ಬುಧವಾರ ಗಣೇಶನಿಗೆ ಪ್ರೀತಿ – ಇಷ್ಟಾರ್ಥ ಸಿದ್ದಿಗಾಗಿ ಬುಧವಾರದಂದು ತಪ್ಪದೇ ಮಾಡಿ ಈ ಕೆಲಸ…

ಬುಧವಾರ ಗಣೇಶನಿಗೆ ಪ್ರೀತಿ – ಇಷ್ಟಾರ್ಥ ಸಿದ್ದಿಗಾಗಿ ಬುಧವಾರದಂದು ತಪ್ಪದೇ ಮಾಡಿ ಈ ಕೆಲಸ…

ನ್ಯೂಸ್ ಆ್ಯರೋ : ಹಿಂದೂ ಧರ್ಮದಲ್ಲಿ ಬುಧವಾರದ ದಿನಕ್ಕೆ ವಿಶೇಷ ಮಹತ್ವವಿದೆ. ಯಾಕೆಂದರೆ, ಈ ದಿನವೂ ಮೊದಲು ಪೂಜಿಪನಾದ ಗಣೇಶನಿಗೆ ಸಮರ್ಪಿತವಾದ ದಿನವಾಗಿದೆ. ಹಾಗು ಬುಧ ಗ್ರಹದ ದಿನವಾಗಿದೆ. ಈ ದಿನ ಯಾವುದೇ ಕೆಲಸವನ್ನು ಮಾಡುವುದು ಶುಭವೆಂದು ಹೇಳಲಾಗುತ್ತದೆ. ಯಾಕೆಂದರೆ, ಈ ದಿನ ಮಾಡುವ ಪ್ರತಿಯೊಂದು ಕೆಲಸಕ್ಕೂ ಗಣೇಶನ ಆಶೀರ್ವಾದವಿರುತ್ತದೆ. ಈ ದಿನ ಗಣೇಶನೊಂದಿಗೆ ಲಕ್ಷ್ಮಿ ದೇವಿಯು ನಮ್ಮನ್ನು ಅನುಗ್ರಹಿಸುತ್ತಾಳೆ. ಬುಧವಾರ ನಾವು ಯಾವ ಕೆಲಸಗಳನ್ನು ಮಾಡುವುದರಿಂದ ರಿದ್ಧಿ- ಸಿದ್ಧಿಯನ್ನು, ಶುಭ – ಲಾಭವನ್ನು ಪಡೆಯಬಹುದು ನೋಡಿ.

ಗಣಪತಿ ಪೂಜೆ

ನಮ್ಮ ಸಕಲ ಇಷ್ಟಾರ್ಥಗಳ ಈಡೇರಿಕೆಗಾಗಿ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ಮತ್ತು ಜೀವನದ ಎಲ್ಲಾ ರೀತಿಯ ಅಡೆತಡೆಗಳಿಂದ ನಿವಾರಣೆಯನ್ನು ಕಂಡುಕೊಳ್ಳುವುದಕ್ಕಾಗಿ, ಬುಧವಾರದ ದಿನದಂದು ವಿಘ್ನನಿವಾರಕನಾದ ಗಣೇಶನನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸಬೇಕು. ಈ ದಿನ ನೀವು ಗಣೇಶನ ಆರಾಧನೆಯಿಂದ ಶುಭ ಫಲಗಳನ್ನೇ ಪಡೆದುಕೊಳ್ಳುತ್ತೀರಿ.

ದುರ್ವಾವನ್ನು ಅರ್ಪಿಸಿ

ನೀವು ಬುಧವಾರದ ದಿನದಂದು ಗಣಪತಿಯನ್ನು ಪೂಜಿಸುವಾಗ ದುರ್ವಾವನ್ನು ತಪ್ಪದೇ ಅರ್ಪಿಸಬೇಕು. ಏಕೆಂದರೆ, ದುರ್ವಾವಿಲ್ಲದೇ ಗಣಪತಿ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ದಿನ ನೀವು ಗಣಪತಿಗೆ 21 ಕಟ್ಟು ದುರ್ವಾ ಹುಲ್ಲುಗಳನ್ನು ಅರ್ಪಿಸಬೇಕು. ಇದು ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ.

