ಇಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ – ನಿಮ್ಮ ಮನೆಯಲ್ಲಿ ಬಾಲ ಗೋಪಾಲ ವಿಗ್ರಹ ಇದ್ದರೆ ತಪ್ಪದೇ ಈ ಕೆಲಸ ಮಾಡಿ..

ಇಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ – ನಿಮ್ಮ ಮನೆಯಲ್ಲಿ ಬಾಲ ಗೋಪಾಲ ವಿಗ್ರಹ ಇದ್ದರೆ ತಪ್ಪದೇ ಈ ಕೆಲಸ ಮಾಡಿ..

ನ್ಯೂಸ್ ಆ್ಯರೋ : ದೇಶದ ವಿವಿಧ ಭಾಗಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಡಗರ ಆರಂಭವಾಗಿದೆ. ಎಲ್ಲರ ಮನೆಗಳಲ್ಲಿ ಸಿದ್ದತೆ ನಡೆಯುತ್ತಿದ್ದು, ಶ್ರೀ ಕೃಷ್ಣನ ಸ್ವಾಗತಕ್ಕೆ ಹೆಂಗಳೆಯರು ಸಿದ್ಧರಾಗಿದ್ದಾರೆ.

ಅಷ್ಟಮಿ ದಿನ ಸಾಮಾನ್ಯವಾಗಿ ಎಲ್ಲರೂ ಬಾಲ ಗೋಪಾಲನ ವಿಗ್ರಹವನ್ನು ಅಥವಾ ಲಡ್ಡು ಗೋಪಾಲನ ವಿಗ್ರಹವನ್ನು ಪೂಜೆ ಮಾಡುತ್ತಾರೆ. ಆದರೆ ಬಾಲ ಗೋಪಾಲ ವಿಗ್ರಹ ಇರುವ ಮನೆಯಲ್ಲಿ ಹೆಚ್ಚು ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ಕೇವಲ ಕೃಷ್ಣ ಜನ್ಮಾಷ್ಟಮಿಯ ದಿನ ಮಾತ್ರ ಅಲ್ಲ ಪ್ರತಿದಿನ ಸಹ ಈ ಬಾಲ ಗೋಪಾಲನಿಗೆ ಸರಿಯಾದ ಪೂಜೆ ಮಾಡಿದರೆ ಯಶಸ್ಸು ಲಭಿಸುತ್ತದೆ. ಅದರಲ್ಲೂ ಅಷ್ಟಮಿಯ ಈ ವಿಶೇಷ ದಿನದಂದೂ ಕೆಲ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ, ಸಂಪತ್ತು ಅಭಿವೃದ್ದಿಯಾಗುತ್ತದೆ. ಹಾಗಾದ್ರೆ ಬಾಲ ಗೋಪಾಲ ವಿಗ್ರಹ ಇದ್ದರೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ..

ತಪ್ಪದೇ ಸ್ನಾನ ಮಾಡಿಸಿ

ಮನೆಯಲ್ಲಿ ಬಾಲಗೋಪಾಲನ ವಿಗ್ರಹವಿದ್ದರೆ ಅದಕ್ಕೆ ಪ್ರತಿದಿನ ಸ್ನಾನ ಮಾಡಿಸುವುದು ಕಡ್ಡಾಯ. ಕೆಲವೊಂದು ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದರೆ ಈ ಕೃಷ್ಣ ಜನ್ಮಾಷ್ಟಮಿಯಂದು ನೀವು ಸಣ್ಣ ಶಂಖವನ್ನು ತೆಗೆದುಕೊಂಡು ಅದಕ್ಕೆ ಮಡಿ ನೀರನ್ನು ಅಂದರೆ ಶುದ್ಧವಾದ ನೀರನ್ನು ತುಂಬಿಸಿ. ನಂತರ ಒಂದು ತಟ್ಟೆಯಲ್ಲಿ ಈ ಬಾಲ ಗೋಪಾಲನ ವಿಗ್ರಹವನ್ನು ಇಟ್ಟು ಸ್ನಾನ ಮಾಡಿಸಿ. ನೀವು ಕೃಷ್ಣ ಜನ್ಮಾಷ್ಟಮಿಯಂದು ಹಾಲಿನಿಂದ ಸಹ ಬಾಲ ಗೋಪಾಲನ ಸ್ನಾನ ಮಾಡಿಸಬಹುದು.

