74ನೇ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ರಜನಿಕಾಂತ್; ಇವರು ಒಂದು ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?
ನ್ಯೂಸ್ ಆ್ಯರೋ: ಎಲ್ಲರ ನೆಚ್ಚಿನ ನಟ, ತನ್ನ ಐಕಾನಿಕ್ ಸ್ಟೈಲ್ಗಳಿಂದ ಅಭಿಮಾನಿಗಳ ಮನಸ್ಸು ಗೆದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹುಟ್ಟುಹಬ್ಬ ಇಂದು. 74ನೇ ವಸಂತಕ್ಕೆ ರಜನಿಕಾಂತ್ ಅವರು ಕಾಲಿಟ್ಟಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮಾಡಿದೆ. ತಮಿಳುನಾಡಿನ ಮಧುರೈ ನಗರದಲ್ಲಿರುವ ರಜನಿಕಾಂತ್ ದೇವಾಲಯ ಇದ್ದು ಅಲ್ಲಿಯು ಕೇಕ್ ಕಟ್ ಮಾಡಲಾಗಿದೆ ಎನ್ನಲಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಭಾರತದ ಸಿನಿಮಾ ಕ್ಷೇತ್ರದ ಹಲವಾರು ನಟ, ನಟಿಯರು ಶುಭ ಕೋರುತ್ತಿದ್ದಾರೆ. ಕೇವಲ ತಮಿಳು ಸಿನಿಮಾ ಕ್ಷೇತ್ರದ ಕಲಾವಿದರು ಮಾತ್ರವಲ್ಲದೇ ಟಾಲಿವುಡ್, ಮಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ನ ನಟ, ನಟಿಯರಿಂದಲೂ ಸೂಪರ್ ಸ್ಟಾರ್ಬರ್ತ್ಡೇ ವಿಶಸ್ ತಿಳಿಸಲಾಗುತ್ತಿದೆ. ಚೆನ್ನೈ ಅವರ ನಿವಾಸದ ಬಳಿ ರಾತ್ರಿ ಅಭಿಮಾನಿಗಳು ಬಂದು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತ್ಡೇ ವಿಶಸ್ ತಿಳಿಸುತ್ತಿದ್ದು ಹ್ಯಾಪಿ ಬರ್ತ್ಡೇ ತಲೈವಾ ಎಂದು ಹೇಳುತ್ತಿದ್ದಾರೆ.
ಸಾಲು ಸಾಲು ಚಿತ್ರಗಳನ್ನು ಅನೌನ್ಸ್ ಮಾಡಿರುವ ರಜನಿಕಾಂತ್, ಸದ್ಯ ಕೂಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಹುಟ್ಟುಹಬ್ಬ ಹಿನ್ನಲೆಯಲ್ಲಿ ಕೂಲಿ ಚಿತ್ರತಂಡ ಪೋಸ್ಟರ್ ಅಥವಾ ಚಿತ್ರದ ಗ್ಲಿಂಪ್ಲ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ಇಂಡಸ್ಟ್ರೀಯಲ್ಲಿ ಸೋಲನ್ನೇ ನೋಡದ ನಟ. ಒಂದು ಸಿನಿಮಾಕ್ಕಿಂತ ಇನ್ನೊಂದು ಸಿನಿಮಾ ಬಿಗ್ ಹಿಟ್ ತಂದುಕೊಡುತ್ತಿದ್ದವು. ಹೀಗಾಗಿಯೇ 74ರ ಹರಯದಲ್ಲೂ ಸಿನಿಮಾದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಮಾಡಿದಂತಹ ಮೂವಿಗಳು ಇಂದಿನ ಯುವ ನಟರಿಗೆ ಸ್ಪೂರ್ತಿ ಎಂದೇ ಹೇಳಬಹುದು.
ರಜನಿಕಾಂತ್ ಅವರು ಮೂಲತಹ ಬೆಂಗಳೂರಿನವರೇ ಆಗಿದ್ದು 1950 ಡಿಸೆಂಬರ್ 12 ರಂದು ಜನಿಸಿದ್ದರು. ಹೀಗಾಗಿಯೇ ಸಿಲಿಕಾನ್ ಸಿಟಿಯಲ್ಲಿ ಇರುವಾಗ ಸ್ಯಾಂಡಲ್ವುಡ್ನಲ್ಲೂ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವು ಮೂವಿಗಳ ಹೆಸರು ಇಲ್ಲಿವೆ. ಘರ್ಜನೆ ಸಿನಿಮಾದಲ್ಲಿ ಜನಿಕಾಂತ್ ಮತ್ತು ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಜಿನಿಕಾಂತ್, ಅಂಬರೀಶ್ ಮತ್ತು ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಸಿನಿಮಾ. ಕೆ.ಬಾಲಚಂದರ್ ನಿರ್ದೇಶನದ ತಪ್ಪಿದ ತಾಳ ಮೂವಿಯಲ್ಲಿ ರಜಿನಿಕಾಂತ್ ಅಭಿನಯ ಮಾಡಿದ್ದರು. ಹಿರಿಯ ನಟ ಅನಂತ್ ನಾಗ ಜೊತೆ ಮಾತು ತಪ್ಪದ ಮಗ, ಡಾ.ವಿಷ್ಣುವರ್ಧನ್ ಜೊತೆ ಕಿಲಾಡಿ ಕಿಟ್ಟು, ಗಲಾಟೆ ಸಂಸಾರ, ಕುಂಕುಮ ರಕ್ಷೆ, ಸಹೋದರರ ಸವಾಲ್ ಒಂದು ಪ್ರೇಮದ ಕಥೆ, ಬಾಳು ಜೇನು, ಕಥಾ ಸಂಗಮ ಹೀಗೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ.
