ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು!?; ಮನೆಯಲ್ಲಿ ಆಕೆ ಹೀಗೆ ನಡೆದುಕೊಳ್ಳುತ್ತಾರೆ ಎಂದ ಪತಿ

divorce
Spread the love

ನ್ಯೂಸ್ ಆ್ಯರೋ: 1983 ರಲ್ಲಿ ತೆರೆಕಂಡ ‘ವೆಲೈ ಮನಸು’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಕೃಷ್ಣನ್, ಒಂದು ಕಾಲದಲ್ಲಿ ಐಟಂ ಡ್ಯಾನ್ಸ್ ಸೇರಿದಂತೆ, ನಿರಂತರವಾಗಿ ಹಲವಾರು ಪಾತ್ರಗಳಲ್ಲಿ ಮತ್ತು ಬಹಳ ದಿಟ್ಟ ಪಾತ್ರಗಳನ್ನು ಆಯ್ಕೆ ಮಾಡಿ ನಟಿಸುತ್ತಿದ್ದರು.

ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮುಂತಾದ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣನ್, ಸೂಪರ್ ಸ್ಟಾರ್ ರಜನಿಕಾಂತ್‌ರಿಗೆ ಸವಾಲು ಹಾಕುವಂತೆ ನಟಿಸಿ, ಚಿತ್ರಮಂದಿರವನ್ನು ರಂಜಿಸಿದ್ದಾರೆ. ರಮ್ಯಾ ಕೃಷ್ಣನ್ ‘ಪಡೆಯಪ್ಪ’ ಚಿತ್ರದಲ್ಲಿ ನೀಲಾಂಬರಿ ಪಾತ್ರಕ್ಕೆ ಮೊದಲು ಪರಿಗಣಿಸಲಾಗಿದ್ದು ಮೀನಾ ಅವರನ್ನು. ಆದರೆ ಅವರ ಶಾಂತ ಮುಖ ಈ ಪಾತ್ರಕ್ಕೆ ಹೊಂದಿಕೆಯಾಗದ ಕಾರಣ, ನಿರ್ದೇಶಕ ಕೆ.ಎಸ್.ರವಿಕುಮಾರ್ ರಮ್ಯಾ ಕೃಷ್ಣನ್ ಅವರನ್ನು ಆಯ್ಕೆ ಮಾಡಿದರು. ಇದಲ್ಲದೆ ರಜನಿಕಾಂತ್‌ಗೆ ಸರಿಸಮಾನವಾದ ನಟನೆಯನ್ನು, ನೀಲಾಂಬರಿ ಪಾತ್ರದಲ್ಲಿ ಪ್ರದರ್ಶಿಸಿದರು ನಟಿ ರಮ್ಯಾ ಕೃಷ್ಣನ್. ವಿಮರ್ಶಾತ್ಮಕವಾಗಿ ಈ ಚಿತ್ರ ಅವರಿಗೆ ದೊಡ್ಡ ತಿರುವು ನೀಡಿತು.

Ramya Krishnan

ನಿರ್ದೇಶಕ ವಂಶಿಯನ್ನು ವಿವಾಹವಾದ ನಂತರ, ಚಲನಚಿತ್ರ ಅವಕಾಶಗಳು ಯಾವುದೂ ಸಿಗದ ಕಾರಣ, ಧಾರಾವಾಹಿಗಳತ್ತ ಮುಖ ಮಾಡಿದರು ರಮ್ಯಾ ಕೃಷ್ಣ. ಅದೇ ರೀತಿ, ತೆಲುಗು ಮತ್ತು ತಮಿಳಿನಲ್ಲಿ ತೂಕದ ಪಾತ್ರಗಳಲ್ಲಿ ನಟಿಸಲು ಕಾಯುತ್ತಿದ್ದ ಇವರಿಗೆ, ಎರಡನೇ ಇನ್ನಿಂಗ್ಸ್ ಆಗಿ ಬಂದಿದ್ದು ಬಾಹುಬಲಿ ಚಿತ್ರ. ರಾಜಮಾತೆ ಶಿವಗಾಮಿಯಾಗಿ ಇವರು ನಿರ್ವಹಿಸಿದ ಪಾತ್ರ, ಚಿತ್ರರಂಗದಲ್ಲಿ ಇವರ ಘನತೆಯನ್ನು ಹೆಚ್ಚಿಸಿತು.