ಇಷ್ಟಾರ್ಥಗಳ ಈಡೇರಿಕೆಗೆ ಪೂಜೆ

ನಿಮ್ಮ ಯಾವುದೇ ರೀತಿಯಾದ ಇಷ್ಟಾರ್ಥಗಳ ಈಡೇರಿಕೆಗಾಗಿ ಅಥವಾ ಇಷ್ಟಾರ್ಥಗಳು ಪೂರ್ಣಗೊಳ್ಳುವುದಕ್ಕಾಗಿ, ಬುಧವಾರದ ದಿನದಂದು ನಿಮ್ಮ ಹತ್ತಿರದ ಯಾವುದೇ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ನೀವು ಗಣಪತಿಯನ್ನು ಶುದ್ಧ ಮನಸ್ಸಿನಿಂದ ಪೂಜಿಸಿ. ನಿಮ್ಮ ಪೂಜೆಯು ಗಣಪತಿಗೆ ಇಷ್ಟವಾಗುವಂತಿರಬೇಕು. ಹಾಗೂ ನೀವು ಈ ಪೂಜೆಯಲ್ಲಿ ಗಣೇಶನಿಗೆ ಪ್ರಿಯವಾದ ಮೋದಕ, ಲಡ್ಡುಗಳು ಅಥವಾ ದುರ್ವಾವನ್ನು ಭಕ್ತಿಯಿಂದ ಅರ್ಪಿಸಬೇಕು.

ಈ ವಸ್ತುಗಳನ್ನು ದಾನ ಮಾಡಿ

ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಮುಂದಾದರೆ ಅಥವಾ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಬಯಸಿದರೆ, ಬುಧವಾರದಂದು ಬಡವರಿಗೆ ಅಥವಾ ನಿರ್ಗತಿಕರಿಗೆ ಹೆಸರು ಕಾಳನ್ನು, ಹಸಿರು ಬಣ್ಣದ ಬಟ್ಟೆಯನ್ನು ಅಥವಾ ಇತ್ಯಾದಿ ಹಸಿರು ಬಣ್ಣದ ವಸ್ತುಗಳನ್ನು ದಾನವಾಗಿ ನೀಡಬೇಕು. ಇದರೊಂದಿಗೆ ಹಸುಗಳಿಗೆ ಹಸಿರು ಹುಲ್ಲನ್ನು ಮೇವನ್ನಾಗಿ ನೀಡಿ.

ಜಾಯಿಕಾಯಿಯನ್ನು ಅರ್ಪಿಸಿ

ನಿಮ್ಮ ಆರ್ಥಿಕ ಸ್ಥಿತಿಯನ್ನು ಸುದಾರಿಸಿಕೊಳ್ಳುವುದಕ್ಕಾಗಿ 21 ಬುಧವಾರಗಳವರೆಗೆ ಗಣೇಶನಿಗೆ ಜಾಯಿಕಾಯಿಯನ್ನು ಅರ್ಪಿಸಬೇಕು. 21 ರ ಬದಲಾಗಿ ನೀವು 42 ಜಾಯಿಕಾಯಿಗಳನ್ನು ಕೂಡ ಗಣೇಶನಿಗೆ ಅರ್ಪಿಸಬಹುದು. ಇನ್ನು ನೀವು ಸಾಲದಿಂದ ಮುಕ್ತಿ ಹೊಂದಲು ಬುಧವಾರದಂದು ಒಂದೂವರೆ ಪಾವ್ ಬೆಲ್ಲವನ್ನು ಕುದಿಸಿ. ನಂತರ ಅದಕ್ಕೆ ತುಪ್ಪ ಮತ್ತು ಸಕ್ಕರೆ ಬೆರೆಸಿ ಹಸುವಿಗೆ ತಿನ್ನಲು ನೀಡಿ. ಐದು ಅಥವಾ ಏಳು ಬುಧವಾರಗಳ ಕಾಲ ನಿರಂತರವಾಗಿ ಈ ಪರಿಹಾರವನ್ನು ಮಾಡಿ. ಇದರಿಂದ ನೀವು ಶೀಘ್ರದಲ್ಲೇ ಸಾಲದಿಂದ ಮುಕ್ತಿಯನ್ನು ಕಂಡುಕೊಳ್ಳುತ್ತೀರಿ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *