ಕಿರಾತಕ ನಟಿಯ ಖಾಸಗಿ ವಿಡಿಯೋ ಲೀಕ್; ʼಎಂಜಾಯ್ʼ ಮಾಡಿ ಎಂದ ಬೆಡಗಿ
ನ್ಯೂಸ್ ಆ್ಯರೋ: ಯಶ್ ಜೊತೆ ಕಿರಾತಕ ಸಿನಿಮಾದಲ್ಲಿ ಅಭಿನಯಿಸಿದ್ದ ಚೆಲುವೆ ಒವಿಯಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಒವಿಯಾ ಅವರ ಖಾಸಗಿ ವಿಡಿಯೋ ಎನ್ನಲಾದ ವಿಡಿಯೋ ತುಣುಕೊಂದು ಸದ್ಯ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ನಟಿ ಈವರೆಗೂ ಸ್ಪಷ್ಟನೆ ನೀಡದೇ ಇದ್ದರೂ, ಇನ್ಸ್ಟಾಗ್ರಾಂನಲ್ಲಿ ಕೆಲವು ಕಾಮೆಂಟ್ಗಳಿಗೆ ಅವರು ಕೊಟ್ಟಿರುವ ಪ್ರತಿಕ್ರಿಯೆ ಅಚ್ಚರಿಗೆ ಕಾರಣವಾಗಿದೆ.
ಹೌದು. . ಒವಿಯಾ ಅವರು ಗೆಳೆಯನ ಜೊತೆ ಇದ್ದಾರೆ ಎನ್ನಲಾದ ಖಾಸಗಿ ವಿಡಿಯೋವೊಂದು ವೈರಲ್ ಆಗಿ ಸಂಚಲನ ಸೃಷ್ಟಿಸಿದೆ. ಇದು ತಿರುಚಿದ ವಿಡಿಯೋ ಎನ್ನುವ ಅನುಮಾನವಿದೆ. ಇನ್ಸ್ಟಾಗ್ರಾಂನಲ್ಲಿ ಒವಿಯಾ ತಮ್ಮ ಫೋಟೊ ಹಂಚಿಕೊಂಡಿದ್ದು, ಹಲವರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ.
ನೆಟ್ಟಿಗನೊಬ್ಬ 17 ಸೆಕೆಂಡ್ ಮಾತ್ರ ವಿಡಿಯೊ ಇದೆ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ದೀರ್ಘಾವಧಿ ವಿಡಿಯೋ ಸಿಗಬಹುದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಒವಿಯಾ ಮುಂದಿನ ಬಾರಿ ಸಹೋದರ ಎಂದು ಪ್ರತಿಕ್ರಿಯೆ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನೊಬ್ಬರ ಬಳಿ ಒವಿಯಾ ಅವರೇ ವಿಡಿಯೋ ಲಿಂಕ್ ಕೊಡಿ ಎಂದು ಕೇಳಿದ್ದಾರೆ. ಸದ್ಯ ಒವಿಯಾ ನೀಡಿರುವ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಖಾಸಗಿ ವೀಡಿಯೋಗಳು ರಿಲೀಸ್ ಆದಾಗ ನಟಿಯರು ನರ್ವಸ್ ಆಗಿ ‘ಇದು ನಾನಲ್ಲ, ಮಾರ್ಫ್ ಮಾಡಿದ್ದು’ ಎನ್ನುತ್ತಿರುತ್ತಾರೆ. ಆದರೆ ಓವಿಯಾ ವಿಡಿಯೋ ಬಗ್ಗೆ ಸಹಜವಾಗಿ ವರ್ತಿಸಿದ್ದು, ವಿಡಿಯೋ ನೋಡಿ ಎಂಜಾಯ್ ಮಾಡಿ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.
Leave a Comment