ಅಪ್ಪಿತಪ್ಪಿಯೂ ಬೆಳಿಗ್ಗೆ ಎದ್ದಾಕ್ಷಣ ಈ ವಸ್ತುಗಳನ್ನು ನೋಡಬೇಡಿ – ಆ ವಸ್ತುಗಳು ಯಾವುವು..? ಇಲ್ಲಿದೆ ಮಾಹಿತಿ..

ಅಪ್ಪಿತಪ್ಪಿಯೂ ಬೆಳಿಗ್ಗೆ ಎದ್ದಾಕ್ಷಣ ಈ ವಸ್ತುಗಳನ್ನು ನೋಡಬೇಡಿ – ಆ ವಸ್ತುಗಳು ಯಾವುವು..? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ರಾತ್ರಿ ಸೊಗಸಾದ ನಿದ್ದೆ ಮಾಡಿ, ಬೆಳಗ್ಗೆ ಎದ್ದ ಕೂಡಲೇ ಆಹ್ಲಾದಕರವಾದ ಮನಸ್ಥಿತಿಯಿಂದ ಕೆಲಸದಲ್ಲಿ ತೊಡಗಿಕೊಂಡರೆ ಎಷ್ಟೆಲ್ಲ ಸಮಾಧಾನ? ಇಂಗ್ಲಿಷ್ನಲ್ಲಿ ಒಂದು ಮಾತಿದೆ, ಆರಂಭ ಅದ್ಭುತವಾಗಿದ್ದಲ್ಲಿ ನಾವಂದುಕೊಂಡ ಕೆಲಸ ಅದರಲ್ಲೇ ಅರ್ಧ ಮುಗಿದುಹೋಗುತ್ತದೆ ಅಂತ..!

ನಿಮ್ಮ ಪೈಕಿ ಅದೆಷ್ಟು ಮಂದಿ ವಾಸ್ತು, ಶಕುನ, ಬೆಳಗ್ಗೆ ಎದ್ದ ತಕ್ಷಣದ ಶುಭ ಸೂಚನೆ ನಂಬುತ್ತೀರೋ ಗೊತ್ತಿಲ್ಲ. ಆದರೆ ನಂಬಿದರೆ ಖಂಡಿತಾ ನಷ್ಟವಂತೂ ಆಗಲ್ಲ. ವಾಸ್ತುಶಾಸ್ತ್ರದ ಪ್ರಕಾರವಾಗಿ ಬೆಳಗ್ಗೆ ಎದ್ದ ಕೂಡಲೇ ಕೆಲವು ವಸ್ತುಗಳನ್ನು ನೋಡಬಾರದು ಎನ್ನಲಾಗುತ್ತದೆ. ಒಂದು ವೇಳೆ ಹಾಗೆ ನೋಡಿದರೆ ಇಡೀ ದಿನದ ಕೆಲಸ ಹಾಳು ಅಂತಾರೆ. ಏನು ಆ ರೀತಿಯ ಅಶುಭ ವಸ್ತುಗಳು? ಯಾವುದನ್ನು ಬೆಳಗ್ಗೆ ಎದ್ದ ತಕ್ಷಣ ಕಣ್ಣಿಗೆ ಕಾಣುವಂತೆ ಅಥವಾ ನೋಡುವಂತೆ ಪರಿಸ್ಥಿತಿ ಇಟ್ಟುಕೊಳ್ಳಬಾರದು? ಅದನ್ನು ತಿಳಿಯಬೇಕು ಅಂದರೆ ಮುಂದೆ ಓದಿ.

  • ಬೆಳಗ್ಗೆ ಎದ್ದ ತಕ್ಷಣ ಮುರಿದಿರುವ ಅಥವಾ ಒಡೆದು ಹೋಗಿರುವ ಪಾತ್ರೆ- ಪಗಡಗಳನ್ನು ನೋಡಬಾರದು.
  • ಅದೇ ರೀತಿಯಲ್ಲಿ ಬಟ್ಟೆ ಅಥವಾ ಮತ್ಯಾವುದರಿಂದಾದರೂ ಮುಚ್ಚಿರುವ ಗಂಟೆಯನ್ನು ನೋಡುವುದು ಸಹ ಶುಭ ಶಕುನ ಅಲ್ಲ. ಒಂದು ವೇಳೆ ಬೆಳಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ಇಡೀ ದಿನ ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತಲೇ ಇರುತ್ತದೆ. ಜತೆಗೆ ನೆಮ್ಮದಿ ಇರುವುದಿಲ್ಲ.
  • ಇನ್ನೂ ಕೆಲವರಿಗೆ ಎದ್ದ ತಕ್ಷಣವೇ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ತವಕ. ಇದು ಕೂಡ ಒಳ್ಳೆಯದಲ್ಲ. ಹೀಗೆ ಮಾಡಿದರೆ ಇಡೀ ದಿನ ಅಹಿತಕರವಾದ ಘಟನೆಗಳೇ ನಡೆಯುತ್ತವೆ. ಆದ್ದರಿಂದ ನಮ್ಮ ಹಿರಿಯರು ಹೇಳಿಕೊಟ್ಟಿರುವಂತೆ, ಎರಡೂ ಕೈ ಜೋಡಿಸಿ, ಆಯಾ ಧರ್ಮದ ನಂಬಿಕೆ ಅನುಸಾರ (ಒಂದು ವೇಳೆ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇದ್ದಲ್ಲಿ ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೆ ಸರಸ್ವತಿ ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ) ಎಂದು ಎರಡೂ ಅಂಗೈ ಅನ್ನು ನೋಡಿಕೊಳ್ಳಬೇಕು.
  • ಈ ವಸ್ತುಗಳನ್ನು ನೋಡಬೇಡಿ

ಬೆಳಗ್ಗೆ ಎದ್ದ ತಕ್ಷಣ ಸೂಜಿ, ದಾರ, ಎಣ್ಣೆ ಮತ್ತು ಪಾತ್ರೆಗಳು ನೋಡಬಾರದು. ಇವುಗಳು ಶುಭಸೂಚಕ ವಸ್ತುಗಳಲ್ಲ.

  • ಬೆಳಗ್ಗೆ ನಿಮ್ಮ ನೆರಳನ್ನು ನೋಡುವುದು ಸಹಿತ ಒಳ್ಳೆಯದಲ್ಲ. ಒಂದು ವೇಳೆ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ನಿಮ್ಮ ನೆರಳನ್ನು ಪಶ್ಚಿಮದಲ್ಲಿ ನೋಡಿಕೊಂಡರೆ ಇದರಿಂದ ದೋಷ ಉಂಟಾಗುತ್ತದೆ ಎನ್ನಲಾಗಿದೆ.
  • ಅದೇ ರೀತಿ ಗಲೀಜಾದ ಅಥವಾ ಮುಸುರೆ ಪಾತ್ರೆಗಳನ್ನು ಬೆಳಗ್ಗೆ ನೋಡಬಾರದು. ಆದ್ದರಿಂದ ರಾತ್ರಿಯೇ ಪಾತ್ರೆಗಳನ್ನು ತೊಳೆಯುವುದು ಉತ್ತಮ. ಒಂದು ವೇಳೆ ಇಂಥ ಪಾತ್ರೆಗಳನ್ನು ಬೆಳಗ್ಗೆ ನೋಡಿದಲ್ಲಿ ಅಂಥ ಮನೆಯಲ್ಲಿ ಅಥವಾ ಅಂಥ ವ್ಯಕ್ತಿಗಳಿಗೆ ಹಣಕಾಸಿನ ಕೊರತೆ ಉಂಟಾಗುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *