Gruha laxmi Scheme : 9,14,155 ಮಹಿಳೆಯರ ಖಾತೆಗೆ ಹಣವೇ ಜಮಾ ಆಗಿಲ್ಲ..!! – ಯೋಜನೆಯ ವೈಫಲ್ಯಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

Gruha laxmi Scheme : 9,14,155 ಮಹಿಳೆಯರ ಖಾತೆಗೆ ಹಣವೇ ಜಮಾ ಆಗಿಲ್ಲ..!! – ಯೋಜನೆಯ ವೈಫಲ್ಯಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

ನ್ಯೂಸ್ ಆ್ಯರೋ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅಡಿ ಈವರೆಗೆ 9,44,155 ಅರ್ಜಿದಾರರಿಗೆ ಹಣ ಹೋಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಕ್ತ ಕಾರಣಗಳನ್ನು ನೀಡಿದ್ದಾರೆ.

3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ.

5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ.

1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ಇಲಾಖೆ ಕ್ರಮ ವಹಿಸಿದೆ. 9,766 ಇಂದೀಕರಿಸಿದ ದತ್ತಾಂಶದಿಂದಾಗಿ ಉಂಟಾದ ವಿಳಂಬವನ್ನು ಸೇವಾಸಿಂಧು ವತಿಯಿಂದ ಪುನರ್ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದುವರೆಗೆ 1.8 ಕೋಟಿ ಅರ್ಹ ಫಲಾನುಭವಿಗಳಿಗೆ 2169 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿತ್ತು. ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.

ಅಕ್ಟೋಬರ್ 4ರವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಯಶಸ್ವಿಯಾಗಿ ವರ್ಗಾಯಿಸಲಾಗಿದೆ. 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Related post

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ…

Leave a Reply

Your email address will not be published. Required fields are marked *