SP on Charge : ದ.ಕ. ಜಿಲ್ಲಾ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್. ಅಧಿಕಾರ ಸ್ವೀಕಾರ – ಸಿ.ಬಿ.‌ರಿಷ್ಯಂತ್ ಸೇವೆಗಾಗಿ ಬೆಂಗಳೂರಿನತ್ತ…

20240704 121944
Spread the love

ನ್ಯೂಸ್ ಆ್ಯರೋ : ರಾಜ್ಯ ಸರ್ಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕರಾಗಿ ನೇಮಕಗೊಂಡಿದ್ದ ಶ್ರೀ ಯತೀಶ್.ಎನ್ (ಐಪಿಎಸ್) ಅಧಿಕಾರ ಸ್ವೀಕರಿಸಿದ್ದಾರೆ‌.

ಈ ಮೊದಲು ದ.ಕ.‌ಎಸ್ಪಿಯಾಗಿದ್ದ ಸಿ.ಬಿ.‌ರಿಷ್ಯಂತ್ ಅವರು ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಯತೀಶ್ ಅವರು ನಿಯುಕ್ತರಾಗಿದ್ದಾರೆ.

2016ರ ಕರ್ನಾಟಕ ಕೇಡರ್ ನ IPS ಅಧಿಕಾರಿಯಾಗಿರುವ ಯತೀಶ್ ಎನ್ ಅವರು ಈ ಮೊದಲು ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ನಿನ್ನೆಯಷ್ಟೇ ರಾಜ್ಯ ಸರ್ಕಾರ 25 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!