ಉಡುಪಿ : ಪೆರ್ಡೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ರಾಜಕೀಯ – ಎರಡೆರಡು ಪಂಚಾಯತ್ ನ ಜವಾಬ್ದಾರಿ ಇದೆ, ಆದರೆ ಎರಡೂ ಕಡೆ ಕೆಲಸ ಮಾಡಲ್ಲವಂತೆ..!!
ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಮನ ಕೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ವರ್ಗಾವಣೆ ಮಾಡದಿದ್ದರೆ ಗ್ರಾಮ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಏನಿದು ವಿವಾದ ?
ಪೆರ್ಡೂರು ಗ್ರಾಮ ಪಂಚಾಯತ್ ಪಿಡಿಓ ಸುಮನ ಅವರಿಗೆ ಹೆಚ್ಚುವರಿಯಾಗಿ ಬೈರಂಪಳ್ಳಿ ಪಂಚಾಯತ್ ನ ಹೊಣೆಯನ್ನೂ ನೀಡಲಾಗಿದೆ.ಆದರೆ ಎರಡೂ ಕಡೆ ಕೆಲಸ ಮಾಡುವುದಿಲ್ಲ ,ಗ್ರಾಮಸ್ಥರು ಕೆಲಸಕ್ಕಾಗಿ ಬಂದರೆ ಮಾಡದೆ ಸತಾಯಿಸುತ್ತಾರೆ.
ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಪಿಡಿಒ ಅವರು ಬೆದರಿಕೆ ಹಾಕುತ್ತಾರೆ. ಇದರಿಂದ ಜನರು ಗ್ರಾಮ ಪಂಚಾಯಿತಿ ಕಚೇರಿಗೆ ಬರಲು ಭಯಪಡುತ್ತಾರೆ ಎಂದು ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ ಆರೋಪಿಸಿದ್ದಾರೆ.
ಇನ್ನೊಂದೆಡೆ ಈ ಪಿಡಿಒ ವಿಚಾರದಲ್ಲಿ ರಾಜಕೀಯವೂ ಬೆರೆತಿದ್ದು ಒಂದು ಪಕ್ಷದವರು ಬೆಂಬಲಿಸಿದರೆ, ಇನ್ನೊಂದು ಪಕ್ಷದವರು ವಿರೋಧಿಸುತ್ತಿದ್ದಾರೆ. ಒಟ್ಟಾರೆ ರಾಜಕೀಯ ಹಗ್ಗಜಗ್ಗಾಟದಿಂದಾಗಿ ಗ್ರಾಮಸ್ಥರು ಬಡವಾಗಿದ್ದಾರೆ. ಸಂಬಂಧಪಟ್ಡವರು ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.
Leave a Comment