ಇನ್ನು ರಮ್ಯಾ ಕೃಷ್ಣನ್ ಮನೆಯಲ್ಲಿ ಹೇಗಿರುತ್ತಾರೆ ಎಂದು ಅವರ ಪತಿ ವಂಶಿ ಹೇಳಿದ ಮಾಹಿತಿ ಈಗ ವೈರಲ್ ಆಗುತ್ತಿದೆ. ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ವಂಶಿ ಪ್ರೀತಿಸಿ ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿದೆ. ನಾಗಾರ್ಜುನ ನಟಿಸಿದ ಚಂದ್ರಲೇಖಾ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಪ್ರೀತಿಸಲು ಆರಂಭಿಸಿದರು. ನಂತರ ಪೋಷಕರ ಒಪ್ಪಿಗೆಯೊಂದಿಗೆ ಇವರ ವಿವಾಹ ನೆರೆಯಿತು. ಇವರಿಗೆ ಒಬ್ಬ ಮಗನೂ ಇದ್ದಾನೆ.

Ramya Krishnanvv

ಆದರೆ ಇತ್ತೀಚೆಗೆ ಇವರ ದಾಂಪತ್ಯದ ಬಗ್ಗೆ ವದಂತಿಗಳು ಹರಿದಾಡಿದವು. ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಮತ್ತು ಆದ್ದರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ರಮ್ಯಾ ಕೃಷ್ಣನ್ ಚೆನ್ನೈನಲ್ಲೂ, ಕೃಷ್ಣ ವಂಶಿ ಹೈದರಾಬಾದ್‌ನಲ್ಲೂ ವಾಸಿಸುತ್ತಿದ್ದಾರೆ ಎಂಬ ಮಾಹಿತಿಯೂ ಬೆಂಕಿಯಂತೆ ಹರಡಿತ್ತು. ಈ ವದಂತಿಗೆ ಈಗ ವಂಶಿ ತೆರೆ ಎಳೆದಿದ್ದಾರೆ.

ಈ ಬಗ್ಗೆ ವಂಶಿ ಹೇಳುತ್ತಾ… “ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿದ್ದೇನೆ ಮತ್ತು ರಮ್ಯಾ ಕೃಷ್ಣನ್ ಚೆನ್ನೈನಲ್ಲಿದ್ದಾರೆ” ಎಂದು ಹೇಳಿದರು. ನಾವು ಬೇರೆ ಬೇರೆಯಾಗಿ ಇರುವುದರಿಂದಲೇ ಈ ವದಂತಿಗಳು ಹುಟ್ಟಿಕೊಂಡಿರಬಹುದು, ಈ ರೀತಿ ವದಂತಿಗಳನ್ನು ಹರಡುವುದು ವಿಕೃತ. ಇವುಗಳನ್ನು ನೋಡಿದಾಗ ನಗು ಬರುತ್ತದೆ, ಇದರಲ್ಲಿ ಸತ್ಯಾಂಶವಿಲ್ಲ ಎಂದೂ ಹೇಳಿದರು ಕೃಷ್ಣ ವಂಶಿ.

ಮನೆಯಲ್ಲಿ ರಮ್ಯಾ ತುಂಬಾ ತಮಾಷೆಯ ವ್ಯಕ್ತಿ. ಎಲ್ಲರನ್ನು ತುಂಬಾ ಪ್ರೀತಿಸುತ್ತಾರೆ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಮನೆಯಲ್ಲಿ ತುಂಬಾ ಸಂತೋಷವಾಗಿರುತ್ತಾರೆ. ಅಲ್ಲದೇ ಅವರು ತುಂಬಾ ಬುದ್ಧಿವಂತರು, ಎಲ್ಲ ವಿಷಯಗಳಲ್ಲೂ ತುಂಬಾ ಚತುರರು ಮತ್ತು ಚುರುಕಾಗಿರುತ್ತಾರೆ ಎಂದು ಹೇಳಿದರಲ್ಲದೇ ತನ್ನ ಕುಟುಂಬದವರನ್ನು ರಮ್ಯಾ ಕೃಷ್ಣನ್ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಅಂತ ಕೃಷ್ಣ ವಂಶಿ ತಿಳಿಸಿದ್ದಾರೆ. ಈ ರೀತಿ ಪತ್ನಿಯನ್ನು ಹೊಗಳಿ ಈ ವಿಚ್ಛೇದನ ವದಂತಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ನಡೆದ ‘ಖಡ್ಗಂ’ ಚಿತ್ರದ ಮರು ಬಿಡುಗಡೆಯ ಸಂದರ್ಭದಲ್ಲಿ ಈ ಮಾಹಿತಿಯನ್ನು ನಿರ್ದೇಶಕರು ಬಹಿರಂಗಪಡಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!