ಆಶೀರ್ವಾದ ಇಲ್ಲ ಅಂದಿದ್ರೆ ಸಿನಿಮಾ ಈ ಮಟ್ಟಕ್ಕೆ ಹೋಗುತ್ತಾ ಇರಲಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
Leave a Comment