ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆದಿಲ್ವಾ?; ಸಿಎಫ್‌ಎಸ್‌ಎಲ್ ವರದಿ ಹೇಳೋದೇನು?
ನ್ಯೂಸ್ ಆ್ಯರೋ: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಿಎಫ್‌ಎಸ್‌ಎಲ್ ವರದಿ ಮತ್ತೊಂದು ತಿರುವು ನೀಡಿದೆ. ಅಂದು ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳದಲ್ಲಿ, ವೈದ್ಯೆ ನರಳಿರುವ, ಅಥವಾ ಆರೋಪಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿರುವ ಯಾವುದೇ ಕುರುಹಿಲ್ಲ ಎಂಬುದು ತಿಳಿದುಬಂದಿದೆ.
ಆಗಸ್ಟ್ 9 ರಂದು ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯರ ಶವ ಪತ್ತೆಯಾಗಿದ್ದು , ಇದು ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಆರೋಗ್ಯ ವೃತ್ತಿಪರರಿಂದ ವಾರಗಳ ಪ್ರತಿಭಟನೆಗೆ ಕಾರಣವಾಯಿತು. ಆರೋಪಿ ಸಂಜಯ್ ರಾಯ್ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.
ದೆಹಲಿಯ ಸಿಎಫ್‌ಎಸ್‌ಎಲ್‌ನ ತಜ್ಞರು ಆಗಸ್ಟ್ 14 ರಂದು ಆಸ್ಪತ್ರೆಯ ಆವರಣವನ್ನು ಪರಿಶೀಲಿಸಿದರು, ಪ್ರಶಿಕ್ಷಣಾರ್ಥಿ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾದ ಸೆಮಿನಾರ್ ಹಾಲ್‌ನಲ್ಲಿನ ಮರದ ಸ್ಟೇಜ್ ಹಾಸಿಗೆ ಸೇರಿದಂತೆ ಅಪರಾಧ ನಡೆದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದರು.
ಸೆಮಿನಾರ್ ಹಾಲ್ನಲ್ಲೇ ಅಪರಾಧ ಎಸಗಲಾಗಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಬೇರೆಲ್ಲಾದರೂ ಕೊಲೆ ಮಾಡಿ ಆ ಪ್ರದೇಶಕ್ಕೆ ತಂದು ಎಸೆದಿರಬಹುದು ಎಂದು ಹೇಳಲಾಗುತ್ತಿದೆ.
ಆರೋಪಿ ಸೆಮಿನಾರ್ ಹಾಲ್ಗೆ ಯಾರಿಗೂ ಗೊತ್ತಾಗದಂತೆ ಪ್ರವೇಶಿಸುವುದು ಅಸಂಭವ. ಘಟನೆಯ ನಂತರ ಘೋಷ್ ಅವರು ಆಗಸ್ಟ್ 12 ರಂದು ಸರ್ಕಾರಿ ಸಂಸ್ಥೆಯ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಕೇಂದ್ರೀಯ ವಿಧಿವಿಜ್ಞಾನ ಸಂಶೋಧನಾ ಪ್ರಯೋಗಾಲಯ (ಸಿಎಫ್‌ಎಸ್‌ಎಲ್) ವರದಿಯು ಘಟನಾ ಸ್ಥಳದಲ್ಲಿ ಮೃತರು ಮತ್ತು ದಾಳಿಕೋರ ನಡುವೆ ಯಾವುದೇ ಗಲಾಟೆ ಅಥವಾ ಹಲ್ಲೆ ನಡೆದಿರುವ ಲಕ್ಷಣಗಳು ಕಾಣುತ್ತಿಲ್ಲ ಎಂದಿದ್ದಾರೆ.
Leave a Comment