ಇನ್ನು ಅವರು ಶ್ರೀಮಂತ ನಟರಲ್ಲಿ ಒಬ್ಬರು. ಅವರು ಅತಿ ಹೆಚ್ಚು ಸಂಭಾವನೆ ಪಡೆಯು ನಟರ ಸಾಲಿನಲ್ಲಿ ಇದ್ದಾರೆ. ಹೌದು. . ಫೋರ್ಬ್ಸ್ ಇಂಡಿಯಾ ವರದಿ ಪ್ರಕಾರ ರಜನಿಕಾಂತ್ ಅವರು 150ರಿಂದ 210 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದು ಅವರು ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ. ‘ಜೈಲರ್’ ಚಿತ್ರದ ನಟನೆಗೆ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ರಜನಿಕಾಂತ್ ಅವರ ಆಸ್ತಿ 430 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಪ್ರತಿ ವರ್ಷ ಹಣವನ್ನು ಸಾಕಷ್ಟು ಸಂಖ್ಯೆಯಲ್ಲಿ ಖರ್ಚು ಮಾಡುತ್ತಾರೆ. ಸಾಕಷ್ಟು ಸಾಮಾಜಿಕ ಕೆಲಸಗಳು ಅವರ ಕಡೆಯಿಂದ ಆಗಿವೆ. ಈ ಕಾರಣದಿಂದಲೂ ರಜನಿಕಾಂತ್ ಅವರು ಅನೇಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ರಜನಿಕಾಂತ್ ಅವರು ಲಕ್ಷುರಿ ಪ್ರಾಪರ್ಟಿಗಳನ್ನು ಹೊಂದಿದ್ದಾರೆ. ಚೆನ್ನೈನ ದುಬಾರಿ ಪ್ರದೇಶ ಎನಿಸಿಕೊಂಡಿರೋ ಪೋಯಿಸ್ ಗಾರ್ಡನ್ನಲ್ಲಿ ಅವರು 2002ರಲ್ಲಿ ಮನೆ ಕಟ್ಟಿದರು. ಈ ಮನೆಯ ಬೆಲೆ 35 ಕೋಟಿ ರೂಪಾಯಿ ಆಗಿದೆ. ಅವರು ಚೆನ್ನೈನಲ್ಲಿ ಕಲ್ಯಾಣ ಮಂಟಪ ಹೊಂದಿದ್ದು, ಇದರ ಬೆಲೆ 20 ಕೋಟಿ ರೂಪಾಯಿ.
ರಜನಿಕಾಂತ್ಗೆ ಕಾರ್ಗಳ ಬಗ್ಗೆ ಕ್ರೇಜ್ ಇದೆ. ಅವರು ರೋಲ್ಸ್ ರಾಯ್ಸ್ ಘೋಸ್ಟ್, ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೆ, ಬಿಎಂಡಬ್ಲ್ಯೂ ಎಕ್ಸ್5, ಮರ್ಸಿಡೀಸ್ ಬೆಂಜ್ ಜಿ ವ್ಯಾಗನ್, ಲ್ಯಾಂಬೋರ್ಗಿನಿ ಉರುಸ್, ಬೆಂಟ್ಲಿ ರೀತಿಯ ಕಾರುಗಳು ಅವರ ಗ್ಯಾರೇಜ್ನಲ್ಲಿ ಇವೆ. ಇದಲ್ಲದೆ ಸಾಮಾನ್ಯ ಕಾರುಗಳಾದ ಟೊಯಾಟೋ ಇನೋವಾ, ಹೊಂಡಾ ಸಿವಿ, ಪ್ರೀಮಿಯರ್ ಪದ್ಮಿನಿ, ಹಿಂದೂಸ್ತಾನ್ ಮೋಟರ್ ಅಂಬಾಸಿಡರ್ ಕಾರುಗಳ ಕಲೆಕ್ಷನ್ ಅವರ ಬಳಿ ಇದೆ.
Leave a Comment