ಇಂದು ಶುಕ್ರವಾರ : ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ – ಮಾಡಿದ್ರೆ ಕಷ್ಟ-ನಷ್ಟ ಎರಡೂ‌ ಕಟ್ಟಿಟ್ಟ ಬುತ್ತಿ..!!

ಇಂದು ಶುಕ್ರವಾರ : ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ – ಮಾಡಿದ್ರೆ ಕಷ್ಟ-ನಷ್ಟ ಎರಡೂ‌ ಕಟ್ಟಿಟ್ಟ ಬುತ್ತಿ..!!

ನ್ಯೂಸ್ ಆ್ಯರೋ : ಇವತ್ತು ಗುರುವಾರ ಬಟ್ಟೆ ಒಗೆಯೋದು ಬೇಡ, ಇವತ್ತು ಶನಿವಾರ ಉಗುರ ಕತ್ತರಿಸಬೇಡ.. ಹೀಗೆ ವಾರ ನೆನಪು ಮಾಡಿಕೊಂಡು ದೊಡ್ಡವರು ಆ ಕೆಲಸ ಮಾಡ್ಬೇಡ, ಈ ಕೆಲಸ ಮಾಡ್ಬೇಡ ಅಂತ ನಿರ್ಬಂಧ ಹೇರುತ್ತಾರೆ. ಕೆಲಸ ಹಾಗೂ ವಾರಕ್ಕೆ ಗಾಢವಾದ ಸಂಬಂಧವಿದೆ. ತಪ್ಪು ವಾರದಲ್ಲಿ ತಪ್ಪಾದ ಕೆಲಸ ಮಾಡಿದ್ರೆ ಮುಂದೆ ಸಮಸ್ಯೆ, ಸಂಕಷ್ಟ ಎದುರಿಸಬೇಕಾಗುತ್ತದೆ. ಮನುಷ್ಯನ ಸಂತೋಷ, ಆರೋಗ್ಯ, ಸಮೃದ್ಧಿ ಎಲ್ಲವೂ ಆತ ಮಾಡುವ ಕೆಲಸವನ್ನು ಅವಲಂಭಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆಯಿದ್ದು, ಜೀವನದಲ್ಲಿ ಸುಖ ಪ್ರಾಪ್ತಿಯಾಗಬೇಕು ಎನ್ನುವವರಾಗಿದ್ದರೆ ಯಾವ ವಾರ ಯಾವ ಕೆಲಸ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ನಾವಿಂದು ಶುಕ್ರವಾರ ಯಾವೆಲ್ಲ ಕೆಲಸ ಮಾಡಿದ್ರೆ ಸಮಸ್ಯೆ ಕಾಲಿಗೆ ಸುತ್ತಿಕೊಳ್ಳುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.

ಶುಕ್ರವಾರವನ್ನು ಲಕ್ಷ್ಮಿ ಮತ್ತು ಶುಕ್ರ ಗ್ರಹಕ್ಕೆ ಸಮರ್ಪಿಸಲಾಗಿದೆ. ಶುಕ್ರವಾರ ಈ ಎರಡು ದೇವರು ಕೃಪೆ ತೋರುವ ಕೆಲಸ ಮಾಡಬೇಕು. ಅವರು ಕೋಪಗೊಳ್ಳುವ ಯಾವುದೇ ಕೆಲಸವನ್ನು ಮಾಡಬಾರದು.

ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಬೇಡಿ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಿದೆ. ನೀವು ಯಾವುದೇ ವಸ್ತುವನ್ನು ಶುದ್ಧ ಮನಸ್ಸಿನಿಂದ ದಾನ ಮಾಡಿದ್ರೂ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಂತ ವಾರದ ಎಲ್ಲ ದಿನ ಎಲ್ಲ ವಸ್ತುಗಳನ್ನು ದಾನ ಮಾಡೋದು ಸಾಧ್ಯವಿಲ್ಲ. ಶಾಸ್ತ್ರದಲ್ಲಿ ಹೇಳಿದಂತೆ ಅದಕ್ಕೆ ಮೀಸಲಾದ ದಿನವೇ ನೀವು ದಾನ ಮಾಡ್ಬೇಕು. ಶುಕ್ರವಾರದಂದು ನೀವು ಸಕ್ಕರೆ ಹಾಗೂ ಬೆಳ್ಳಿಯ ವಸ್ತುಗಳನ್ನು ದಾನವಾಗಿ ನೀಡಬೇಡಿ. ಸಕ್ಕರೆಯನ್ನು ದಾನ ಮಾಡಿದ್ರೆ ನಿಮ್ಮ ಗ್ರಹದಲ್ಲಿ ಶುಕ್ರ ದುರ್ಬಲನಾಗುತ್ತಾನೆ. ಭೌತಿಕ ಸುಖ ಲಭಿಸುವುದಿಲ್ಲ.

