ಬಾಲಿವುಡ್​ ಡೈರೆಕ್ಟರ್​ ಜತೆ ರಿಷಬ್ ಶೆಟ್ಟಿ; ಐತಿಹಾಸಿಕ ಶಿವಾಜಿ ಪಾತ್ರದಲ್ಲಿ ಡಿವೈನ್ ಸ್ಟಾರ್

Chhatrapati Shivaji Maharaj
Spread the love

ನ್ಯೂಸ್ ಆ್ಯರೋ: ಸ್ಯಾಂಡಲ್​ವುಡ್​ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಕಾಂತಾರ ಮೂವಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ರಸ್ತುತ ಸಿನಿ ರಂಗದಲ್ಲಿ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದು ಹೇಳಬಹುದು. ಏಕೆಂದರೆ ಟಾಲಿವುಡ್​ ಬಳಿಕ ಇದೀಗ ಬಾಲಿವುಡ್​ನ ಬಿಗ್ ಬಜೆಟ್ ಸಿನಿಮಾ ಅವರನ್ನು ಅರಸಿ ಬಂದಿದ್ದು ಮಹಾರಾಜ ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯ ಮಾಡಲಿದ್ದಾರೆ.

ಬಾಲಿವುಡ್​ನ ಖ್ಯಾತ ನಿರ್ದೇಶಕರಾಗಿರುವ ಸಂದೀಪ್ ಸಿಂಗ್ ಅವರು ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಮೂವಿಗೆ ರಿಷಬ್ ಶೆಟ್ಟಿಯೇ ಸರಿ ಎಂದು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಎಲ್ಲ ಮಾತುಕತೆಗಳು ಮುಗಿದಿದ್ದು ರಿಷಬ್ ಶೆಟ್ಟಿ ಕೂಡ ಓಕೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಅವರು ತಮ್ಮ ಇನ್​ಸ್ಟಾದಲ್ಲಿ ಶಿವಾಜಿ ರೂಪದಲ್ಲಿ ರಿಷಬ್ ಶೆಟ್ಟಿಯವರ ಫೋಟೋವನ್ನು ಹಂಚಿಕೊಂಡಿದ್ದಾರೆ.

ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ ಎಂದು ಈ ಮೊದಲು ಹೇಳಲಾಗುತ್ತಿತ್ತು. ಆದರೆ ಸಿನಿಮಾಕ್ಕೆ ಯಾರು ಹೀರೋ, ಯಾವಾಗ ಬರುತ್ತದೆ, ಡೈರೆಕ್ಟರ್ ಯಾರು ಆಗಿರಬಹುದು ಎನ್ನುವ ಪ್ರಶ್ನೆಗಳು ಇದ್ದವು. ಸದ್ಯ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಾತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ತೆರೆ ಮೇಲೆ ಬರಲಿದ್ದಾರೆ. ತೆಲುಗಿನಲ್ಲಿ ಹನುಮಾನ್‌ ಸಿನಿಮಾ ಘೋಷಣೆ ಬೆನ್ನಲ್ಲೇ ರಿಷಬ್‌ ಅವರ ದಿ ಪ್ರೈಡ್‌ ಆಫ್‌ ಭಾರತ್‌ ಛತ್ರಪತಿ ಶಿವಾಜಿ ಮಹಾರಾಜ್‌ ಸಿನಿಮಾ ಘೋಷಣೆ ಆಗಿರುವುದು ಅಭಿಮಾನಿಗಳಿಗೆ ಸಂತಸ ಸಂಗತಿ.

ಇನ್ನು ನಿರ್ದೇಶಕ ಸಂದೀಪ್ ಸಿಂಗ್ ಅವರು ಮೇರಿ ಕೋಮ್, ಸರಬ್ಜಿತ್, ವೀರ್ ಸಾವರ್ಕರ್, ರಾಮ್​ಲೀಲಾ, ಬಾಜಿರಾವ್ ಮಸ್ತಾನಿ ಸೇರಿ ಕೆಲ ಹಿಂದಿ ಸಿನಿಮಾಗಳನ್ನು ಡೈರೆಕ್ಟ್ ಮಾಡಿ ಯಶಸ್ಸು ಕಂಡಿದ್ದಾರೆ. ಸದ್ಯ ಇವರ ಜೊತೆ ರಿಷಬ್ ಶೆಟ್ಟಿಯವರು ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!