Tulunad Special : ಇಂದು ಸೋಣ ತಿಂಗಳ ಮೊದಲ ಶನಿವಾರ, ತುಳುನಾಡಿನಲ್ಲಿದೆ ಸೋಣ ಶನಿವಾರದ ವಿಶೇಷ ಆಚರಣೆ – ಈ ಆಚರಣೆಯ ವಿಶೇಷತೆ ಏನು? ಆಚರಣೆ ಹೇಗೆ?

Tulunad Special : ಇಂದು ಸೋಣ ತಿಂಗಳ ಮೊದಲ ಶನಿವಾರ, ತುಳುನಾಡಿನಲ್ಲಿದೆ ಸೋಣ ಶನಿವಾರದ ವಿಶೇಷ ಆಚರಣೆ – ಈ ಆಚರಣೆಯ ವಿಶೇಷತೆ ಏನು? ಆಚರಣೆ ಹೇಗೆ?

ನ್ಯೂಸ್ ಆ್ಯರೋ‌ : ಆಟಿ ಕಳೆದು ಸೋಣ (ಶ್ರಾವಣ) ತಿಂಗಳು ಕಾಲಿಟ್ಟಿದೆ. ಜೊತೆಗೆ ಸಾಲು ಸಾಲು ಹಬ್ಬಗಳು ಆರಂಭವಾಗಿವೆ. ತುಳುನಾಡಿನಲ್ಲಿ ಸೋಣ ತಿಂಗಳ ವಿಶಿಷ್ಟ ಆಚರಣೆ ಸೋಣ ಶನಿವಾರವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ವ್ರತಾಚರಣೆ

ಸೋಣ ತಿಂಗಳಿನ ಶನಿವಾರ ನಡೆಸುವ ಈ ವ್ರತಾಚರಣೆಯ ಭಾಗವಾಗಿ ಬೆಳಗ್ಗೆ ಯಾವುದೇ ಆಹಾರ ಸೇವಿಸಲಾಗುವುದಿಲ್ಲ. ಮಧ್ಯಾಹ್ನ ಹಳ್ಳಿ ಸೊಗಡಿನ ಊಟ ಈ ಆಚರಣೆಯ ವಿಶೇಷತೆ. ಬೆಳಗ್ಗೆ ಸ್ನಾನ ಮಾಡಿ, ಮನೆ ಗುಡಿಸಿ, ಒರೆಸಿ ನಂತರ ಅಡುಗೆ ತಯಾರಿ ನಡೆಸಬೇಕು. ಆಹಾರದ ಪಟ್ಟಿಯಲ್ಲಿ ಹಲಸಿನ ಬೀಜ, ಕೆಸುವಿನ ಬಿಳಲಿನ ಗಸಿ, ಕೆಸುವಿನ ಕಾಂಡದ ಸಾಂಬಾರು, ಮುಳ್ಳು ಸೌತೆ ಪಚ್ಚಡಿ, ಒಂದೆಲಗ ಚಟ್ನಿ, ಮನೆಯಲ್ಲಿ ಕಾಸಿದ ತುಪ್ಪ ಇರಲೇಬೇಕು. ಯಾವುದೇ ತರಕಾರಿ ಪೇಟೆಯಿಂದ ತಂದು ಬಳಸಬಾರದು ಎನ್ನುವ ಕ್ರಮವೂ ಇದೆ. ಇನ್ನು ಕೆಲವು ದೇಗುಲಗಳಲ್ಲಿ ಸೋಣ ಶನಿವಾರದ ಪ್ರಯುಕ್ತ ವಿಶೇಷ ಅನ್ನ ಸಂತರ್ಪಣೆಯೂ ಇರುತ್ತದೆ.

ತಿಮ್ಮಪ್ಪನ ಸ್ಮರಣೆ

ಸೋಣ ಶನಿವಾರದ ಇನ್ನೊಂದು ವಿಶೇಷತೆ ಎಂದರೆ ತಿರುಪತಿ ತಿಮ್ಮಪ್ಪನ ಸ್ಮರಣೆ. ಕೆಲವು ಕಡೆಗಳಲ್ಲಿ ಊಟಕ್ಕೂ ಮೊದಲು ತಿಮ್ಮಪ್ಪನಿಗೆ ಮುಡಿಪು ಕಟ್ಟುವ ಸಂಪ್ರದಾಯವಿದೆ. ಮನೆ ಮಂದಿಯೆಲ್ಲಾ ಸ್ನಾನ ಮಾಡಿ ಬಂದು ನಂದಾದೀಪದ ಮುಂದೆ ಬಾಳೆ ಎಲೆಯಲ್ಲಿ ಹಣ ಇಡುತ್ತಾರೆ.

ಹಾಗೆ ಇಡುವ ಮೊದಲು ತುಳಸಿ ಎಲೆಯೊಂದಿಗೆ ಚಿಲ್ಲರೆ ಹಣವನ್ನು ಬಾವಿಯಿಂದ ತಂದ ನೀರಿನಲ್ಲಿ ಮುಳುಗಿಸಿ ತಲೆಯ ಸುತ್ತ ಒಂದು ಸುತ್ತು ತಂದು ತೆಗೆದಿಡುವುದು ಸಂಪ್ರದಾಯ. ಜೊತೆಗೆ ದೇವರಿಗೆ ಶ್ರೀ ಗಂಧದ ತಿಲಕ ಇರಿಸಲಾಗುತ್ತದೆ. ಈ ಸೋಣ ಶನಿವಾರ ಆಚರಣೆ ಕೆಲವರು ತಮ್ಮ ಮನೆಯಲ್ಲೇ ಆಚರಿಸಿದರೆ ಇನ್ನು ಕೆಲವರು ತರವಾಡು(ಕುಟುಂಬದ ಮನೆ)ಮನೆಯಲ್ಲಿ ಸೇರಿ ಆಚರಿಸುತ್ತಾರೆ.

ಖಾದ್ಯಗಳ ಉಂಡೆ

ಕೆಲವೆಡೆ ಊಟ ಎಲ್ಲ ಬಡಿಸಿದ ಮೇಲೆ ಎಲ್ಲಾ ಖಾದ್ಯಗಳನ್ನು ಸೇರಿಸಿ ಉಂಡೆ ಮಾಡಿ ಎಲೆಯ ತುದಿಗೆ ಇರಿಸಲಾಗುತ್ತದೆ. ಬಳಿಕ ಊಟ ಮಾಡುವುದು ಕ್ರಮ. ಹೀಗೆ ತಯಾರಿಸಿದ ಉಂಡೆಯನ್ನು ಸೇವಿಸುವುದಿಲ್ಲ. ಊಟವಾದ ಮೇಲೆ ಎಲೆಯನ್ನು ದೂರ ಎಸೆಯಬೇಕು, ನಾಯಿಗೆ ಹಾಕಬಾರದು ಎನ್ನುವ ನಿಯಮವಿದೆ.

ಇನ್ನು ಸೋಣ ಶನಿವಾರದ ರಾತ್ರಿ ಸಾಮಾನ್ಯವಾಗಿ ಊಟ ಮಾಡುವುದಿಲ್ಲ. ಕೆಲವು ಭಾಗಗಳಲ್ಲಿ ಸೀಯಾಳ, ಬಾಳೆಹಣ್ಣು, ಹಾಲು ಸೇವಿಸಲಾಗುತ್ತದೆ. ಇನ್ನು ಹಲವೆಡೆ ಅಕ್ಕಿಯಿಂದ ಮಾಡಿದ ದೋಸೆ, ರೊಟ್ಟಿ, ಶ್ಯಾವಿಗೆಯಂತಹ ತಿಂಡಿ ತಿನ್ನಲಾಗುತ್ತದೆ. ಒಟ್ಟಿನಲ್ಲಿ ಈ ಸೋಣ ಶನಿವಾರ ತುಳುವರ ಸಂಸ್ಕೃತಿಯ ಒಂದು ಭಾಗವಾಗಿ ಇಂದಿಗೂ ಚಾಲ್ತಿಯಲ್ಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *