PKL Season 11 : ಫ್ರಾಂಚೈಸಿ ಗಳ ರಿಟೈನ್ ಆಟಗಾರರ ಪಟ್ಟಿ ಬಿಡುಗಡೆ – ಸ್ಟಾರ್ ಆಟಗಾರ ಪವನ್, ಪ್ರದೀಪ್ ಸೇರಿ ಈ ಬಾರಿ ಬಿಡ್ಡಿಂಗ್ ನಲ್ಲಿ ಯಾರೆಲ್ಲ ಇರ್ತಾರೆ?

IMG 20240807 WA0026
Spread the love

ನ್ಯೂಸ್ ಆ್ಯರೋ : : ಪ್ರೊ ಕಬಡ್ಡಿ ಲೀಗ್ (PRO KABADDI LEAGUE) 11ನೇ ಆವೃತ್ತಿಗೆ ಫ್ರಾಂಚೈಸಿ ಗಳು ತಮ್ಮ‌ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದು, ಅಚ್ಚರಿಯೆಂಬಂತೆ ಬಹುಪಾಲು ಸ್ಟಾರ್ ಆಟಗಾರರು ಬಿಡುಗಡೆಯಾಗಿದ್ದಾರೆ.

ಈ ಪೈಕಿ ಪವನ್ ಸೆಹ್ರಾವತ್, ಪರ್ದಿಪ್ ನರ್ವಾಲ್, ಮಣಿಂದರ್ ಸಿಂಗ್, ಇರಾನ್ ನ ಫಜಲ್ ಅತ್ರಚಾಲಿ ಹಾಗೂ ಚಿಯಾನೆ ಈ ಬಾರಿ ತಮ್ಮ ತಮ್ಮ ತಂಡಗಳಿಂದ ಬಿಡುಗಡೆಯಾಗಿದ್ದು ಬಿಡ್ಡಿಂಗ್ ಗೆ ಲಭ್ಯವಿರಲಿದ್ದಾರೆ.

ಆದರೆ ಕಳೆದ ಬಾರಿ ಬಲಿಷ್ಠ ಆಟ ಪ್ರದರ್ಶಿಸಿದ್ದ ದಬಾಂಗ್ ಡೆಲ್ಲಿ ಕೆಸಿ ತನ್ನ ರೈಡರ್ ಜೋಡಿ ಅಶು ಮಲಿಕ್ ಮತ್ತು ನವೀನ್ ಕುಮಾರ್ ಅವರನ್ನು ಉಳಿಸಿಕೊಂಡಿದೆ. ಸೀಸನ್ 10 ರಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ವಿಜೇತ ಅಸ್ಲಂ ಇನಾಮ್ದಾರ್ ಅವರನ್ನು ಪುಣೇರಿ ಪಲ್ಟನ್ ಉಳಿಸಿಕೊಂಡರೆ, ಜೈಪುರ ಪಿಂಕ್ ಪ್ಯಾಂಥರ್ಸ್ ತನ್ನ ಸ್ಟಾರ್ ರೈಡರ್ ಅರ್ಜುನ್ ದೇಶ್ವಾಲ್ ಅವರನ್ನು ಬಿಟ್ಟುಕೊಟ್ಟಿಲ್ಲ‌.

Fb Img 17230055779571509109935656695795

ಯುಪಿ ಯೋಧ ತಂಡ ಸುರೀಂದರ್ ಗಿಲ್, ಆಶು ಸಿಂಗ್, ಸುಮಿತ್ ಸಂಗ್ವಾನ್ ಅವರನ್ನು ಉಳಿಸಿಕೊಂಡರೆ, ಬೆಂಗಾಲ್ ವಾರಿಯರ್ಸ್ ನಿತಿನ್ ಕುಮಾರ್ ಹಾಗೂ ವಿಶ್ವಾಸ್ ಎಸ್.‌ ಅವರನ್ನು ಉಳಿಸಿಕೊಂಡಿದೆ.

ಇನ್ನು ತಮಿಳ್ ತಲೈವಾಸ್ ಹೆಡ್ ಕೋಚ್ ಆಗಿದ್ದ ಅಶನ್ ಕುಮಾರ್ ಅವರನ್ನು ಕೋಚ್ ಸ್ಥಾನದಿಂದ ಕೈಬಿಡಲಾಗಿದ್ದರೆ, ದಬಾಂಗ್ ಡೆಲ್ಲಿ ತಂಡದ ಕೋಚ್ ಆಗಿದ್ದ ರಾಮ್ಬೀರ್ ಖೋಕರ್ ಬದಲಾಗಿ ಜೋಗಿಂದರ್ ನರ್ವಾಲ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಬೆಂಗಳೂರು ಬುಲ್ಸ್ ತಂಡದ ಕೋಚ್ ಆಗಿ ರಣ್ಧೀರ್ ಸಿಂಗ್ ಸೆಹ್ರಾವತ್ ಮುಂದುವರೆಯಲಿದ್ದಾರೆ.

Fb Img 17230055499593430417697042708261
Fb Img 17230055572753976222566664935382
Fb Img 1723005555015701446636886384
Fb Img 17230055527408469880647094835075
Fb Img 17230055598036900056357306756785
Fb Img 17230055624806822706835766160314
Fb Img 17230055651967964872076240078612

ಒಟ್ಟಾರೆಯಾಗಿ ಎಲೈಟ್ ರಿಟೈನ್ಡ್ ಪ್ಲೇಯರ್ಸ್ (ಇಆರ್ ಪಿ) ವಿಭಾಗದಲ್ಲಿ 22, ಉಳಿಸಿಕೊಂಡ ಯುವ ಆಟಗಾರರ (ಆರ್​ವೈಪಿ) ವಿಭಾಗದಲ್ಲಿ 26 ಮತ್ತು ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರರ (ಇಎನ್​​ವೈಪಿ) ವಿಭಾಗದಲ್ಲಿ 40 ಸೇರಿದಂತೆ ಒಟ್ಟು 88 ಆಟಗಾರರನ್ನು ಮೂರು ವಿಭಾಗಗಳಲ್ಲಿ ಉಳಿಸಿಕೊಳ್ಳಲಾಗಿದೆ.

ಪ್ರೋ ಕಬಡ್ಡಿ ಲೀಗ್ ಸೀಸನ್ 11 ಆಟಗಾರರ ಹರಾಜಿನಲ್ಲಿ ದೇಶೀಯ ಮತ್ತು ವಿದೇಶಿ ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ವರ್ಗ ಎ, ಬಿ, ಸಿ ಮತ್ತು ಡಿ. ಆಟಗಾರರನ್ನು ಪ್ರತಿ ವಿಭಾಗದಲ್ಲಿ ‘ಆಲ್ ರೌಂಡರ್ಸ್’, ‘ಡಿಫೆಂಡರ್ಸ್’ ಮತ್ತು ‘ರೈಡರ್ಸ್’ ಎಂದು ಉಪವಿಭಜಿಸಲಾಗುವುದು.

ಪ್ರತಿ ವಿಭಾಗದ ಮೂಲ ಬೆಲೆ ಎ – 30 ಲಕ್ಷ ರೂ., ವರ್ಗ ಬಿ – 20 ಲಕ್ಷ ರೂ., ವರ್ಗ ಸಿ – 13 ಲಕ್ಷ ರೂ., ವರ್ಗ ಡಿ – 9 ಲಕ್ಷ ರೂ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2024 ರ ಎರಡು ಅಂತಿಮ ತಂಡಗಳ 24 ಆಟಗಾರರು ಸೇರಿದಂತೆ ಸೀಸನ್ 11 ಪ್ಲೇಯರ್ ಪೂಲ್ 500+ ಆಟಗಾರರನ್ನು ಒಳಗೊಂಡಿರುತ್ತದೆ.

ಆದರೆ ತಂಡವನ್ನು ಕಟ್ಟಲು ಫ್ರಾಂಚೈಸಿಗಳು ಐದು ಕೋಟಿ ಮೊತ್ತವನ್ನಷ್ಟೇ ಬಳಸಲು ಅವಕಾಶವಿದ್ದು, ಅಷ್ಟೇ ಮೊತ್ತಕ್ಕೆ ಬಲಿಷ್ಠ ತಂಡ ಕಟ್ಟುವ ಅನಿವಾರ್ಯತೆ ಇದೆ. ಆದರೂ ಸ್ಟಾರ್ ಆಟಗಾರರು ಬಿಡ್ಡಿಂಗ್ ನಲ್ಲಿ ಇರುವ ಕಾರಣ ಕೋಟಿ ಬಾಚುವವರು ಯಾರು ಎಂಬ ಬಗ್ಗೆ ಕುತೂಹಲ ಮೂಡಿದೆ.

Leave a Comment

Leave a Reply

Your email address will not be published. Required fields are marked *