
ಪ್ಯಾಲೆಸ್ತೀನ್ – ಇಸ್ರೇಲ್ ನಡುವೆ ಮುಂದುವರೆದ ಯುದ್ದ – ‘ಆಪರೇಷನ್ ಅಜಯ್’ 2ನೇ ವಿಮಾನದಲ್ಲಿ ತವರಿಗೆ ಬಂದ 235 ಭಾರತೀಯರು
- ರಾಷ್ಟ್ರೀಯ ಸುದ್ದಿ
- October 14, 2023
- No Comment
- 85
ನ್ಯೂಸ್ ಆ್ಯರೋ : ಕಳೆದ ಶನಿವಾರ ಆರಂಭಗೊಂಡ ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದೆ. ಇದೀಗ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರನ್ನು’ಆಪರೇಷನ್ ಅಜಯ್’ ಅಡಿಯಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ. ಇಂದು ಬೆಳಿಗ್ಗೆ 235 ಭಾರತೀಯರನ್ನ ಹೊತ್ತ 2ನೇ ವಿಮಾನವು ದೆಹಲಿಗೆ ಬಂದಿದೆ.
ಇಸ್ರೇಲ್‌ನ ಟೆಲ್ ಅವಿವ್‌ನಿಂದ ಭಾರತಕ್ಕೆ ಬಂದ ಚಾರ್ಟರ್ ವಿಮಾನದಲ್ಲಿ ಇಬ್ಬರು ಶಿಶುಗಳು, ಕೆಲ ಮಕ್ಕಳು ಸೇರಿದಂತೆ 235 ಭಾರತೀಯ ನಾಗರೀಕರು ಇದ್ದಾರೆ. ಈಗಾಗಲೇ ಮೊದಲ ವಿಮಾನದಲ್ಲಿ 212 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿತ್ತು.
ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ಮತ್ತು ಇಸ್ರೇಲಿ ಪಡೆಗಳ ನಡುವೆ ಯುದ್ಧ ಆರಂಭವಾಗಿತ್ತು. ಯುದ್ಧ ಆರಂಭದ ಬೆನ್ನಲ್ಲೇ ಭಾರತದಿಂದ ಇಸ್ರೇಲ್ಗೆ ಮತ್ತು ಇಸ್ರೇಲ್‌ನಿಂದ ಭಾರತಕ್ಕೆ ಏರ್ ಇಂಡಿಯಾ ಮತ್ತು ಇತರ ಏರ್‌ಲೈನ್ಸ್ ತನ್ನ ಎಲ್ಲಾ ವಾಣಿಜ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು.
ಇಸ್ರೇಲ್‌ನಿಂದ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಭಾರತ ಸರ್ಕಾರ ಅಕ್ಟೋಬರ್ 11 ರಂದು ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಿತು. ಅಕ್ಟೋಬರ್ 12ರ ಸಂಜೆ ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಹೊರಟಿದ್ದು, ಅಕ್ಟೋಬರ್ 13ರ (ಶುಕ್ರವಾರ) ಬೆಳಗ್ಗೆ ದೆಹಲಿ ತಲುಪಿತು. ಅಗತ್ಯವಿದ್ದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳನ್ನು ಸಹ ನಿಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.
ಕಂಟ್ರೋಲ್ ರೂಮ್ ಮತ್ತು ಸಹಾಯವಾಣಿ
ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಗಂಟೆಗಳ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಿದೆ. ನಿಯಂತ್ರಣ ಕೊಠಡಿಯ ಫೋನ್ ನಂಬರ್:
- 1800118797 (ಟೋಲ್ ಫ್ರೀ),
- +91-11 23012113
- +91-11-23014104
- +91-11-23017905
- +919968291988
- ಇಮೇಲ್ ಐಡಿ — situationroom@mea.gov.in.
ಭಾರತೀಯ ರಾಯಭಾರಿ ಕಚೇರಿಯ ತುರ್ತು ಸಹಾಯವಾಣಿ
- +972-35226748
- +972-543278392
- ಇಮೇಲ್ ಐಡಿ — cons1.telaviv@mea.gov.in.
ಇಸ್ರೇಲ್-ಹಮಾಸ್ ಯುದ್ಧ
ಕಳೆದ ಶನಿವಾರ ಆರಂಭಗೊಂಡು ಪ್ಯಾಲೆಸ್ರೀನ್ ಹಾಗೂ ಇಸ್ರೇಲ್ ದೇಶಗಳ ನಡುವಿನ ಯುದ್ಧ ಇಂದು ಮುಂದುವರೆದಿದೆ. ವರದಿಗಳ ಪ್ರಕಾರ, ಯುದ್ಧದಲ್ಲಿ ಎರಡೂ ಕಡೆಗಳಿಂದ ಈವರೆಗೆ 3,200 ಮಂದಿ ಬಲಿಯಾಗಿದ್ದಾರೆ. ಅಕ್ಟೋಬರ್ 7 ರಂದು ಬೆಳಗ್ಗೆ ಇದ್ದಕ್ಕಿದ್ದಂತೆ ಇಸ್ರೇಲ್‌ನ ಮೇಲ್ ಹಮಾಸ್ ಉಗ್ರರು 5 ಸಾವಿರ ರಾಕೆಟ್ಗಳಿಂದ ದಾಳಿ ನಡೆಸಿತ್ತು. ಇಸ್ರೇಲ್ಗೆ ಇದು ಗಾಜಾದಿಂದ ಅನಿರೀಕ್ಷಿತ ದಾಳಿಯಾಗಿದ್ದು, ರೊಚ್ಚಿಗೆದ್ದ ಇಸ್ರೇಲ್ ಪ್ರತೀಕಾರದ ದಾಳಿ ಮಾಡಿದೆ. ಇದರಲ್ಲಿ ಪ್ಯಾಲೇಸ್ತೀನ್‌ನ ನಾಗರೀಕರು ಸಾವನ್ನಪ್ಪಿದ್ದಾರೆ.