ಪತಿ – ಪತ್ನಿ ಕಲಹ ಸಲ್ಲದು

ಪತಿ – ಪತ್ನಿ ಮಧ್ಯೆ ಸಣ್ಣಪುಟ್ಟ ಗಲಾಟೆ ಸಾಮಾನ್ಯ. ಆದ್ರೆ ಇದೇ ಗಲಾಟೆ ಯಾವಾಗ ದೊಡ್ಡದಾಗುತ್ತೆ ಎಂಬುದು ತಿಳಿಯೋದಿಲ್ಲ. ಯಾವುದೇ ಸಮಸ್ಯೆಯಿರಲಿ, ಶುಕ್ರವಾರ ಮಾತ್ರ ಕಿತ್ತಾಡಲು ಹೋಗ್ಬೇಡಿ. ವಾರ ನೋಡಿ, ಗಲಾಟೆ ಮಾಡ್ದೆ ಸುಮ್ಮನಾಗೋದು ಬೆಸ್ಟ್. ಶುಕ್ರವಾರ ಜಗಳವಾಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಶುಕ್ರ ವೈವಾಹಿಕ ಜೀವನ ಹಾಗೂ ದೈಹಿಕ ಸಂತೋಷದ ಸಂಕೇತವಾಗಿದ್ದಾನೆ. ಈ ದಿನ ನೀವು ಕಿತ್ತಾಡಿದ್ರೆ ಸಮಸ್ಯೆ ದೊಡ್ಡದಾಗಿ ಶಾಶ್ವತವಾಗಿ ಇಬ್ಬರೂ ಬೇರೆಯಾಗುವ ಸಾಧ್ಯತೆಯಿರುತ್ತದೆ.

ಆಸ್ತಿ ಖರೀದಿ ಬೇಡ

ಶುಕ್ರವಾರ ಶುಭ ದಿನ ಹೌದು, ಆದ್ರೆ ಈ ದಿನ ಆಸ್ತಿ ಖರೀದಿ ಮಾಡಬಾರದು. ಮನೆ, ಆಸ್ತಿ ಖರೀದಿ ಮಾಡೋದು ಜೀವನದ ದೊಡ್ಡ ಕೆಲಸಗಳಲ್ಲಿ ಒಂದು. ಈ ದಿನವನ್ನು ನಾವು ಮುಹೂರ್ತ ನೋಡಿ ನಿಶ್ಚಯಿಸ್ತೇವೆ. ಒಂದ್ವೇಳೆ ಮುಹೂರ್ತ ನೋಡಿ ಖರೀದಿ ಸಾಧ್ಯವಾಗಿಲ್ಲ ಎಂದಾದ್ರೂ ನೀವು ಶುಕ್ರವಾರ ಮಾತ್ರ ಖರೀದಿ ಸಹವಾಸಕ್ಕೆ ಹೋಗ್ಬೇಡಿ. ಇದ್ರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಮಹಿಳೆಯ ಅವಮಾನ ಸಲ್ಲದು

ಶುಕ್ರವಾರ ಮಾತ್ರವಲ್ಲ ಎಂದೂ ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅವಮಾನಿಸಬಾರದು. ಅವರಿಗೆ ದುಃಖವಾಗುವಂತೆ ನಡೆದುಕೊಳ್ಳಬಾರದು. ಶುಕ್ರವಾರ ಲಕ್ಷ್ಮಿಗೆ ಮೀಸಲಿರುವ ಕಾರಣ ಆ ದಿನವಂತೂ ಎಚ್ಚರಿಕೆಯಿಂದ ಮಾತನಾಡಬೇಕು. ಮನೆಯಲ್ಲಿರುವ ಹೆಣ್ಣು ನೊಂದುಕೊಂಡ್ರೆ ಮನೆ ಉದ್ಧಾರ ಸಾಧ್ಯವಿಲ್ಲ. ಹೆಣ್ಣಿಗೆ ಗೌರವ ಸಿಗದ ಮನೆಯಲ್ಲಿ ಆಸ್ತಿ, ಧನ, ಸಂತೋಷದ ಕೊರತೆಯಾಗುತ್ತದೆ. ಹಾಗಾಗಿ ನೀವು ಶುಕ್ರವಾರ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಅವಮಾನಿಸಬೇಡಿ. ಅವರಿಗೆ ಬೇಸರವಾಗುವಂತೆ ನಡೆದುಕೊಳ್ಳಬೇಡಿ.

ಈ ಕೆಲಸ ಮಾಡಿ

ಶುಕ್ರವಾರ ನೀವು ಬಿಳಿ ಬಣ್ಣದ ವಸ್ತು, ಬಟ್ಟೆ ಬಳಸಿ. ಮನೆ, ಮನಸ್ಸು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಶುಕ್ರನಿಗೆ ಸಂಬಂಧಿಸಿದ ವಸ್ತುವನ್ನು ದಾನ ಮಾಡಿ. ವಿಷ್ಣು ಹಾಗೂ ಲಕ್ಷ್ಮಿ ಪೂಜೆ ಮಾಡಿ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *