Five Star Style Tea Recipe : ಫೈವ್ ಸ್ಟಾರ್ ಶೈಲಿಯಲ್ಲಿ ಖಡಕ್ ಟೀ ಮಾಡೋದು ಹೇಗೆ? – ನಾವು ಹೇಳಿ ಕೊಡ್ತೇವೆ ನೋಡಿ…

Five Star Style Tea Recipe : ಫೈವ್ ಸ್ಟಾರ್ ಶೈಲಿಯಲ್ಲಿ ಖಡಕ್ ಟೀ ಮಾಡೋದು ಹೇಗೆ? – ನಾವು ಹೇಳಿ ಕೊಡ್ತೇವೆ ನೋಡಿ…

ನ್ಯೂಸ್ ಆ್ಯರೋ : ಟೀ ಅಥವಾ ಚಹಾ ಎಂದರೆ ಎಲ್ಲರಿಗೂ ಬಹುಪಾಲು ಇಷ್ಟ. ಫೈವ್ ಸ್ಟಾರ್ ಶೈಲಿಯಲ್ಲಿ ಖಡಕ್ ಟೀ ಮಾಡಿ ಕುಡಿದ್ರೆ ಅದರ ಮಜವೇ ಬೇರೆ. ನಾವು ಇವತ್ತು ಫೈವ್ ಸ್ಟಾರ್ ಶೈಲಿಯಲ್ಲಿ ಖಡಕ್ ಟೀ ಮಾಡೋದು ಹೇಗೆಂದು ಹೇಳಿಕೊಡ್ತೇವೆ..

ಬೇಕಾಗುವ ಸಾಮಗ್ರಿಗಳು

ನೀರು-ಎರಡು ಕಪ್, ಹಾಲು-ಎರಡು ಕಪ್, ಸಕ್ಕರೆ: 4 ಟೀ ಸ್ಪೂನ್, ಚಕ್ಕೆ, ಅರ್ಧ ಟೀ ಸ್ಪೂನ್ ಸೋಂಪು, ನಾಲ್ಕು ಏಲಕ್ಕಿ, ಅರ್ಧ ಇಂಚಿನಷ್ಟು ಹಸಿ ಶುಂಠಿ, ಮೂರು ಟೀ ಸ್ಪೂನ್ ಟೀ ಪುಡಿ.

ಮಾಡುವ ವಿಧಾನ

ಖಡಕ್ ಟೀ ಮಾಡುವಾಗ ಸಕ್ಕರೆಯನ್ನು ನೀರಿನ ಜೊತೆ ಮಿಕ್ಸ್ ಮಾಡಬಾರದು. ಮೊದಲಿಗೆ ಒಂದು ಪಾತ್ರೆಯನ್ನು ಒಲೆ ಮೇಲೆ ಇರಿಸಿಕೊಂಡು ಒಲೆ ಅನ್ ಮಾಡಿಕೊಳ್ಳಿ. 

ಈ ಪಾತ್ರೆಗೆ ನಾಲ್ಕು ಟೀ ಸ್ಪೂನ್​ಗಳಷ್ಟು ಸಕ್ಕರೆ ಹಾಕಿಕೊಂಡು ಮೆಲ್ಟ್​ ಆಗುವರೆಗೆ ಅತಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಸಕ್ಕರೆ ಪಾಕವಾಗುತ್ತಿದ್ದಂತೆ ಎರಡು ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡು ನಿಮಿಷ ಬೇಯಿಸಿಕೊಳ್ಳಿ.

ಸಕ್ಕರೆ ಪಾಕ ಮತ್ತು ನೀರು ಮಿಕ್ಸ್ ಆಗುತ್ತಿದ್ದಂತೆ ಚಕ್ಕೆ, ಸೋಂಪು, ಏಲಕ್ಕಿ, ಹಸಿ ಶುಂಠಿ ಹಾಕಿ ಕಡಿಮೆ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಕುದಿಸಿಕೊಳ್ಳಿ. ನಂತರ ಕುದಿಯುತ್ತಿರುವ ಮಿಶ್ರಣಕ್ಕೆ ಎರಡು ಟೇಬಲ್ ಸ್ಪೂನ್ ಟೀ ಪುಡಿ ಸೇರಿಸಿ ಮೂರು ನಿಮಿಷಗಳವರೆಗೆ ಕುದಿಸಿಕೊಳ್ಳಬೇಕು.

ತದನಂತರ ಎರಡು ಕಪ್​ನಷ್ಟು ಹಾಲು ಸೇರಿಸಬೇಕು. ಹಾಲು ಮಿಕ್ಸ್ ಮಾಡಿದ ಬಳಿಕ ಮೂರು ನಿಮಿಷ ಕುದಿಸಬೇಕು. ಟೀಯನ್ನು ಜರಡಿ ಹಿಡಿದ್ರೆ ಕುಡಿಯಲು ಸಿದ್ಧವಾಗುತ್ತದೆ. ಟೀ ಕುಡಿದ ಮೇಲೆ ಟೇಸ್ಟ್ ಹೇಗಿದೆ ಅಂತಾ ನೋಡಿ..

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *