‘ಕಾಣದ ಕೈಗಳಿಂದ ಕುತಂತ್ರ’.. ಪವಿತ್ರಾ ಗೌಡ ಪೋಸ್ಟ್; ಭಗವದ್ಗೀತೆ ಸಂದೇಶ ಹಾಕಿ ವಾರ್ನಿಂಗ್?

ನ್ಯೂಸ್ ಆ್ಯರೋ: ಪವಿತ್ರಾ ಗೌಡ, ರೇಣುಕಾಸ್ವಾಮಿ ಪ್ರಕರಣದ ಮೇನ್ ಕ್ಯಾರೆಕ್ಟರ್, 6 ತಿಂಗಳು ಜೈಲು ವನವಾಸ ಅನುಭವಿಸಿ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಜೊತೆಗೆ ಕೋರ್ಟ್ನಿಂದ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಪ್ರಯಾಣಿಸ್ತಿದ್ದು, ಟೆಂಪಲ್ ರನ್ ಶುರು ಮಾಡಿದ್ದಾರೆ. ಜೈಲಿನಿಂದ ಬಂದ ಬಳಿಕ ಸೈಲೆಂಟ್ ಆಗಿದ್ದ ಪವಿತ್ರಾಗೌಡ.. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡತೊಡಗಿದ್ದಾರೆ. ಅದರಲ್ಲೂ ಅರ್ಜುನನಿಗೆ ಕೃಷ್ಣ ಹೇಳುವ ಭಗವದ್ಗೀತೆಯ ಸಂದೇಶವನ್ನು ಉಲ್ಲೇಖಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಜೈಲಿನಿಂದ ರಿಲೀಸ್ ಆಗಿರುವ ಪವಿತ್ರಾ ಮೊದಲಿನ ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಇಲ್ಲ.. ಹೀಗಿದ್ದರೂ ಕೂಡಾ ಪವಿತ್ರಾ ಗೌಡ ಆಗಾಗ ಫೋಟೋ ಅಥವಾ ಸ್ಟೋರಿ ವಿಡಿಯೋಗಳನ್ನು ಶೇರ್ ಮಾಡ್ತಿರ್ತಾರೆ. ಇದೀಗ ಪವಿತ್ರಾ ಗೌಡ ತಮ್ಮ ಇನ್ಸ್ಟಾ ಖಾತೆಯಲ್ಲಿ, ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು” ಎಂದು ಬರೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಸದ್ಯ, ಪವಿತ್ರಾ ಗೌಡ ಪೋಸ್ಟ್ ವೈರಲ್ ಆಗ್ತಿದೆ.. ಹಾಗೇ ಸಾಕಷ್ಟು ಕೂತುಹಲ ಮೂಡಿಸ್ತಿದ್ದು, ಭಗವದ್ಗೀತೆ ಸಂದೇಶ ಹಾಕಿ ಪವಿತ್ರಾ ಗೌಡ ವಾರ್ನಿಂಗ್ ಕೊಟ್ರಾ ಅಥವಾ ತಮ್ಮ ತಪ್ಪಿನ ಅರಿವಾಗಿ ಈ ರೀತಿ ಪೋಸ್ಟ್ ಹಾಕಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ.
ಕೊಲೆ ಆರೋಪಿ ನಟ ದರ್ಶನ್ ತಮ್ಮ ಗನ್ಗಾಗಿ ಕಾನೂನು ಹೋರಾಟ ಮುಂದುವರಿಸಿದ್ದಾರೆ.. ಇತ್ತೀಚಿಗಷ್ಟೇ ಆರ್ ಆರ್ ನಗರ ಪೊಲೀಸ್ರು, ದರ್ಶನ್ ಗನ್ನ ವಶಪಡಿಸಿಕೊಂಡು, ಗನ್ ಲೈಸೆನ್ಸ್ ರದ್ದು ಪಡಿಸಿದ್ರು. ಇದೀಗ ನಟ ದರ್ಶನ್ ಲೈಸೆನ್ಸ್ ರದ್ದು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.
Leave a Comment