ಹೊಸ ಬಟ್ಟೆಯನ್ನು ಹಾಕಿ

ಸ್ನಾನದ ನಂತರ ಹೇಗೆ ನಾವು ಬಟ್ಟೆಯನ್ನು ಹಾಕುತ್ತೇವೆಯೋ ಹಾಗೆಯೇ ಬಾಲ ಗೋಪಾಲನಿಗೆ ಸಹ ಹೊಸ ಬಟ್ಟೆಯನ್ನು ಹಾಕಬೇಕು. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಕೃಷ್ಣನಿಗೆ ಯಾವಾಗಲೂ ಶುದ್ಧವಾದ ಬಟ್ಟೆಯನ್ನು ಹಾಕಬೇಕು. ಯಾವುದೇ ಕಾರಣಕ್ಕೂ ಬಟ್ಟೆ ಒಗೆಯದೇ ಅದನ್ನು ಮತ್ತೆ ಮರೆತು ಸಹ ಹಾಕಬೇಡಿ.

ಅಲಂಕಾರವಿಲ್ಲದೇ ಕೃಷ್ಣನ ಪೂಜೆ ಅಪೂರ್ಣ

ನೀವು ಕೃಷ್ಣನನ್ನು ಗಮನಿಸಿದ್ದೀರಾ? ಯಾವಾಗಲೂ ಸುಂದರವಾಗಿ ಕಾಣುತ್ತಾನೆ. ಹಾಗೆಯೇ ಬಾಲ ಗೋಪಾಲನನ್ನು ನಾವು ಸಿಂಗರಿಸಬೇಕು. ವಿಗ್ರಹಕ್ಕೆ ಶ್ರೀಗಂಧ ಹಚ್ಚಿ, ಆಭರಣಗಳನ್ನು ಹಾಕಿ ಅಲಂಕಾರ ಮಾಡಬೇಕು. ಅಲ್ಲದೇ, ಶ್ರೀ ಕೃಷ್ಣನ ಆರಾಧನೆಯು ಮೇಕಪ್ ಇಲ್ಲದೇ ಪೂರ್ಣವಾಗುವುದಿಲ್ಲ, ಹಾಗಾಗಿ ಶ್ರೀಕೃಷ್ಣನಿಗೆ ಕುಂಕುಮ, ನವಿಲುಗರಿಯನ್ನು ಸಹ ಹಾಕಿ ಅಲಂಕಾರ ಮಾಡಿ ಪೂಜೆ ಮಾಡಬೇಕು.

ಬೆಣ್ಣೆಯ ನೈವೇದ್ಯ ಬಹಳ ಉತ್ತಮ

ಯಾವುದೇ ಹಬ್ಬ ಅಥವಾ ಪೂಜೆಯಾಗಲಿ ನೈವೇದ್ಯ ಇಲ್ಲದೇ ಆಗುವುದಿಲ್ಲ. ಅದರಲ್ಲೂ ಕೃಷ್ಣನಿಗೆ ವಿಶೇಷವಾಗಿ ನೈವೇದ್ಯ ಮಾಡಬೇಕು. ಬೆಣ್ಣೆ, ಮೊಸರು, ಪಾಯಸ, ಬರ್ಫಿ, ಲಡ್ಡು ಹೀಗೆ ವಿಶೇಷ ಸ್ವೀಟ್ಗಳನ್ನು ನೈವೇದ್ಯ ಮಾಡಬೇಕು. ಮುಖ್ಯವಾಗಿ ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಸಾಧ್ಯವಾದಷ್ಟು ಬೆಣ್ಣೆಯಿಂದ ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಅವಲಕ್ಕಿಯ ಪದಾರ್ಥಗಳನ್ನು ನೀಡಬೇಕು.

ಆರತಿ ಮಾಡಿ ಅಥವಾ ದೀಪ ಬೆಳಗಿಸಿ

ಹಬ್ಬದ ದಿನ ಸಾಮಾನ್ಯವಾಗಿ ಆರತಿ ಮಾಡುತ್ತೇವೆ. ಆದರೆ ಬಾಲ ಗೋಪಾಲ ಮನೆಯಲ್ಲಿ ಇದ್ದರೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಆರತಿ ಮಾಡುವುದು ಉತ್ತಮ. ಆರತಿ ಸಾಧ್ಯವಾಗುವುದಿಲ್ಲ ಎಂದರೆ ದೀಪ ಬೆಳಗುವುದನ್ನು ತಪ್ಪಿಸಬೇಡಿ. ಅಲ್ಲದೇ, ಕೃಷ್ಣನ ವಿಗ್ರಹದ ಜೊತೆ ರಾಧೆಯ ಫೋಟೋ ಇಟ್ಟರೆ ಇನ್ನೂ ಒಳ್ಳೆಯ ಫಲಗಳು ಲಭಿಸುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *